10ರಲ್ಲಿ 7 ಭಾರತೀಯರಿಂದ ಲಂಚ ಪಾವತಿ : ಟ್ರಾನ್ಸ್ಪರೆನ್ಸಿ ಇಂಟರ್ನ್ಯಾಷನಲ್ ವರದಿ

Published : Mar 07, 2017, 06:25 PM ISTUpdated : Apr 11, 2018, 01:00 PM IST
10ರಲ್ಲಿ 7 ಭಾರತೀಯರಿಂದ ಲಂಚ ಪಾವತಿ : ಟ್ರಾನ್ಸ್ಪರೆನ್ಸಿ ಇಂಟರ್ನ್ಯಾಷನಲ್ ವರದಿ

ಸಾರಾಂಶ

ಸಾರ್ವಜನಿಕರಿಂದ ಲಂಚ ಪಡೆಯುವುದರಲ್ಲಿ ಪೊಲೀಸರು ಮುಂದಿದ್ದರೆ, ಧಾರ್ಮಿಕ ನಾಯಕರೇನು ಹಿಂದೆ ಬಿದ್ದಿಲ್ಲ. ಧಾರ್ಮಿಕ ನಾಯಕರೂ ಭ್ರಷ್ಟರು ಎಂದು ಶೇ.71 ಮಂದಿ ಹೇಳಿದ್ದಾರೆ ಎಂದು ಟ್ರಾನ್ಸ್‌ಪರೆನ್ಸಿ ಇಂಟರ್‌ನ್ಯಾಷನಲ್ ಸಂಸ್ಥೆ ಸಿದ್ಧಪಡಿಸಿರುವ ಸಮೀಕ್ಷಾ ವರದಿ ತಿಳಿಸಿದೆ.

ನವದೆಹಲಿ/ಬರ್ಲಿನ್(ಮಾ.07): ಭ್ರಷ್ಟಾಚಾರವನ್ನು ಬುಡಸಮೇತ ಕಿತ್ತು ಹಾಕುವ ಮಾತುಗಳನ್ನು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಆಡುತ್ತಿದ್ದರೂ, ಆ ಪಿಡುಗಿಗೆ ಏನೂ ಆಗಿಲ್ಲ ಎಂಬುದಕ್ಕೆ ಮತ್ತೊಂದು ನಿದರ್ಶನ ಸಿಕ್ಕಿದೆ. ಭಾರತದಲ್ಲಿ ಸರ್ಕಾರಿ ಸೇವೆ ಪಡೆವ ಪ್ರತಿ 10 ಮಂದಿಯಲ್ಲಿ ಏಳು ಮಂದಿ ಲಂಚ ಪಾವತಿಸಿರುತ್ತಾರೆ ಎಂದು ವರದಿಯೊಂದು ಹೇಳಿದೆ. ವಿಶೇಷವೆಂದರೆ, ಏಷ್ಯಾ ಪೆಸಿಫಿಕ್ ವಲಯದ 16 ರಾಷ್ಟ್ರಗಳ ಪೈಕಿ ಲಂಚಾವತಾರದಲ್ಲಿ ಭಾರತವೇ ಅಗ್ರಸ್ಥಾನದಲ್ಲಿದೆ.

ಸಾರ್ವಜನಿಕರಿಂದ ಲಂಚ ಪಡೆಯುವುದರಲ್ಲಿ ಪೊಲೀಸರು ಮುಂದಿದ್ದರೆ, ಧಾರ್ಮಿಕ ನಾಯಕರೇನು ಹಿಂದೆ ಬಿದ್ದಿಲ್ಲ. ಧಾರ್ಮಿಕ ನಾಯಕರೂ ಭ್ರಷ್ಟರು ಎಂದು ಶೇ.71 ಮಂದಿ ಹೇಳಿದ್ದಾರೆ ಎಂದು ಟ್ರಾನ್ಸ್‌ಪರೆನ್ಸಿ ಇಂಟರ್‌ನ್ಯಾಷನಲ್ ಸಂಸ್ಥೆ ಸಿದ್ಧಪಡಿಸಿರುವ ಸಮೀಕ್ಷಾ ವರದಿ ತಿಳಿಸಿದೆ.

ಬರ್ಲಿನ್‌ನಲ್ಲಿ ಬಿಡುಗಡೆಯಾಗಿರುವ ಈ ವರದಿಯನ್ನು ಏಷ್ಯಾ- ಪೆಸಿಫಿಕ್ ವಲಯದ 16 ದೇಶಗಳಲ್ಲಿ 22 ಸಾವಿರ ಮಂದಿಯನ್ನು ಸಂದರ್ಶಿಸಿ ಸಿದ್ಧಪಡಿಸಲಾಗಿದೆ. ಭಾರತದಲ್ಲಿ ಪ್ರತಿ 10 ಮಂದಿಯಲ್ಲಿ ಏಳು ಮಂದಿಯಲ್ಲಿ ಲಂಚ ಪಾವತಿಸಿದರೆ, ಎರಡನೇ ಸ್ಥಾನದಲ್ಲಿರುವ ವಿಯೆಟ್ನಾಂನಲ್ಲಿ ಸರ್ಕಾರಿ ಸೇವೆ ಪಡೆಯಲು ಶೇ.65ರಷ್ಟು ಮಂದಿ ಲಂಚ ನೀಡುತ್ತಾರೆ. ಸಮೀಕ್ಷೆ ನಡೆದ 16 ದೇಶಗಳ ಒಟ್ಟಾರೆ ಜನರ ಪೈಕಿ 90 ಕೋಟಿ ಅಥವಾ ಮೂರನೇ ಒಂದರಷ್ಟು ಮಂದಿ ಲಂಚ ಕೊಟ್ಟಿದ್ದಾರೆ. ಜಪಾನ್‌ನ ಕೇವಲ ಶೇ.0.2ರಷ್ಟು ಮಂದಿ ಮಾತ್ರ ಲಂಚ ಕೊಟ್ಟಿದ್ದಾಗಿ ಹೇಳಿಕೊಂಡಿದ್ದಾರೆ ಎಂದು ವರದಿ ತಿಳಿಸಿದೆ.

ಭಾರತ, ಪಾಕಿಸ್ತಾನ, ಥಾಯ್ಲೆಂಡ್‌ನಂತಹ ದೇಶಗಳಲ್ಲಿ ಬಡವರ್ಗದ ಜನರಿಗೆ ಭ್ರಷ್ಟಾಚಾರದಿಂದ ಸಮಸ್ಯೆಯಾಗುತ್ತಿದ್ದರೆ, ಚೀನಾದಂತಹ ದೇಶಗಳಲ್ಲಿ ಶ್ರೀಮಂತರಿಗೆ ಲಂಚ ಬಿಸಿ ತಟ್ಟಿದೆ ಎಂದು ಹೇಳಿದೆ.

ಪೊಲೀಸರೇ ನಂಬರ್ 1:

ಪೊಲೀಸರು ಲಂಚ ಪಡೆಯುತ್ತಾರೆ ಎಂದು ಶೇ.85ರಷ್ಟು ಮಂದಿ ಹೇಳಿದ್ದರೆ, ಸರ್ಕಾರಿ ಅಕಾರಿಗಳು ಲಂಚ ಕೇಳುತ್ತಾರೆ ಎಂದು ಶೇ.84ರಷ್ಟು ಮಂದಿ ತಿಳಿಸಿದ್ದಾರೆ. ಮೂರನೇ ಸ್ಥಾನದಲ್ಲಿ ಉದ್ಯಮಪತಿಗಳು ಇದ್ದಾರೆ. ಅವರು ಲಂಚದಾಹಿಗಳಾಗಿದ್ದಾರೆ ಎಂದು ಸಮೀಕ್ಷೆಯಲ್ಲಿ ಪಾಲ್ಗೊಂಡ ಶೇ.79 ಮಂದಿ ತಿಳಿಸಿದ್ದಾರೆ. ನಾಲ್ಕನೇ ಸ್ಥಾನದಲ್ಲಿ ಸ್ಥಳೀಯ ಕೌನ್ಸಿಲರ್‌ಗಳು (ಶೇ.78), ಐದನೇ ಸ್ಥಾನದಲ್ಲಿ ಸಂಸದರು (ಶೇ.76), ಆರನೇ ಸ್ಥಾನದಲ್ಲಿ ತೆರಿಗೆ ಅಕಾರಿಗಳು (ಶೇ.74) ಹಾಗೂ ಏಳನೇ ಸ್ಥಾನದಲ್ಲಿ ಧಾರ್ಮಿಕ ನಾಯಕರು ಮತ್ತು ಎಂಟನೇ ಸ್ಥಾನದಲ್ಲಿ ನಾಯಾೀಶರು- ಮ್ಯಾಜಿಸ್ಟ್ರೇಟ್‌ಗಳು (ಶೇ.66) ಇದ್ದಾರೆ ಎಂದು ವರದಿ ಹೇಳುತ್ತದೆ.

ಸಾರ್ವಜನಿಕ ಶಾಲೆ, ಸಾರ್ವಜನಿಕ ಆಸ್ಪತ್ರೆ, ಗುರುತಿನ ಚೀಟಿ, ಪರ್ಮಿಟ್, ಸಾರ್ವಜನಿಕ ಸೇವೆ, ಪೊಲೀಸ್ ಇಲಾಖೆಗಳಿಂದ ಸೇವೆ ಪಡೆಯಲು ಜನರು ಲಂಚ ನೀಡುತ್ತಾರೆ. ನ್ಯಾಯಾಲಯಗಳಲ್ಲಿ ಲಂಚದ ಪ್ರಮಾಣ ತುಂಬಾ ಕಡಿಮೆ ಎಂದು ತಿಳಿಸಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಮತಚೋರಿ ವಿರುದ್ಧ ದಿಲ್ಲೀಲಿಂದು ಕಾಂಗ್ರೆಸ್‌ ಬೃಹತ್‌ ಆಂದೋಲನ: ಖರ್ಗೆ, ರಾಹುಲ್‌, ಸಿದ್ದು, ಡಿಕೆಶಿ ಭಾಗಿ
ಮೋದಿ, ಆರ್‌ಸಿ ಮೋಡಿ.. ಕೇರಳದಲ್ಲಿ ಮೊದಲ ಸಲ ಪಾಲಿಕೆ ಚುನಾವಣೇಲಿ ಬಿಜೆಪಿ ಜಯಭೇರಿ