ಕರಾವಳಿಯಲ್ಲಿ ಕೋಮು ಸಂಘರ್ಷದ ಕಾವು: ಇಂದು RSS ಕಾರ್ಯಕರ್ತ ಶರತ್ ಅಂತ್ಯಕ್ರಿಯೆ

By Suvarna Web DeskFirst Published Jul 8, 2017, 9:51 AM IST
Highlights

ಬಂಟ್ವಾಳದಲ್ಲಿ ಆಕ್ರೋಶದ ಕಳಹೆ ಮೊಳಗಿದೆ. ದುಷ್ಕರ್ಮಿಗಳಿಂದ ಹಲ್ಲೆಗೆ ಒಳಗಾಗಿದ್ದ ಶರತ್ ಮಡಿವಾಳ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದು ಇಂದು ಅಂತ್ಯ ಕ್ರಿಯೆ ನಡೆಯಲಿದೆ .

ಮಂಗಳೂರು(ಜು.08): ಬಂಟ್ವಾಳದಲ್ಲಿ ಆಕ್ರೋಶದ ಕಳಹೆ ಮೊಳಗಿದೆ. ದುಷ್ಕರ್ಮಿಗಳಿಂದ ಹಲ್ಲೆಗೆ ಒಳಗಾಗಿದ್ದ ಶರತ್ ಮಡಿವಾಳ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದು ಇಂದು ಅಂತ್ಯ ಕ್ರಿಯೆ ನಡೆಯಲಿದೆ .

ಜುಲೈ 4ರಂದು ಬಂಟ್ವಾಳದ ಬಿ. ಸಿ ರೋಡ್ ನಲ್ಲಿ ಬೈಕ್‌ನಲ್ಲಿ ಬಂದ ನಾಲ್ವರು ದುಷ್ಕರ್ಮಿಗಳು ಶರತ್ ಮಡಿವಾಳ ಮೇಲೆ ತಲ್ವಾರ್‌ನಿಂದ ಮಾರಣಾಂತಿಕ ಹಲ್ಲೆ ನಡೆಸಿದ್ರು.. ಗಂಭೀರವಾಗಿ ಗಾಯಗೊಂಡಿದ್ದ ಶರತ್‌ನನ್ನು ಮಂಗಳೂರಿನ ಎ.ಜೆ.ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ನಿನ್ನೆ ಚಿಕಿತ್ಸೆ ಫಲಕಾರಿಯಾಗದೇ ಆರ್‌ಎಸ್‌ಎಸ್ ಮುಖಂಡ ಕೊನೆಯುಸಿರೆಳೆದ್ದಾನೆ.

Latest Videos

ಶರತ್ ಮೃತದೇಹ ಮಂಗಳೂರಿನ ಎಜೆ ಆಸ್ಪತ್ಪೆಯಲ್ಲಿದ್ದು ಇಂದು ಹುಟ್ಟೂರು ಬಂಟ್ವಾಳದ ಸಜಿಪದಲ್ಲಿ ನಡೆಯಲಿದೆ. ಆಸ್ಪತ್ರೆಯಿಂದ  ಬೆಳಗ್ಗೆ 9.30ಕ್ಕೆ ಶರತ್ ಮೃತದೇಹವನ್ನು ಬಂಟ್ವಾಳದ ಬಿಸಿ ರೋಡ್ ಗೆ ತರಲಿದ್ದು ಕೆಲ ಕಾಲ ಸಾರ್ವಜನಿಕ ದರ್ಶನಕ್ಕೆ ಇಡಲಾಗುತ್ತೆ. ಬಳಿಕ ಅಲ್ಲಿಂದ ಶರತ್ ನಿವಾಸಕ್ಕೆ ತೆಗೆದುಕೊಂಡು ಹೋಗಲಾಗುತ್ತೆ. ಮನೆ ಬಳಿ ಇರೋ ಗ್ರೌಂಡ್ ನಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಕಲ್ಪಿಸಲಾಗುತ್ತೆ. ಮಧ್ಯಾಹ್ನ 3 ಗಂಟೆ ಸುಮಾರಿಗೆ ಶರತ್ ಅಂತ್ಯಕ್ರಿಯೆ ನಡೆಯಲಿದೆ.

ಸಾವಿನ ಸುದ್ದಿ ತಿಳಿಯುತ್ತಿದ್ದಂತೆ ಕಾರ್ಯಕರ್ತರ ಆಕ್ರೋಶ ಭುಗೆಲೆದ್ದಿತು.  ಆರ್ ಎಸ್ ಎಸ್ ಕಾರ್ಯಕರ್ತರ ಕೊಲೆ  ಹಲ್ಲೆ ಖಂಡನೀಯ. ಇದೊಂದು ವ್ಯವಸ್ಥಿತವಾದ ಸಂಚು,ದಕ್ಷಿಣ ಕನ್ನಡ ಜಿಲ್ಲೆಯಲ್ಲಿ RSS ನಾಯಕರ ಕೊಲೆಯಾಗುತ್ತಿವೆ ಅದರ ಬಗ್ಗೆ ತನಿಖೆಯಾಗಲಿ ಅಂತ ಆಕ್ರೋಶ ವ್ಯಕ್ತಪಡಿಸಿದ್ರು. ನಿಷೇಧಾಜ್ಞೆ  ಉಲ್ಲಂಘಿಸಿ ಪ್ರತಿಭಟಿಸಿದವರ ವಿರುದ್ಧ ಕಾನೂನು ಕ್ರಮಕ್ಕೆ ಐಜಿಪಿ ಮುಂದಾಗಿದ್ದಾರೆ.. ಸದ್ಯಕ್ಕೆ ಕರಾವಳಿ ಬೂದಿ ಮುಚ್ಚಿದ ಕೆಂಡವಾಗಿದ್ದು  ಕೋಮು ಸಂಘರ್ಷದ ಕಾವು ದಿನೇ ದಿನೇ ಬಿಸಿಏರುತ್ತಿದೆ.

click me!