ವಯಸ್ಸು 92 ಆದ್ರೂ ಕುಗ್ಗಿಲ್ಲ ಉತ್ಸಾಹ: ಇಳಿವಯಸ್ಸಿನಲ್ಲೂ ಕೃಷಿ ಮಾಡಿ ಮನೆ ಮಂದಿಗೆ ಆಸರೆಯಾದ ಛಲಗಾತಿ ಅಜ್ಜಿ

Published : Jul 08, 2017, 10:49 AM ISTUpdated : Apr 11, 2018, 01:12 PM IST
ವಯಸ್ಸು 92 ಆದ್ರೂ ಕುಗ್ಗಿಲ್ಲ ಉತ್ಸಾಹ: ಇಳಿವಯಸ್ಸಿನಲ್ಲೂ ಕೃಷಿ ಮಾಡಿ ಮನೆ ಮಂದಿಗೆ ಆಸರೆಯಾದ ಛಲಗಾತಿ ಅಜ್ಜಿ

ಸಾರಾಂಶ

ದುಡಿಯೋ ಛಲವೊಂದಿದ್ರೆ ವಯಸ್ಸು ಅಡ್ಡಿ ಬರಲ್ಲಾ ಅಂತಾರೆ. ಇಲ್ಲೊಬ್ಬರು ವೃದ್ಧೆ ವಯಸ್ಸು 98 ಆದರೂ, ಮನೆ ಮುಂದೆ ಇರುವ ಜಾಗದಲ್ಲಿ ತರಕಾರಿ ಬೆಳೆಯುವ ಮೂಲಕ ಬೇರೆಯವರಿಗೆ ಮಾದರಿಯಾಗಿದ್ದಾರೆ. ಮನೆಯ ಸುತ್ತ ವಿವಿಧ ತರಕಾರಿ, ಹೂವುಗಳನ್ನ ಬೆಳೆದು ಸ್ಥಳೀಯರಲ್ಲಿ ಸೈ ಅನಿಸಿಕೊಂಡಿದ್ದಾರೆ. ಅವರು ಯಾರು ಅಂತಿರಾ? ಇಲ್ಲಿದೆ ವಿವರ

ಕಾರವಾರ(ಜು.08): ದುಡಿಯೋ ಛಲವೊಂದಿದ್ರೆ ವಯಸ್ಸು ಅಡ್ಡಿ ಬರಲ್ಲಾ ಅಂತಾರೆ. ಇಲ್ಲೊಬ್ಬರು ವೃದ್ಧೆ ವಯಸ್ಸು 98 ಆದರೂ, ಮನೆ ಮುಂದೆ ಇರುವ ಜಾಗದಲ್ಲಿ ತರಕಾರಿ ಬೆಳೆಯುವ ಮೂಲಕ ಬೇರೆಯವರಿಗೆ ಮಾದರಿಯಾಗಿದ್ದಾರೆ. ಮನೆಯ ಸುತ್ತ ವಿವಿಧ ತರಕಾರಿ, ಹೂವುಗಳನ್ನ ಬೆಳೆದು ಸ್ಥಳೀಯರಲ್ಲಿ ಸೈ ಅನಿಸಿಕೊಂಡಿದ್ದಾರೆ. ಅವರು ಯಾರು ಅಂತಿರಾ? ಇಲ್ಲಿದೆ ವಿವರ

ಬಂಗಾರದ ಮನುಷ್ಯ ಚಿತ್ರದಲ್ಲಿ ಡಾ. ರಾಜ್ ಹೇಳಿದ ಮಾತು ಅಕ್ಷರಶ ಸತ್ಯ ಎಂಬುದುಕ್ಕೆ ಈ ಛಲಗಾತಿ ಅಜ್ಜಿಯೇ ಸಾಕ್ಷಿ.  ಇಳಿವಯಸ್ಸಿನಲ್ಲೂ ಯಾರಿಗೂ ಭಾರವಾಗದೆ ದುಡಿದು ಬದುಕುತ್ತಿರುವ ಸಾಹಸಿ ಈ ಅಜ್ಜಿ. ಅಂದ ಹಾಗೆ ಈ ಛಲಗಾತಿ ಅಜ್ಜಿ ಹೆಸರು ಪಾರ್ವತಿ. ಉತ್ತರಕನ್ನಡ ಜಿಲ್ಲೆಯ ಯಲ್ಲಾಪುರ ತಾಲೂಕಿನ ಒಡೆಹಕ್ಲು ಎಂಬ ಗ್ರಾಮದ ನಿವಾಸಿ. ವಯಸ್ಸು 98 ಆದರೂ ದುಡಿಯೋ ಛಲ ಮಾತ್ರ ಕುಗ್ಗಿಲ್ಲ. ಮನೆಯ ಮುಂದಿನ ಜಾಗದಲ್ಲಿ ಬಿಸಿಲು ಮಳೆ ಚಳಿಯನ್ನು ಲೆಕ್ಕಿಸದೆ, ತರಕಾರಿ ತೋಟವನ್ನ ಮಾಡಿ. ಸತತ 25 ವರ್ಷಗಳಿಂದ ಮನೆ ಮಂದಿಗೆ ಇವರೇ ಆಸೆಯಾಗಿದ್ದಾರೆ.

ಇನ್ನೂ ಈ ಅಜ್ಜಿ ಮನೆಗೆ ಬೇಕಾದ ತರಕಾರಿಯನ್ನು ಯಾವತ್ತು ಮಾರುಕಟ್ಟೆಯಿಂದ ತಂದಿಲ್ವಂತೆ. ಎಲ್ಲವನ್ನೂ ತೋಟದಲ್ಲೇಬೆಳೆಯುವ ಅಜ್ಜಿ, ತಮಗೆ ಬೇಕಾದಷ್ಟು ಇಷ್ಟುಕೊಂಡು, ಉಳಿದಿದ್ದನ್ನು ಊರಿನ ಜನರಿಗೆ ನೀಡ್ತಾರಂತೆ. ಒಂದು ದಿನವೂ ಅದಕ್ಕೆ ದುಡ್ಡು ಪಡೆದಿಲ್ಲ ಎನ್ನುವುದು ಆ ಅಜ್ಜಿಯ ಮಗನ ಮಾತು.

ಒಟ್ಟಾರೆ ಈ ಇಳಿ ವಯಸ್ಸಲ್ಲೂ ದುಡಿಯೋ ಛಲ ಇರುವ ಈ ವೃದ್ದೆಗೆ ಸಲಾಂ ಎನ್ನಲೇಬೇಕು. ಸದ್ಯದಲ್ಲೇ ಶತಾಯುಷಿ ಆಗೋ ಈ ವೃದ್ದೆ ಇನ್ನಷ್ಟು ಕಾಲ ಬಾಳಲಿ. ಅವರ ದುಡಿಯುವ ಛಲ ಬೇರೆಯವರಿಗೂ ಮಾದರಿಯಾಗಲಿ ಎನ್ನುವುದು ನಮ್ಮ ಆಶಯ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

5 ರಾಜ್ಯದ ಮತಪಟ್ಟಿ ಪ್ರಕಟ : 1 ಕೋಟಿ ಹೆಸರು ಡಿಲೀಟ್
ಯಹೂದಿ ನರಮೇಧ ನಡೆಸಿದ ತಂದೆ-ಮಗನಿಗೆ ಐಸಿಸ್‌ ಲಿಂಕ್‌ ದೃಢ