
ತುಮಕೂರು(ಡಿ.22): ಫೆಬ್ರವರಿ ತಿಂಗಳಲ್ಲಿ ಪ್ರಧಾನಿ ಮೋದಿಯವರಿಗೆ ಗಂಡಾಂತರ ಕಾದಿದೆಯಾ? ಅವರ ಕುರ್ಚಿಗೆ ಕಂಟಕ ಇದೆಯಾ? ಈ ವಿಚಾರ ಪ್ರಧಾನಿ ಗಮನಕ್ಕೆ ಬಂದಿದೆಯಾ? ಹೌದು ಎನ್ನುತ್ತಾರೆ ಬ್ರಹ್ಮಾಂಡ ಖ್ಯಾತಿಯ ನರೇಂದ್ರ ಶಾರ್ಮಾ ಗುರೂಜಿ.
ತುಮಕೂರಿನಲ್ಲಿ ನಡೆದ ಧಾರ್ಮಿಕ ಕಾರ್ಯಕ್ರಮವೊಂದರಲ್ಲಿ ಪ್ರವಚನ ನೀಡುತ್ತಾ ಮಾತನಾಡಿದ ಅವರು, ಪ್ರಧಾನಿ ಮೋದಿಗೆ ಫೆಬ್ರವರಿ ತಿಂಗಳಲ್ಲಿ ಗಂಡಾಂತರ ಎದುರಾಗಲಿರುವುದು ಖಚಿತ. ಆ ಗಂಡಾಂತರದಿಂದ ಅವರು ಪಾರಾಗಬೇಕು. ಈ ಕಂಟಕದಿಂದ ಬಚಾವಾದರೆ ಇನ್ನು ಮುಂದಿನ 12 ವರ್ಷ ಅವರನ್ನು ಯಾರೂ ಅಲ್ಲಾಡಿಸಲು ಸಾಧ್ಯವಿಲ್ಲ ಎಂದು ಭವಿಷ್ಯ ನುಡಿದಿದ್ದಾರೆ.
ಬ್ರಹ್ಮಾಂಡ ಗುರೂಜಿಯೆ ಈ ಗಂಡಾಂತರದ ಕುರಿತು ಸ್ವತಃ ಪ್ರಧಾನಿ ಅವರ ಗಮನಕ್ಕೆ ತಂದಿದ್ದಾರಂತೆ. ಮಾಘ ಮಾಸದಲ್ಲಿ ಎದುರಾಗುವ ಅಪವೃಷ್ಠಿ ಮೃತುಂಜಯ ಪರಿವರ್ತನೆಯಲ್ಲಿ ಮೋದಿ ಅವರಿಗೆ ತೊಂದರೆಯಿದೆ ಎಂದು ಪ್ರವಚನ ನೀಡಿರುವ ಈ ಗುರೂಜಿ ತಮಿಳುನಾಡು ಮುಖ್ಯಮಂತ್ರಿ ಜಯಲಲಿತಾ ಕೂಡಾ ಇದೇ ಗಂಡಾಂತರದಿಂದ ಸಾವನಪ್ಪಿದ್ದು ಎಂದು ಹೇಳಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.