ಇಂಡಿಯಾ ಗೇಟ್: ಬಿಜೆಪಿಗೆ ಪ್ರಶಾಂತ್ ಕಿಶೋರ್ ಕಮ್’ಬ್ಯಾಕ್..!

By Suvarna NewsFirst Published Jul 17, 2018, 1:29 PM IST
Highlights

2019ರ ಲೋಕಸಭೆ ಚುನಾವಣೆಗೆ 6 ತಿಂಗಳ ಮುಂಚೆಯೇ ಪ್ರಶಾಂತ್ 5 ವಾರ್ ರೂಮ್‌ಗಳನ್ನು ಆರಂಭಿಸಲಿದ್ದಾರೆ. ಐಐಟಿ ಮತ್ತು ಐಐಎಂಗಳಿಂದ ಒಂದು ವಾರ್‌ರೂಮ್‌ಗೆ ತಲಾ 300ರಂತೆ ಸಿಬ್ಬಂದಿ ನೇಮಿಸಿಕೊಳ್ಳಲು ಪ್ರಶಾಂತ್ ಕಿಶೋರ್ ಅವರ ಐಪ್ಯಾಕ್ ಸಂಸ್ಥೆ ನೀಲಿನಕ್ಷೆ ರೂಪಿಸಿ ಅಮಿತ್ ಶಾಗೆ ಕಳುಹಿಸಿದೆ.

ನವದೆಹಲಿ[ಜು.17]: 2014ರ ಲೋಕಸಭೆ ಚುನಾವಣೆಯಲ್ಲಿ ಮೋದಿಯವರ ಪ್ರಚಾರದ ಹೊಣೆ ವಹಿಸಿಕೊಂಡಿದ್ದ ಪ್ರಶಾಂತ್ ಕಿಶೋರ್ ಮತ್ತೊಮ್ಮೆ ಮೋದಿ ತಂಡಕ್ಕೆ ವಾಪಸ್ ಆಗಲು ಅಮಿತ್ ಶಾ ಒಪ್ಪಿದ್ದಾರೆ.

2019ರ ಲೋಕಸಭೆ ಚುನಾವಣೆಗೆ 6 ತಿಂಗಳ ಮುಂಚೆಯೇ ಪ್ರಶಾಂತ್ 5 ವಾರ್ ರೂಮ್‌ಗಳನ್ನು ಆರಂಭಿಸಲಿದ್ದಾರೆ. ಐಐಟಿ ಮತ್ತು ಐಐಎಂಗಳಿಂದ ಒಂದು ವಾರ್‌ರೂಮ್‌ಗೆ ತಲಾ 300ರಂತೆ ಸಿಬ್ಬಂದಿ ನೇಮಿಸಿಕೊಳ್ಳಲು ಪ್ರಶಾಂತ್ ಕಿಶೋರ್ ಅವರ ಐಪ್ಯಾಕ್ ಸಂಸ್ಥೆ ನೀಲಿನಕ್ಷೆ ರೂಪಿಸಿ ಅಮಿತ್ ಶಾಗೆ ಕಳುಹಿಸಿದೆ. ಪ್ರತಿ ಕ್ಷೇತ್ರದ ಪ್ರಚಾರ, ಸೋಶಿಯಲ್ ಮೀಡಿಯಾ, ಮೋದಿ ಇಮೇಜ್ ಎಲ್ಲವನ್ನೂ ಪಿ ಕೆ ಟೀಮ್ ನೋಡಿಕೊಳ್ಳಲಿದೆಯಂತೆ. ಅಮಿತ್ ಶಾ ಇದೆಲ್ಲದರ ಜೊತೆ ಮುಖ್ಯವಾಗಿ ದಲಿತರ ಮಧ್ಯೆ ಬಿಜೆಪಿ ಇಮೇಜ್ ಸುಧಾರಿಸಿಕೊಳ್ಳಲು ತಂತ್ರ ರೂಪಿಸುವಂತೆ ಪಿ.ಕೆ.ಗೆ ಸೂಚಿಸಿದ್ದು, ಇದಕ್ಕಾಗಿ ಕೂಡ ಯೋಜನೆ ರೂಪಿತವಾಗುತ್ತಿದೆ. 

Latest Videos

ಯಾವ ಕ್ಷೇತ್ರಕ್ಕೆ ಮೋದಿ ಹೋದರೆ ಲಾಭ ಹೆಚ್ಚು, ಅಲ್ಲಿ ಏನು ಮಾತಾಡಬೇಕು, ಯಾವ ವ್ಯಕ್ತಿಗಳ ಹೆಸರು ಪ್ರಸ್ತಾಪಿಸಬೇಕು ಎಂಬ ರೀತಿಯ ಪ್ರಚಾರದ ಹೊಣೆಯನ್ನು 2014ರಲ್ಲಿ ಹೊತ್ತುಕೊಂಡಿದ್ದ ಪ್ರಶಾಂತ್ ಕಿಶೋರ್ ನಂತರ ಅಮಿತ್ ಶಾ ಜೊತೆ ಹೊಂದಾಣಿಕೆ ಆಗದೆ ದೂರ ಸರಿದಿದ್ದರು. ಇನ್ನೊಂದು ವಿಚಾರ ಎಂದರೆ, ಆಂಧ್ರದಲ್ಲಿ ಜಗನ್ ರೆಡ್ಡಿಯ ಪ್ರಚಾರದ ಹೊಣೆಯನ್ನು ಕೂಡ ಪ್ರಶಾಂತ್ ಕಿಶೋರ್ ತೆಗೆದುಕೊಂಡಿದ್ದು, ಚುನಾವಣೆ ನಂತರ ಜಗನ್ ಅವರು ಮೋದಿಯ ಬೆಂಬಲಕ್ಕೆ ನಿಲ್ಲಬಹುದು ಎಂಬ ಸುದ್ದಿಗೂ ಗ್ರಾಸವಾಗಿದೆ.

[ಕನ್ನಡಪ್ರಭ : ಪ್ರಶಾಂತ್ ನಾತು ಅವರ ಇಂಡಿಯಾ ಗೇಟ್ ಅಂಕಣದ ಆಯ್ದ ಭಾಗ ]  

click me!