
ಲಿಶುಯೀ(ನ.12): ಟ್ರಾಫಿಕ್'ನಿಂದ ತುಂಬಿದ ಚೀನಾದ ರಸ್ತೆಯೊಂದರಲ್ಲಿ ಕಂಡು ಬಂದ ಶಾಕಿಂಗ್ ಘಟನೆಯೊಂದು ಹೃದಯ ಬಡಿತವನ್ನೇ ನಿಲ್ಲಿಸುವಂತಿದೆ. ಇಲ್ಲಿನ ಲಿಶುಯೀ ಎಂಬ ಪ್ರದೇಶದ ರಸ್ತೆಯೊಂದರ ಸಿಸಿಟಿವಿ ದೃಶ್ಯಗಳು ಇದೀಗ ಸಾಮಾಜಿಕ ಜಾಲಾತಾಣಗಳಲ್ಲಿ ಹರಿದಾಡುತ್ತಿದ್ದು, ಇದರಲ್ಲಿ ಪುಟ್ಟ ಬಾಲಕನೊಬ್ಬ ಆಟವಾಡುವ ಭರದಲ್ಲಿ ವಾಹನಗಳಿಂದ ತುಂಬಿದ ರಸ್ತೆಯಲ್ಲೇ ತನ್ನ ಆಟದ ಕಾರನ್ನು ಚಲಾಯಿಸಿದ್ದಾನೆ. ಅದೃಷ್ಟವಶಾತ್ ಇದನ್ನು ಗಮನಿಸಿದ ಟ್ರಾಫಿಕ್ ಪೊಲೀಸ್ ಆ ಕೂಡಲೇ ಮಗುವನ್ನು ರಕ್ಷಿಸಿದ್ದಾನೆ.
ಸಿಸಿಟಿವಿಯಲ್ಲಿ ದಾಖಲಾದ ದೃಶ್ಯಗಳಲ್ಲಿ ತನ್ನ ಆಟದ ಕಾರಿನಲ್ಲಿ ಕುಳಿತ ಪುಟ್ಟ ಬಾಲಕ ಹೇಗೆ ಒಂದು ಬದಿಯಿಂದ ವಾಹನಗಳಿಂದ ಕಿಕ್ಕಿರಿದ ರಸ್ತೆಗೆ ತನ್ನ ಕಾರನ್ನು ಚಲಾಯಿಸಿಕೊಂಡು ಬರುತ್ತಾನೆ ಎಂಬುವುದು ಕಂಡು ಬರುತ್ತದೆ. ವೇಗವಾಗಿ ಬರುತ್ತಿರುವ ವಾಹನಗಳ ನಡುವೆ ಹೋಗುವ ಈ ಬಾಲಕ ಕೂದಲೆಳೆಯ ಅಂತರದಲ್ಲಿ ಪಾರಾಗಿ ರಸ್ತೆಯ ಮತ್ತೊಂದು ತಲುಪುವ ಹುಮ್ಮಸ್ಸಿನಲ್ಲಿರುತ್ತಾನೆ. ಆದರೆ ಇದೆಲ್ಲವನ್ನು ಗಮನಿಸಿದ ಅಲ್ಲೇ ನಿಂತಿದ್ದ ಟ್ರಾಫಿಕ್ ಪೊಲೀಸ್ ಹಿಂದೆ ಮುಂದೆ ಯೋಚಿಸದೆ ಆ ಕೂಡಲೇ ಓಡಿ ಹೋಗಿ ಮಗುವನ್ನು ರಕ್ಷಿಸುತ್ತಾನೆ.
ವಿಡಿಯೋ ನೋಡಿದ ಬಳಿಕ 'ಟ್ರಾಫಿಕ್ ಪೊಲೀಸ್ ಸರಿಯಾದ ಸಮಯಕ್ಕೆ ಅಲ್ಲಿ ತಲುಪದಿದ್ದರೆ ಮಗುವಿಗೇನಾಗುತ್ತಿತ್ತೇನೋ?' ಎಂಬ ಪ್ರಶ್ನೆ ನಮ್ಮ ಮನದಲ್ಲಿ ಒಮ್ಮೆ ಹಾದು ಹೋಗುವುದಂತೂ ನಿಜ. ಅದೇನಿದ್ದರೂ ಮಕ್ಕಳಿಗೆ ತಾವು ಅಪಾಯದಲ್ಲಿದ್ದೇವೆ ಎಂಬುವುದು ತಿಳಿದಿರುವುದಿಲ್ಲ. ಹೀಗಾಗಿ ಪೋಷಕರು ಮಕ್ಕಳ ಕುರಿತು ನಿಗಾ ವಹಿಸುವುದು ಅತೀ ಅಗತ್ಯ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.