ಚಿತ್ರಗಳು: ವಿಧಾನ ಪರಿಷತ್ ಸದಸ್ಯನ ಮನೆಯಲ್ಲಿ ಕಾಂಗ್ರೆಸ್ ನಾಯಕರ ಬಕ್ರೀದ್ ಪಾರ್ಟಿ

Published : Aug 12, 2019, 09:02 PM ISTUpdated : Aug 12, 2019, 10:07 PM IST
ಚಿತ್ರಗಳು: ವಿಧಾನ ಪರಿಷತ್ ಸದಸ್ಯನ ಮನೆಯಲ್ಲಿ ಕಾಂಗ್ರೆಸ್ ನಾಯಕರ ಬಕ್ರೀದ್ ಪಾರ್ಟಿ

ಸಾರಾಂಶ

ಇಂದು ಬಕ್ರೀದ್ ಹಬ್ಬದ ಪ್ರಯುಕ್ತ ರಾಜ್ಯ ಕಾಂಗ್ರೆಸ್‌ನ ಘಟಾನುಘಟಿ ನಾಯಕರುಗಳು ಒಟ್ಟಾಗಿ ಸೇರಿ ವಿಧಾನ ಪರಿಷತ್ ಸದಸ್ಯರೊಬ್ಬರ ನಿವಾಸದಲ್ಲಿ ಭರ್ಜರಿ ಭೋಜನ ಸವಿದಿದ್ದಾರೆ. ಆ ಚಿತ್ರಗಳು ಇಲ್ಲಿವೆ.

ಬೆಂಗಳೂರು, (ಆ.12) : ಇಂದು [ಸೋಮವಾರ] ನಾಡಿನಾದ್ಯಂತ ಮುಸ್ಲಿಂ ಬಾಂಧವರು ಸಂಭ್ರಮದಿಂದ ಬಕ್ರೀದ್ ಆಚರಣೆ ಮಾಡಿದರು.  ಅದೇ ರೀತಿ ಕರ್ನಾಟಕದಲ್ಲೂ ಸಹ ಹೊಸ ಉಡುಗೆ, ಹಬ್ಬದೂಟ ಮಾಡಿ ಸಡಗರದಿಂದ ಆಚರಿಸಿದರು.

ಬಕ್ರೀದ್ ಪ್ರಯುಕ್ತ ಬೆಂಗಳೂರಿನಲ್ಲಿರುವ ವಿಧಾನ ಪರಿಷತ್ ಸದಸ್ಯ ನಜೀರ್ ಅಹ್ಮದ್ ನಿವಾಸದಲ್ಲಿ  ಮಧ್ಯಾಹ್ನ ಏರ್ಪಡಿಸಲಾಗಿದ್ದ ಔತಣಕೂಟದಲ್ಲಿ  ಕಾಂಗ್ರೆಸ್ ನ ಘಟಾನುಘಟಿ ನಾಯರು ಒಟ್ಟಾಗಿ ಪಾಲ್ಗೊಂಡು ಹಬ್ಬದೂಟ ಸವಿದರು. 

ಮಾಜಿ ಮುಖ್ಯಮಂತ್ರಿ, ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ, ಪಕ್ಷದ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ, ಮಾಜಿ ಸಚಿವರಾದ ಜಮೀರ್ ಅಹಮದ್ ಖಾನ್, ಎಚ್. ಸಿ. ಮಹದೇವಪ್ಪ, ಕೃಷ್ಣ ಬೈರೇಗೌಡ, ಎಂ.ಬಿ.ಪಾಟೀಲ್, ಕೆ.ಜೆ.ಜಾರ್ಜ್ , ಮಾಜಿ ಸ್ಪೀಕರ್ ರಮೇಶ್ ಕುಮಾರ್, ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡುರಾವ್,  ಸೇರಿದಂತೆ ಹಲವು ನಾಯಕರು ಭೋಜನ ಕೂಟದಲ್ಲಿ ಪಾಲ್ಗೊಂಡಿದ್ದು, ಸ್ವೀಟ್, ವೆಜ್ , ನಾನ್ ವೆಜ್ ನಲ್ಲಿ ತರಹೇವಾರಿ ಭೋಜನ ಸವಿದರು.

ಭೋಜನ ಸವಿಯುತ್ತಿರುವ ಫೋಟೋಗಳನ್ನು ಮಾಜಿ ಸಚಿವ, ಚಾಮರಾಜಪೇಟೆ ಶಾಸಕ ಜಮೀದ್ ಅಹಮದ್ ಖಾನ್ ತಮ್ಮ ಫೇಸ್‌ ಬುಕ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಹಬ್ಬದೂಟದ ಜತೆಗೆ ಇನ್ನೊಂದು ವಿಶೇಷ ಅಂದ್ರೆ ಇಂದು ಸಿದ್ದರಾಮಯ್ಯ ಅವರ ಜನ್ಮದಿನ. 

ಈ ಲಂಚ್ ಪಾರ್ಟಿಯಲ್ಲಿ ನಾಯಕರ ಮಧ್ಯೆ ಪ್ರಸ್ತುತ ರಾಜ್ಯ ರಾಜಕಾರಣದ ಬೆಳವಣಿಗೆಗಳ ಬಗ್ಗೆ ಮಾತುಕತೆಗಳು ಸಹ ನಡೆದವು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಕ್ಯಾನ್ಸರ್ ಹೋರಾಟದಲ್ಲಿರುವಾಗಲೇ ಕೆಲಸದಿಂದ ತೆಗೆದ ಕಂಪನಿ, ಗೇಟಿನ ಮುಂದೆ ಉಪವಾಸ ಹೋರಾಟ
ಡಿಸೆಂಬರ್‌ 31ರ ಒಳಗೆ ಈ ಇಂಪಾರ್ಟೆಂಟ್‌ ಕೆಲಸ ಪೂರ್ತಿ ಮಾಡಿ, ಮತ್ತೆ ಸರ್ಕಾರ ಈ ಅವಕಾಶ ನೀಡಲ್ಲ..!