ಇಸ್ರೇಲ್ ಚುನಾವಣೆಯಲ್ಲೂ ಮೋದಿ ಮಿಂಚಿಂಗ್‌!

Published : Jul 29, 2019, 01:04 PM IST
ಇಸ್ರೇಲ್ ಚುನಾವಣೆಯಲ್ಲೂ ಮೋದಿ ಮಿಂಚಿಂಗ್‌!

ಸಾರಾಂಶ

ಇಸ್ರೇಲ್‌ ಪ್ರಧಾನಿ ಬೆಂಜಮಿತ್‌ ನೆತನ್ಯಾಹು, ಚುನಾವಣೆಗೆ ಸ್ಪರ್ಧೆ| ಇಸ್ರೇಲ್ ಚುನಾವಣೆಯಲ್ಲೂ ಮೋದಿ ಮಿಂಚಿಂಗ್‌!| 

ಟೆಲ್‌ ಅವೀವ್‌[ಜು.29]: ಇತ್ತೀಚೆಗೆ ಭಾರತದಲ್ಲಿ ನಡೆದ ಲೋಕಸಭಾ ಚುನಾವಣೆ ವೇಳೆ ಎಲ್ಲೆಡೆ ನರೇಂದ್ರ ಮೋದಿ ಅವರ ಪೋಸ್ಟರ್‌ಗಳು ರಾರಾಜಿಸಿದ್ದವು. ಅಚ್ಚರಿಯ ವಿಷಯವೆಂದರೆ ಇದೀಗ ಇಸ್ರೇಲ್‌ನಲ್ಲೂ ಸಂಸತ್ತಿಗೆ ಚುನಾವಣೆ ನಡೆಯುತ್ತಿದ್ದು, ಅಲ್ಲೂ ಮೋದಿ ಪೋಸ್ಟರ್‌ಗಳು ಕಾಣಿಸಿಕೊಂಡಿವೆ.

ಅರೆ, ಇದೇನಿದು, ಮೋದಿ ಇಸ್ರೇಲ್‌ನಲ್ಲೂ ಚುನಾವಣೆಗೆ ನಿಂತರಾ ಎಂದು ಅಚ್ಚರಿಯಾಗಬೇಡಿ. ಪ್ರಧಾನಿ ನರೇಂದ್ರ ಮೋದಿ ಅವರ ಪರಮಾಪ್ತ, ಇಸ್ರೇಲ್‌ ಪ್ರಧಾನಿ ಬೆಂಜಮಿತ್‌ ನೆತನ್ಯಾಹು, ಚುನಾವಣೆಗೆ ಸ್ಪರ್ಧಿಸಿದ್ದಾರೆ.

ಈ ಹಿನ್ನೆಲೆಯಲ್ಲಿ ಅವರು ವಿವಿಧ ದೇಶಗಳ ಜೊತೆ ತಾವು ಈ ಹಿಂದೆ ಪ್ರಧಾನಿಯಾಗಿದ್ದ ಕೈಗೊಂಡ ಸಾಧನೆಗಳನ್ನು ವಿವರಿಸುವ ನಿಟ್ಟಿನಲ್ಲಿ ಪ್ರಧಾನಿ ಮೋದಿ ಸೇರಿದಂತೆ ವಿವಿಧ ವಿದೇಶಿ ಗಣ್ಯರ ಜೊತೆ ಇರುವ ಬ್ಯಾನರ್‌ಗಳನ್ನು ಪ್ರದರ್ಶಿಸಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಅಟ್ಲಾಂಟಿಕ್‌ನಲ್ಲಿ ಯುದ್ಧದ ಭೀತಿ: ರಷ್ಯಾದ ತೈಲ ಟ್ಯಾಂಕರ್ ವಶಪಡಿಸಿಕೊಂಡ ಅಮೆರಿಕ; ಪುಟಿನ್ ಸೇನೆ ಕೆಂಡಾಮಂಡಲ!
ಕೋಲಾರ: ಸೆಕ್ಯೂರಿಟಿ ಕ್ಯಾಬಿನ್‌ನಲ್ಲಿ ಅಗ್ನಿ ಅವಘಡ; ಚಿಕಿತ್ಸೆ ಫಲಕಾರಿಯಾಗದೆ ತಂದೆ-ಮಗು ದುರ್ಮರಣ!