
ನವದೆಹಲಿ(ಡಿ.27): ಚಿತ್ರಮಂದಿರಗಳಲ್ಲಿ ರಾಷ್ಟ್ರಗೀತೆ ಕಡ್ಡಾಯ ಮಾಡಿರುವುದು ಮೂರ್ಖತನದ ನಿರ್ಧಾರ ಎಂದು ಇತಿಹಾಸಕಾರ ಎಂಜಿಎಸ್ ನಾರಾಯಣನ್ ಹೇಳಿದ್ದಾರೆ.
‘‘ಸುಪ್ರೀಂ ಕೋರ್ಟ್'ನ ಈ ತೀರ್ಪು ಅವಿವೇಕದಿಂದ ಕೂಡಿದ್ದು, ರಾಷ್ಟ್ರೀಯವಾದವನ್ನು ಹೇರುವಂಥ ಪ್ರಯತ್ನ ಯಾವತ್ತೂ ಸಫಲವಾಗುವುದಿಲ್ಲ. ಇದು ಖಂಡಿತಾ ಸೋಲುತ್ತದೆ,’’ ಎಂದಿದ್ದಾರೆ ಐತಿಹಾಸಿಕ ಸಂಶೋಧನೆಗೆ ಸಂಬಂಧಿಸಿದ ಭಾರತೀಯ ಮಂಡಳಿ(ಐಸಿಎಚ್‌ಆರ್) ಮಾಜಿ ಅಧ್ಯಕ್ಷರೂ ಆಗಿರುವ ನಾರಾಯಣನ್.
‘‘ಮನರಂಜನೆಗಾಗಿ ಚಿತ್ರಮಂದಿರಕ್ಕೆ ಬರುವವರಿಗೆ ರಾಷ್ಟ್ರೀಯವಾದವನ್ನು ಹೇರುವುದು ಸರಿಯಲ್ಲ. ಭಾರತವನ್ನು ದೇಶ ಎನ್ನಲಾಗದು. ಅದು ರಾಷ್ಟ್ರೀಯತೆಗಳ ಒಕ್ಕೂಟ. ದೇಶಭಕ್ತಿಯು ಸಹಜವಾಗಿ ಹುಟ್ಟಬೇಕೇ ಹೊರತು ಹೇರುವುದು ಒಳ್ಳೆಯ ಬೆಳವಣಿಗೆಯಲ್ಲ,’’ ಎಂದೂ ನಾರಾಯಣನ್ ಹೇಳಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.