
ನವದೆಹಲಿ(ಜ.09): ಗ್ಯಾಸ್ ಸಿಲಿಂಡರ್ ಬಳಕೆದಾರರೇ ನಿಮಗೊಂದು ಸಂತಸದ ಸುದ್ದಿ. ಗ್ಯಾಸ್ ಸಿಲಿಂಡರ್ ಬುಕ್ ಮಾಡುವುದು ಇನ್ನು ಸುಲಭ.
ಈವರೆಗೂ ಗ್ಯಾಸ್ ಸಿಲಿಂಟರ್ ಬುಕ್ ಮಾಡಲು ಪೋನ್ ಅಥವಾ ಮೆಸೆಜ್ ಮಾಡಿ ಸಿಲಿಂಡರ್ ಬುಕ್ ಮಾಡಬೇಕಿತ್ತು. ಆದರೆ ಇನ್ನು ಮುಂದೆ ಈ ಗೊಡವೆ ನಿಮಗೆ ಇರಲ್ಲ. ನೀವು ಬಳಸುವ ಟ್ವೀಟ್ಟರ್, ಫೇಸ್'ಬುಕ್'ನಲ್ಲೇ ಗ್ಯಾಸ್ ಸಿಲಿಂಡರ್ ಬುಕ್ ಮಾಡಲು ಇಂಡಿಯನ್ ಆಯಿಲ್ ಕಾಪೋರೇಶನ್ ಅವಕಾಶ ಕಲ್ಪಿಸಿದೆ.
ನೀವು ಫೇಸ್'ಬುಕ್'ನಲ್ಲಿ ಗ್ಯಾಸ್ ಬುಕ್ ಮಾಡಬೇಕಾದರೆ, ಇಂಡಿಯನ್ ಆಯಿಲ್ ಕಾಫೋರೇಶನ್ ಆಫಿಶಿಯಿಲ್ @indianoilcorplimited ಖಾತೆಗೆ ಹೋಗಿ ಬುಕ್ ಮಾಡಬಹುದು. ಇನ್ನು ಟ್ವೀಟ್ಟರ್'ನಲ್ಲಿ Tweet refill @indanerefill ಮೂಲಕ ಗ್ಯಾಸ್ ಸಿಲಿಂಡರ್ ಬುಕ್ ಮಾಡಬಹುದಾಗಿದೆ.
ಪ್ರಧಾನಿ ನರೇಂದ್ರ ಮೋದಿ ಸರ್ಕಾರ ಡಿಜಿಟಲೀಕರಣದ ಭಾಗವಾಗಿ ಇಂಡಿಯನ್ ಆಯಿಲ್ ಕಾಪೋರೇಶನ್ ನಿಮಗೆ ಈ ಅವಕಾಶ ಕಲ್ಪಿಸಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.