
ನವದೆಹಲಿ (ಮಾ. 20): ತಮ್ಮದೇ ಸೂಚನೆಯ ಮೇಲೆ ಹೋರಾಟಕ್ಕೆ ಧುಮುಕಿದ್ದ ಎಂ.ಬಿ ಪಾಟೀಲ್ ಮತ್ತವರ ಜೊತೆಗಾರರ ಮಾತು ಕೇಳಿ ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರತ್ಯೇಕ ಧರ್ಮಕ್ಕೆ ಅಸ್ತು ಎಂದಿದ್ದಾರಾದರೂ
ದೆಹಲಿ ಹೈಕಮಾಂಡ್ ನಾಯಕರು ಮಾತ್ರ ಸ್ವಲ್ಪ ಕಸಿವಿಸಿಗೊಂಡಿರುವುದು ನಿಜ.
ಬಿಜೆಪಿ ದಲಿತ ಮತಬ್ಯಾಂಕ್ ಒಡೆಯಲು ಯತ್ನಿಸಿದಂತೆ ತಾವೂ ಬಿಜೆಪಿಯ ಲಿಂಗಾಯತ ವೋಟ್'ಬ್ಯಾಂಕ್ ಒಡೆದರೆ ಕಾಂಗ್ರೆಸ್ ಗೆಲ್ಲೋದು ಸುಲಭ ಎಂಬ ತರ್ಕವನ್ನು ಮುಂದಿಟ್ಟಿರುವ ರಾಜ್ಯದ ಕೆಲ ಕೈ ನಾಯಕರು, ರಾಹುಲ್'ರನ್ನು ಒಪ್ಪಿಸಿರುವುದೂ ನಿಜ. ಆದರೆ ಗುಜರಾತ್‌ನಲ್ಲಿ ಪಟೇಲರಿಗೆ ಮೀಸಲಾತಿ ಕೊಡಲು ಹೋಗಿ ಉಳಿದವರ ವಿರುದ್ಧ ನಿಂತು ಗೆಲ್ಲುವ ಪಂದ್ಯ ಸೋಲುವ ಹಾಗೆ ಆಯಿತು. ಈಗ ಕರ್ನಾಟಕದಲ್ಲೂ ಆಗಬಾರದು ಎಂದು ರಾಹುಲ್ ಹೇಳಿ ಕಳುಹಿಸಿದ್ದಾರೆ. ಅಂದ ಹಾಗೆ ಮಲ್ಲಿಕಾರ್ಜುನ ಖರ್ಗೆ, ಟಿ.ಬಿ ಜಯಚಂದ್ರ, ಶಾಮನೂರು ಶಿವಶಂಕರಪ್ಪ, ಎಚ್.ಕೆ ಪಾಟೀಲ್, ವೀರಪ್ಪ ಮೊಯ್ಲಿ, ಆಸ್ಕರ್ ಫರ್ನಾಂಡಿಸ್ ಎಲ್ಲರೂ ಹೋಗಿ ರಾಹುಲ್ ಬಳಿ ಧರ್ಮ ಒಡೆದರೆ ರಾಜಕೀಯ ಲಾಭ ಆಗೋದಿಲ್ಲ ಎಂದು ಹೇಳಿದ್ದಾರೆ. ಆದರೂ, ಸಿಎಂ ಸಿದ್ದು ಮಾತ್ರ ಈಗ ಹಿಂದೆ ಸರಿದರೆ ಇನ್ನೂ ದೊಡ್ಡ ನಷ್ಟವಾಗಬಹುದು ಎಂದು ಹೇಳಿ ಚುನಾವಣಾ ಲಾಭದ ಗಂಟು ತೋರಿಸಿ ‘ಎಸ್’ ಅನ್ನಿಸಿದ್ದಾರೆ.
-ಪ್ರಶಾಂತ್ ನಾತು
ರಾಜಕಾರಣದ ಕುತೂಹಲಕಾರಿ ಮಾಹಿತಿಗೆ ಇಂಡಿಯಾ ಗೇಟ್ ಕ್ಲಿಕ್ ಮಾಡಿ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.