ಬದಲಾಗಲಿದೆ ನ್ಯೂಕ್ಲಿಯರ್ ನೋ ಫಸ್ಟ್ ಪಾಲಿಸಿ?:ರಾಜನಾಥ್ ಹೇಳಿಕೆಗೆ ಪಾಕ್ ಕಸಿವಿಸಿ!

Published : Aug 16, 2019, 03:13 PM ISTUpdated : Aug 16, 2019, 07:45 PM IST
ಬದಲಾಗಲಿದೆ ನ್ಯೂಕ್ಲಿಯರ್ ನೋ ಫಸ್ಟ್ ಪಾಲಿಸಿ?:ರಾಜನಾಥ್ ಹೇಳಿಕೆಗೆ ಪಾಕ್ ಕಸಿವಿಸಿ!

ಸಾರಾಂಶ

ಬದಲಾಗಲಿದೆ ಭಾರತದ ಅಣುಬಾಂಬ್ ಬಳಕೆ ನೀತಿ?| ನೋ ಫಸ್ಟ್ ಪಾಲಿಸಿ ನೀತಿಯ ಪುನರ್ ಪರಿಶೀಲನೆಗೆ ಕೇಂದ್ರ ಚಿಂತನೆ| ಮೊದಲು ಬಳಸುವುದಿಲ್ಲ ನೀತಿ ಪುನರ್ ಪರಿಶೀಲಿಸುವುದಾಗಿ ಕೇಂದ್ರ ರಕ್ಷಣಾ ಸಚಿವರ ಘೋಷಣೆ| ಪರಿಸ್ಥಿತಿಗೆ ತಕ್ಕಂತೆ ನೀತಿಯಲ್ಲಿ ಬದಲಾವಣೆ ತರಲು ಸಿದ್ಧ ಎಂದ ರಾಜನಾಥ್ ಸಿಂಗ್|

ನವದೆಹಲಿ(ಆ.16): ಅಣುಬಾಂಬ್ ಬಳಕೆಯ ಕುರಿತು ಭಾರತ ಪಾಲಸಿಕೊಂಡು ಬಂದಿದ್ದ ನೋ ಫಸ್ಟ್ ಪಾಲಿಸಿ(ಮೊದಲು ಬಳಸುವುದಿಲ್ಲ)ಯನ್ನು ಪುನರ್ ಅವಲೋಕನ ಮಾಡಲಾಗುವುದು ಎಂದು ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಹೇಳಿದ್ದಾರೆ.

"

ರಾಜಸ್ಥಾನದ ಪೋಕ್ರಾನ್'ನಲ್ಲಿ ಮಾತನಾಡಿದ ರಾಜನಾಥ್ ಸಿಂಗ್, ಅಣುಬಂಬ್'ಗೆ ಸಂಬಂದಿಸಿದಂತೆ ಭಾರತ ಅಳವಡಿಸಿಕೊಂಡಿರುವ ನೋ ಫಸ್ಟ್ ಪಾಲಿಸಿ ನೀತಿಯನ್ನು ಪುನರ್ ಪರಿಶೀಲನೆ ಮಾಡಲಾಗವುದು ಎಂದು ಹೇಳಿದ್ದಾರೆ.

ಭವಿಷ್ಯದಲ್ಲಿ ಉದ್ಭವವಾಗುವ ಪರಿಸ್ಥಿತಿಯನ್ನು ಅವಲೋಕಿಸಿ ನೋ ಫಸ್ಟ್ ಪಾಲಿಸಿ ನೀತಿಯಲ್ಲಿ ಬದಲಾವಣೆ ತರಲಾಗುವುದು ಎಂದು ರಕ್ಷಣಾ ಸಚಿವರು ಮಾಹಿತಿ ನೀಡಿದರು. ಸದ್ಯ ಮೊದಲು ಬಳಸುವುದಿಲ್ಲ ನೀತಿಯೇ ಮುಂದುವರೆಯಲಿದ್ದು, ದೇಶದ ಭದ್ರತೆ ಮೇಲೆ ಗಂಡಾಂತರ ಎದುರಾದರೆ ಆಗ ಪರಿಸ್ಥಿತಿ ಅವಲೋಕಿಸಿ ನಿರ್ಧಾರ ಕೈಗೊಳ್ಳಲಾಗುವುದು ಎಂದು ಅವರು ಸ್ಪಷ್ಟಪಡಿಸಿದರು.

ಇನ್ನು ರಕ್ಷಣಾ ಸಚಿವರ ಈ ಘೋಷಣೆಯಿಂದ ನೆರೆಯ ಪಾಕಿಸ್ತಾನ ಹಾಗೂ ಚೀನಾಗೆ ಪರೋಕ್ಷ ಎಚ್ಚರಿಕೆಯ ಸಂದೇಶ ರವಾನೆಯಾಗಿದ್ದು, 370ನೇ ವಿಧಿ ರದ್ದತಿ ವಿಚಾರದಲ್ಲಿ ಭಾರತವನ್ನು ಕೆಣಕುತ್ತಿರುವ ಪಾಕಿಸ್ತಾನ ಇದೀಗ ಬೆವತಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಕೆಲಸ ಇಲ್ಲದ ಗಂಡನಿಗೆ ಪತ್ನಿ ಶೀಲದ ಮೇಲೆ ಶಂಕೆ: ನಿದ್ರೆಯಲ್ಲಿದ್ದ ಮಗಳ ಕತ್ತು ಸೀಳಿದ ಪತಿ
ಹಾವೇರಿ: ಮತ್ತೆ ಮುನ್ನಲೆಗೆ ಬಂದ ಹಿಜಾಬ್ VS ಕೇಸರಿ ವಿವಾದ: ಕಾಲೇಜಿನಲ್ಲಿ ವಿದ್ಯಾರ್ಥಿಗಳು ಪರಸ್ಪರ ಸವಾಲು!