ತಾಜ್‌ಮಹಲ್‌ ಪ್ರವೇಶಕ್ಕೆ ಹೊಸ ನಿಯಮ!: ಭೇಟಿ ನೀಡುವ ಮುನ್ನ ಇಲ್ಲಿ ಗಮನಿಸಿ

By Web DeskFirst Published May 17, 2019, 12:33 PM IST
Highlights

ತಾಜ್‌ಮಹಲ್‌ ಪ್ರವೇಶಕ್ಕೆ ಶೂ ಕವರ್‌ ಕಡ್ಡಾಯ!| ಮಾಲಿನ್ಯದಿಂದ ತಾಜ್‌ ಮಹಲ್‌ ರಕ್ಷಣೆಗೆ ಹಲವು ಕ್ರಮಗಳ ಶಿಫಾರಸು

ನವದೆಹಲಿ[ಮೇ.17]: ಜಗತ್ತಿನ ಏಳು ಅದ್ಭುತಗಳಲ್ಲಿ ಒಂದಾದ ತಾಜ್‌ ಮಹಲ್‌ ಅನ್ನು ವೀಕ್ಷಿಸಲು ತೆರಳಬೇಕಾದರೆ ಇನ್ನು ಮುಂದೆ ಪ್ರವಾಸಿಗರು ಶೂ ಕವರ್‌ ಹಾಕಿಕೊಳ್ಳುವುದು ಕಡ್ಡಾಯ ಎಂಬ ನಿಯಮ ಜಾರಿಗೆ ಬರಲಿದೆ.

ಮಾಲಿನ್ಯದಿಂದಾಗಿ ಕಳೆಗುಂದುತ್ತಿರುವ ತಾಜ್‌ ಮಹಲ್‌ ರಕ್ಷಣೆಗೆ ಕ್ಷೇತ್ರ ನಿರ್ವಹಣೆ ಯೋಜನೆ ಸಿದ್ಧಪಡಿಸಿ ಎಂದು ಸುಪ್ರೀಂಕೋರ್ಟ್‌ ಆದೇಶದ ಹಿನ್ನೆಲೆಯಲ್ಲಿ ಮಾಲಿನ್ಯದಿಂದ ರಕ್ಷಣೆಗೆ ಕೈಗೊಳ್ಳಬಹುದಾದ ಹಲವಾರು ಕ್ರಮಗಳನ್ನು ಭಾರತೀಯ ಪುರಾತತ್ವ ಸರ್ವೇಕ್ಷಣಾ ಸಂಸ್ಥೆ ಶಿಫಾರಸು ಮಾಡಿದೆ.

ಆಗ್ರಾದಲ್ಲಿ ವಾಹನಗಳಿಗೆ ಕಡ್ಡಾಯವಾಗಿ ಸಿಎನ್‌ಜಿ ಇಂಧನವನ್ನೇ ಬಳಸಬೇಕು. ಮೆಟ್ರೋ ಮತ್ತು ಇತರ ಮೂಲ ಸೌಕರ್ಯಗಳ ನಿರ್ಮಾಣದಿಂದ ಉಂಟಾಗುವ ಧೂಳಿನ ಕಣಗಳಿಂದ ತಾಜ್‌ ಮಹಲ್‌ ರಕ್ಷಿಸಲು ಕ್ರಮಗಳನ್ನು ಕೈಗೊಳ್ಳಬೇಕು. ತ್ಯಾಜ್ಯ ಸುಡುವುದನ್ನು ಸಂಪೂರ್ಣವಾಗಿ ನಿಷೇಧಿಸಬೇಕು. ಸಾರ್ವಜನಿಕ ಸಾರಿಗೆಗೂ ಸಿಎನ್‌ಜಿ ವಾಹವವನ್ನೇ ಬಳಸಬೇಕು. ವಿದ್ಯುತ್‌ ಚಾಲಿತ ವಾಹನಗಳನ್ನು ಉತ್ತೇಜಿಸಬೇಕು ಎಂದು ಭಾರತೀಯ ಪುರಾತತ್ವ ಇಲಾಖೆ ಶಿಫಾರಸು ಮಾಡಿದೆ.

ಗೆದ್ದವರಾರು? ಬಿದ್ದವರಾರು ? ಮಹಾಸಂಗ್ರಾಮದ ಮಹಾಫಲಿತಾಂಶ. ಗುರುವಾರ 23 ಮೇ.

click me!