5 ವರ್ಷದಲ್ಲಿ ಅಡ್ವಾಣಿ ಲೋಕಸಭೆಯಲ್ಲಿ ಆಡಿದ್ದು 365 ಶಬ್ದಗಳು ಮಾತ್ರ!

By Web DeskFirst Published Feb 9, 2019, 9:46 AM IST
Highlights

ಸಂಸತ್ತಿನಲ್ಲಿ ತಮ್ಮ ಪ್ರಖರವಾದ ಭಾಷಣದಿಂದಲೇ ಖ್ಯಾತಿ ಗಳಿಸಿದ ಎಲ್‌.ಕೆ. ಅಡ್ವಾಣಿ ಕಳೆದ 5 ವರ್ಷಗಳಲ್ಲಿ ಸಂಸತ್ತಿನಲ್ಲಿ ಮೌನಕ್ಕೆ ಶರಣಾಗಿದ್ದಾರೆ.

ನವದೆಹಲಿ[ಫೆ.09]: ಬಿಜೆಪಿಯ ಉಕ್ಕಿನ ಮನುಷ್ಯ ಖ್ಯಾತಿಯ ಎಲ್‌.ಕೆ. ಅಡ್ವಾಣಿ ಸಂಸತ್ತಿನಲ್ಲಿ ತಮ್ಮ ಪ್ರಖರವಾದ ಭಾಷಣದಿಂದಲೇ ಖ್ಯಾತಿ ಗಳಿಸಿದವರು. ಆದರೆ, ಕಳೆದ 5 ವರ್ಷಗಳಲ್ಲಿ ಅಡ್ವಾಣಿ ಸಂಸತ್ತಿನಲ್ಲಿ ಮೌನಕ್ಕೆ ಶರಣಾಗಿದ್ದು, ದಾಖಲೆಗಳಲ್ಲಿ ಕಂಡುಬಂದಿದೆ.

ಸಂಸತ್‌ ಕಲಾಪದಲ್ಲಿ ಅಡ್ವಾಣಿ ಶೇ.92ರಷ್ಟು ಹಾಜರಾತಿ ಹೊಂದಿದ್ದರೂ, 5 ವರ್ಷದಲ್ಲಿ ವರು ಆಡಿದ್ದು ಕೇವಲ 365 ಶಬ್ದ ಮಾತ್ರ! ಅಡ್ವಾಣಿ ಅವರ ಮಾತಿನ ಪ್ರಖರತೆ ಹೇಗಿರುತ್ತಿತ್ತು ಎನ್ನುವುದಕ್ಕೆ 2012ರಲ್ಲಿ ಅಸ್ಸಾಂನ ಅಕ್ರಮ ವಲಸಿಗರ ವಿಷಯ ಹಾಗೂ ಜನಾಂಗೀಯ ಹಿಂಸೆಯ ಖಂಡಿಸಿ ಯುಪಿಎ- 2 ಸರ್ಕಾರದ ವಿರುದ್ಧ ಬಿಜೆಪಿ ಮಂಡಿಸಿದ್ದ ನಿಲುವಳಿ ಸೂಚನೆಯ ಮೇಲಿನ ಚರ್ಚೆ ಒಂದು ಉದಾಹರಣೆ.

ಚರ್ಚೆಯ ವೇಳೆ ಸುದೀರ್ಘ ಭಾಷಣ ಮಾಡಿದ್ದ ಅಡ್ವಾಣಿ 5000 ಶಬ್ದಗಳನ್ನು ಆಡಿದ್ದರು. 2009-ರಿಂದ 2014ರ ಅವಧಿಯಲ್ಲಿ ಅವರು 42 ಚರ್ಚೆಗಳಲ್ಲಿ ಪಾಲ್ಗೊಂಡು 35,926 ಶಬ್ದ ಆಡಿದ್ದಾರೆ. ಆದರೆ, ವಿಪರ್ಯಾಸವೆಂದರೆ 2014ರ ಬಳಿಕ ಅಡ್ವಾಣಿ ಲೋಕಸಭೆಯಲ್ಲಿ ಉಚ್ಚರಿಸಿದ ಶಬ್ದಗಳು ಕೇವಲ 365. 2014ರ ಡಿ.19ರ ಬಳಿಕ ಲೋಕಸಭೆಯಲ್ಲಿ ಅಡ್ವಾಣಿ ಒಂದೇ ಒಂದು ಶಬ್ದವನ್ನೂ ಆಡಿಲ್ಲ.

click me!