
ಸಿಯಾಲ್‌ಕೋಟ್ (ನ. 27): ಪಾಕಿಸ್ತಾನದಲ್ಲಿ ‘ಭಾರತ’ ಎಂಬ ಗ್ರಾಮ ಈಗಲೂ ಇದೆ ಎಂದರೆ ಯಾರೂ ನಂಬಲಿಕ್ಕಿಲ್ಲ. ಅಚ್ಚರಿ ಎನ್ನಿಸಿದರೂ ಇದು ನಿಜ. ಸಿಯಾಲ್‌ಕೋಟ್ ನಗರದಿಂದ 25 ಕಿ.ಮೀ. ದೂರದಲ್ಲಿ ‘ಚಾಕ್ ಭಾರತ್’ ಎಂಬ ಗ್ರಾಮವಿದೆ.
ವಿಶೇಷವೆಂದರೆ ಈವರೆಗೂ ಈ ಹೆಸರಿಗೆ ಯಾವ ಪಾಕಿಸ್ತಾನಿಯೂ ತಗಾದೆ ತೆಗೆದಿಲ್ಲ. ಇದು ಪಾಕಿಸ್ತಾನ ಸೃಷ್ಟಿಯಾಗುವ ಮುನ್ನ ಭಾರತದ ಅಂಗವಾಗಿತ್ತು. ವಿಭಜನೆಗೂ ಮುನ್ನ ಇಲ್ಲಿ ಶೇ.10 ರಷ್ಟು ಹಿಂದೂಗಳಿದ್ದರು. ಆದರೆ 1947ರಲ್ಲಿ ಇಲ್ಲಿದ್ದ ಹಿಂದೂಗಳೆಲ್ಲ ಭಾರತ ದೇಶಕ್ಕೆ ವಲಸೆ ಹೋದರು. ಈಗ ಇಲ್ಲಿ ಶೇ.100 ರಷ್ಟು ಮುಸ್ಲಿಮರಿದ್ದಾರೆ ಎಂದು ಸ್ಮರಿಸುತ್ತಾರೆ ಗ್ರಾಮಸ್ಥ ಮುಹಮ್ಮದ್ ಅಸ್ಲಂ.