ಇಮ್ರಾನ್‌ ಹೇಳಿಕೆಗೆ ಭಾರತ ಖಂಡನೆ

Published : Nov 29, 2018, 07:50 AM IST
ಇಮ್ರಾನ್‌ ಹೇಳಿಕೆಗೆ ಭಾರತ ಖಂಡನೆ

ಸಾರಾಂಶ

ಜಮ್ಮು-ಕಾಶ್ಮೀರ ಭಾರತದ ಅವಿಭಾಜ್ಯ ಅಂಗವಾಗಿದ್ದು, ಈ ವಿಷಯದ ಬಗ್ಗೆ ಸೂಕ್ತವಲ್ಲದ ವೇದಿಕೆಯಲ್ಲಿ ಇಮ್ರಾನ್‌ ಮಾತನಾಡಿದ್ದು ಖಂಡನಾರ್ಹ’ ಎಂದು ಭಾರತದ ವಿದೇಶಾಂಗ ಸಚಿವಾಲಯ ಕಿಡಿಕಾರಿದೆ.

ನವದೆಹಲಿ(ನ.29): ‘ನವಜೋತ್‌ ಸಿಂಗ್‌ ಸಿಧು ಭಾರತದ ಪ್ರಧಾನಿಯಾಗುವವರೆಗೂ ಕಾಯದೇ ಈಗಿನ ಸರ್ಕಾರ ಭಾರತ-ಪಾಕಿಸ್ತಾನ ಮಾತುಕತೆ ಆರಂಭದ ಸಂಬಂಧ ಧನಾತ್ಮಕ ಕ್ರಮ ಕೈಗೊಳ್ಳಲಿ’ ಎಂದು ಪಾಕಿಸ್ತಾನದ ಪ್ರಧಾನಿ ಇಮ್ರಾನ್‌ ಖಾನ್‌ ಮಾಡಿದ ಆಗ್ರಹವನ್ನು ಭಾರತ ಸರ್ಕಾರ ತೀವ್ರವಾಗಿ ಖಂಡಿಸಿದೆ.

ಪಾಕಿಸ್ತಾನದಲ್ಲಿ ಚುನಾವಣೆಗೆ ನಿಲ್ಲಿ, ಗೆಲ್ಲಿ: ಸಿಧುಗೆ ಇಮ್ರಾನ್ ಆಫರ್!

‘ಕರ್ತಾರ್‌ಪುರ ಕಾರಿಡಾರ್‌ ಯೋಜನೆಗೆ ಶಂಕುಸ್ಥಾಪನೆ ನೆರವೇರಿಸಿದ ಈ ಪವಿತ್ರ ಸಂದರ್ಭದಲ್ಲಿ ಇಮ್ರಾನ್‌ ಖಾನ್‌ ಈ ಹೇಳಿಕೆ ನೀಡಿದ್ದು ವಿಷಾದಕರ ಸಂಗತಿ. ಜಮ್ಮು-ಕಾಶ್ಮೀರ ಭಾರತದ ಅವಿಭಾಜ್ಯ ಅಂಗವಾಗಿದ್ದು, ಈ ವಿಷಯದ ಬಗ್ಗೆ ಸೂಕ್ತವಲ್ಲದ ವೇದಿಕೆಯಲ್ಲಿ ಇಮ್ರಾನ್‌ ಮಾತನಾಡಿದ್ದು ಖಂಡನಾರ್ಹ’ ಎಂದು ಭಾರತದ ವಿದೇಶಾಂಗ ಸಚಿವಾಲಯ ಕಿಡಿಕಾರಿದೆ.

ಭಾರತ-ಪಾಕ್ ಕರ್ತಾರ್ಪುರ ಸಾಹಿಬ್ ಕಾರಿಡಾರ್ ಗೆ ಚಾಲನೆ!

ಇದರ ಬದಲು ಪಾಕಿಸ್ತಾನವು ತನ್ನ ನೆಲದಲ್ಲಿನ ಉಗ್ರರ ಪೋಷಣೆಯನ್ನು ನಿಲ್ಲಿಸಲು ಕ್ರಮ ಜರುಗಿಸಲಿ ಎಂದು ಭಾರತ ಬುದ್ಧಿಮಾತು ಹೇಳಿದೆ.
 

PREV
click me!

Recommended Stories

ಥೈಲ್ಯಾಂಡ್‌ನಿಂದ ಚೀಲದಲ್ಲಿ 48 ವಿಷಕಾರಿ ಹಾವನ್ನು ತಂದ ಪ್ರಯಾಣಿಕ; ಇಲ್ಲಿವೆ ಫೋಟೋಗಳು
Bride Calls Off Wedding: ಮದುವೆ ಮಂಟಪದಲ್ಲೇ ವರನ ಅಸಲಿಯತ್ತು ಕಂಡುಹಿಡಿದ ವಧು! ಮದುವೆ ನಿಂತೋಯ್ತು!