
ನವದೆಹಲಿ : ಭಾರತದಲ್ಲಿ ಬಡತನದ ಪ್ರಮಾಣ ಇಳಿಕೆಯಾಗಿದ್ದು ಕಳೆದ ಒಂದು ದಶಕದಲ್ಲಿ ಇದೊಂದು ಭಾರತೀಯರ ಪಾಲಿಗೆ ದಕ್ಕಿದ ಗುಡ್ ನ್ಯೂಸ್ ಆಗಿದೆ.
2005 - 06 ರಿಂದ 2015 - 16ರ ಅವಧಿಯಲ್ಲಿ 271 ಮಿಲಿಯನ್ ಜನರು ಬಡತನ ರೇಖೆಯಿಂದ ಹೊರಕ್ಕೆ ಬಂದಿದ್ದಾರೆ.
ಈ ಮೂಲಕ ದೇಶದ ಬಡತನ ಮಟ್ಟದಲ್ಲಿ ಇಳಿಕೆಯಾಗಿದೆ. ಶೇ.55ರಷ್ಟು ಪ್ರಮಾಣದ ದೇಶದ ಬಡತನ ಪ್ರಮಾಣವು ಶೇ.28ಕ್ಕೆ ಕುಸಿದಿದೆ.
ಆದರೆ ಕೆಲವೊಂದು ರಾಜ್ಯಗಳಲ್ಲಿ ಇನ್ನೂ ಕೂಡ ಹೆಚ್ಚಿನ ಬಡತನವಿದೆ. ಆದರೆ ಕೆಲವೊಂದು ರಾಜ್ಯಗಳು ಉತ್ತಮ ಮಟ್ಟದಲ್ಲಿವೆ. ಕೇರಳ ರಾಜ್ಯದ ಜೀವನ ಮಟ್ಟ ಉತ್ತಮವಾಗಿದ್ದು, ಬಿಹಾರದಂತಹ ರಾಜ್ಯಗಳು ಇನ್ನೂ ಕೂಡ ಬಡತನದಂತಹ ಭೀಕರ ಸಮಸ್ಯೆಗಳನ್ನು ಎದುರಿಸುತ್ತಿವೆ ಎನ್ನಲಾಗಿದೆ.
ಈ ಬಗ್ಗೆ ವಿಶ್ವ ಸಂಸ್ಥೆ ಸಮೀಕ್ಷೆಯನ್ನು ನಡೆಸಿದ್ದು, ಈ ಮೂಲಕ ಬಡತನದ ಪ್ರಮಾಣವನ್ನು ಅಳತೆ ಮಾಡಲಾಗಿದೆ. ಸಮೀಕ್ಷೆಗೆ ಶಿಕ್ಷಣದ ಮಟ್ಟ, ಆರೋಗ್ಯ, ಜೀವನ ಮಟ್ಟವನ್ನು ಪರಿಗಣನೆಗೆ ತೆಗೆದುಕೊಳ್ಳಲಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.