ಅಭಿನಂದನ್ ಹಸ್ತಾಂತರ ವಿಳಂಬ: ಬೀಟಿಂಗ್ ರಿಟ್ರೀಟ್ ರದ್ದು ಮಾಡಿದ ಭಾರತ!

By Web DeskFirst Published Mar 1, 2019, 2:19 PM IST
Highlights

ಅಭಿನಂದನ್ ಹಸ್ತಾಂತರ ಪ್ರಕ್ರಿಯೆವಿಳಂಬ| ವಾಘಾ ಗಡಿಯಲ್ಲಿ ಬೀಟಿಂಗ್ ರಿಟ್ರೀಟ್ ರದ್ದುಗೊಳಿಸಿದ ಭಾರತ| ಪ್ರತಿದಿನ ಸಂಜೆ ವಾಘಾ ಗಡಿಯಲ್ಲಿ ನಡೆಯುತ್ತಿದ್ದ ಬೀಟಿಂಗ್ ರಿಟ್ರೀಟ್| 
ಭದ್ರತೆಯ ದೃಷ್ಟಿಯಿಂದ ಬೀಟಿಂಗ್ ರಿಟ್ರೀಟ್ ರದ್ದುಗೊಳಿಸಿದ ಭಾರತ| ಬೀಟಿಂಗ್ ರಿಟ್ರೀಟ್​ ನಂತರ ಅಭಿನಂದನ್ ಹಸ್ತಾಂತರಕ್ಕೆ ಮುಂದಾಗಿದ್ದ ಪಾಕ್|

ಅಮೃತ್‌ಸರ್(ಮಾ.01): ವಿಂಗ್ ಕಮಾಂಡರ್ ಅಭಿನಂದನ್ ಹಸ್ತಾಂತರ ಪ್ರಕ್ರಿಯೆಯನ್ನು ಪಾಕಿಸ್ತಾನ ಉದ್ದೇಶಪೂರ್ವಕವಾಗಿ ವಿಳಂಬ ಮಾಡುತ್ತಿದ್ದು, ಇದಕ್ಕೆ ಪ್ರತಿಯಾಗಿ ವಾಘಾ ಗಡಿಯಲ್ಲಿ ನಿತ್ಯ ನಡೆಯುವ ಬೀಟಿಂಗ್ ರಿಟ್ರೀಟ್‌ನ್ನು ಭಾರತ ರದ್ದುಗೊಳಿಸಿದೆ.

ಬೀಟಿಂಗ್ ರಿಟ್ರೀಟ್ ನಂತರವಷ್ಟೇ ಆಭಿನಂದನ್ ಅವರನ್ನು ಹಸ್ತಾಂತರಿಸಲಾಗುವುದು ಎಂದು ಪಾಕ್ ಸ್ಪಷ್ಟಪಡಿಸಿದೆ. ಆದರೆ ವಾಘಾ ಗಡಿಯಲ್ಲಿ ಅಭಿನಂದನ್ ಅವರನ್ನು ಬರಮಾಡಿಕೊಳ್ಳಲು ಭಾರೀ ಸಂಖ್ಯೆಯಲ್ಲಿ ಜನ ಸೇರಿದ್ದು, ಭದ್ರತೆಯ ಕಾರಣ ನೀಡಿ ಭಾರತ ಬೀಟಿಂಗ್ ರಿಟ್ರೀಟ್‌ನ್ನು ರದ್ದುಗೊಳಿಸಿದೆ.
 

click me!