ಗುರು ಗಂಭೀರ್​​​ಗೆ ಬೆಂಚ್​​ ಕಾಯಿಸಿದ ಶಿಷ್ಯ ಕೊಹ್ಲಿ, ನಂಬಿಕೆ ಉಳಿಸಿಕೊಳ್ಳದ ಸ್ನೇಹಿತ ಶಿಖರ್

Published : Sep 30, 2016, 06:45 AM ISTUpdated : Apr 11, 2018, 12:41 PM IST
ಗುರು ಗಂಭೀರ್​​​ಗೆ ಬೆಂಚ್​​ ಕಾಯಿಸಿದ ಶಿಷ್ಯ ಕೊಹ್ಲಿ, ನಂಬಿಕೆ ಉಳಿಸಿಕೊಳ್ಳದ ಸ್ನೇಹಿತ ಶಿಖರ್

ಸಾರಾಂಶ

ಕೊಲ್ಕತ್ತಾ(ಸೆ.30): ಟೀಮ್ ಇಂಡಿಯದಿಂದ ಹಲವು ದಿನಗಳಿಂದ ದೂರ ಉಳಿದ್ದಿದ್ದ ಗುರು ಗಂಭೀರ್​​​ಗೆ ಸ್ಥಾನ ನೀಡುವುದೋ, ಇಲ್ಲ ಸ್ನೇಹಿತ ಶಿಖರ್'ಗೆ ಅವಕಾಶ ಕೊಡುವುದೋ ಎಂಬ ಗೊಂದಲದಲ್ಲಿದ್ದ ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ತಮ್ಮ ಆಯ್ಕೆಯನ್ನು ಸಮರ್ಥಿಸಿಕೊಳ್ಳಲು ವಿಫಲರಾಗಿದ್ದಾರೆ. 

ಎಲ್ಲರೂ ಆಶ್ಚರ್ಯಕ್ಕೊಳಗಾಗುವಂತೆ ಗಂಭೀರ್ ಬದಲು ಸ್ಥಾನ ಅಂತಿಮ 11ರೊಳಗೆ ಸೇರಿಕೊಂಡಿದ್ದ ಶಿಖರ್​​​ ನಾಯಕನ ನಂಬಿಕೆಯನ್ನು ಉಳಿಸಿಕೊಳ್ಳಲಿಲ್ಲ. ಹೌದು, ಕೊಹ್ಲಿ ಲೆಕ್ಕಾಚಾರವನ್ನು ಧವನ್​ ಉಲ್ಟಾ ಮಾಡಿದ್ದಾರೆ. ಹೊಸ ಬಾಲ್​ ಎದುರಿಸುವಲ್ಲಿ ವಿಫಲರಾದ ಅವರು, ದೊಡ್ಡ ಓಪನಿಂಗ್​​ ಇರಲಿ ಸಾಧಾರಣ ಆರಂಭವನ್ನೂ ತಂಡಕ್ಕೆ ತಂದ್ಕೊಡಲಿಲ್ಲ. ಕೇವಲ 1 ರನ್​​ಗಳಿಗೆ ನಿರ್ಗಮಿಸಿದರು.  

ಗಂಭೀರ್​​​ಗೆ ಬೆಂಚ್​​ ಕಾಯಿಸಿದ ಕೊಹ್ಲಿ ! 
ಗಂಭೀರ್​​​ ಬೆಂಚ್​​​ ಕಾಯುವಂತೆ ಮಾಡಿದ್ದು ವಿರಾಟ್​​​. ರಾಹುಲ್​ ಗಾಯಾಳುವಾಗ್ತಿದ್ದಾಗೆಯೇ ಕೋಚ್​​ ಅನಿಲ್​​ ಕುಂಬ್ಳೆ ಸಲಹೆ ಮೇರೆಗೆ ಬಿಸಿಸಿಐ ಗೌತಿಗೆ ಬುಲಾವ್​​ ನೀಡಿತ್ತು.

ಮತ್ತೋರ್ವ ಆರಂಭಿಕ ಶಿಖರ್​​ ಧವನ್​​ ಅದಾಗಲೇ ತಂಡದಲ್ಲಿದ್ದರೂ ಗಂಭೀರ್​​​ಗೆ 2 ವರ್ಷಗಳ ಬಳಿಕ ತಂಡದಲ್ಲಿ ಸ್ಥಾನ ಕಲ್ಪಿಸಿಕೊಟ್ಟಿದ್ದರು ಕೊಹ್ಲಿ ಗೌತಿಯನ್ನು ತಂಡದಲ್ಲಿ ಸೇರಿಸಿಕೊಳ್ಳದೆ ತಪ್ಪು ಮಾಡಿದ್ದಾರೆ. 

ದೇಸಿ ಟೂರ್ನಿಗಳಲ್ಲಿ ಭರ್ಜರಿ ಬ್ಯಾಟಿಂಗ್​​ ಮಾಡಿದ್ದ ಗಂಭೀರ್, ದುಲೀಪ್​​ ಟ್ರೋಫಿಯಲ್ಲಿಯೂ ಮಿಂಚಿದ್ದರು. ಅದ್ಭುತ ಫಾರ್ಮ್​​ನಲ್ಲಿದ್ದ ಅವ್ರ ಲಯಬದ್ಧವಾದ ಆಟ ತಂಡಕ್ಕೆ ಉಪಯೋಗವಾಗಲಿ ಅನ್ನೋದು ಎಲ್ಲರ ಆಲೋಚನೆಯಾಗಿತ್ತು. ಆದ್ರೆ, ವಿರಾಟ್​​​ ಮಾತ್ರ ಇದನ್ನು ನಿರ್ಲಕ್ಷಿಸಿ ತಪ್ಪು ಮಾಡಿದ್ದಾರೆ.  


 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಸ್ವಂತ ಖರ್ಚಿನಲ್ಲಿ 24 ವಿದ್ಯಾರ್ಥಿಗಳಿಗೆ ವಿಮಾನ ಪ್ರಯಾಣ: ಶಿಕ್ಷಕ ಬೀರಪ್ಪ ಅಂಡಗಿ ಮಾದರಿ ಕಾರ್ಯ
ಮೈಸೂರು ಅರಮನೆ ಬಳಿ ಹೀಲಿಯಂ ಸಿಲಿಂಡರ್‌ ಸ್ಫೋಟ: ಎನ್‌ಐಎ ಭೇಟಿ, ತನಿಖೆ ತೀವ್ರ