ಬಿಜೆಪಿ ಜೊತೆ ಕೈ ಜೋಡಿಸುವ ಸುಳಿವು ಕೊಟ್ಟ ಕಾಂಗ್ರೆಸ್ ಅನರ್ಹ ಶಾಸಕ

By Web DeskFirst Published Jul 29, 2019, 1:03 PM IST
Highlights

ಅನರ್ಹಗೊಂಡ ಅತೃಪ್ತ ಶಾಸಕರೋರ್ವರು ಇದೀಗ ಬಿಜೆಪಿ ಸೇರ್ಪಡೆ ಬಗ್ಗೆ ಸುಳಿವನ್ನು ನೀಡಿದ್ದಾರೆ. ಇದೇ ವೇಳೆ ತಮ್ಮ ರಾಜೀನಾಮೆ ಹಿಂದಿನ ಕಾರಣವನ್ನೂ ತಿಳಿಸಿದ್ದಾರೆ. 

ಬೆಂಗಳೂರು [ಜು.29]: ಅತೃಪ್ತರಾಗಿ ಮುಂಬೈಗೆ ತೆರಳಿದ್ದ ರಾಜರಾಜೇಶ್ವರಿ ನಗರ ಕ್ಷೇತ್ರದ ಅನರ್ಹ ಶಾಸಕ ಮುನಿರತ್ನ ಮತ್ತೆ ಬೆಂಗಳೂರಿಗೆ ಮರಳಿದ್ದು, ಮತ್ತೊಂದು ಪಕ್ಷದೊಂದಿಗೆ ಕೈ ಜೋಡಿಸವ ಸುಳಿವು ನೀಡಿದ್ದಾರೆ.

ತಮ್ಮ ರಾಜೀನಾಮೆ ಹಿಂದಿನ ಕಾರಣ ಏನು ಎನ್ನುವ ಬಗ್ಗೆ ತಿಳಿಸಿದ ಅವರು ಹಿರಿಯ ನಾಯಕ ಬಿಟಿಎಂ ಲೇ ಔಟ್ ಕ್ಷೇತ್ರದ ಶಾಸಕ ರಾಮಲಿಂಗಾ ರೆಡ್ಡಿ ಅವರಿಗೆ ಸಚಿವ ಸ್ಥಾನ ನೀಡದಿರುವುದೇ ನಮ್ಮ ಅಸಮಾಧಾನಕ್ಕೆ ಕಾರಣ ಎಂದರು.

ವಿಶ್ವಾಸಮತ ಗೆದ್ದ ಯಡಿಯೂರಪ್ಪ: ಧ್ವನಿಮತದ ಮೂಲಕ ಅಂಗೀಕಾರ

ಏಳು ಬಾರಿ ಗೆದ್ದವರನ್ನು ಸಮ್ಮಿಶ್ರ ಸರ್ಕಾರ ನಿರ್ಲಕ್ಷ್ಯ ಮಾಡಿತು. ಅದರಿಂದ ಅವರೂ ಅಸಮಾಧಾನಗೊಂಡು ರಾಜೀನಾಮೆ ನೀಡಿದರು. ಆದರೆ ಒತ್ತಡಗಳಿಗೆ ಮಣಿದು ಮತ್ತೆ ವಾಪಸ್ ತೆರಳಿದರು ಎಂದು ಮುನಿರತ್ನ ಹೇಳಿದರು. 

BSY ವಿಶ್ವಾಸ ಗೆದ್ದ ಬೆನ್ನಲ್ಲೇ ಸ್ಪೀಕರ್ ರಮೇಶ್ ಕುಮಾರ್ ರಾಜೀನಾಮೆ

ಕುದುರೆ ವ್ಯಾಪಾರದ ಸ್ಥಿತಿ ಬಂದಿಲ್ಲ : ನನಗೆ ಆಪರೇಷನ್ ಕಮಲಕ್ಕೆ ಒಳಗಾಗುವ ಹೀನ ಸ್ಥಿತಿ ಬಂದಿಲ್ಲ. ರಾಜ್ಯದಲ್ಲಿ ಒಂದು ವೇಳೆ ಉಪ ಚುನಾವಣೆ ಬಂದರೆ ಜನರು ಕೆಲಸ ಮಾಡುವವರನ್ನು ಗೆಲ್ಲಿಸುತ್ತಾರೆ ಎನ್ನುವ ನಂಬಿಕೆ ಇದೆ. ನಾವೂ ಯಾವ ಪಕ್ಷ ಕೆಲಸ ಮಾಡುತ್ತದೆಯೋ ಅವರಿಗೆ ಬೆಂಬಲ ನೀಡುತ್ತೇವೆ ಎಂದು ಪರೋಕ್ಷವಾಗಿ ಬಿಜೆಪಿ ಜೊತೆಗೆ ಕೈ ಜೋಡಿಸುವ ಸೂಚನೆಯನ್ನು ಮುನಿರತ್ನ ನೀಡಿದರು. 

click me!