ವೀರಶೈವ-ಲಿಂಗಾಯತ ಧರ್ಮ ಸ್ಥಾಪನೆಗೆ 2013ರಲ್ಲಿ ಬೆಂಬಲಿಸಿದ್ದ ಬಿಜೆಪಿ, ಜೆಡಿಎಸ್ ಮುಖಂಡರು!

By Suvarna Web DeskFirst Published Jul 29, 2017, 10:44 AM IST
Highlights

ವೀರಶೈವ-ಲಿಂಗಾಯತ ಪ್ರತ್ಯೇಕ ಧರ್ಮ ಸ್ಥಾಪನೆ ವಿಚಾರವಾಗಿ ತೀವ್ರ ಆಕ್ಷೇಪ ವ್ಯಕ್ತಪಡಿಸುತ್ತಿರುವ ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ಎಸ್.ಯಡಿಯೂರಪ್ಪ, ಕೆಎಲ್‌ಇ ಕಾರ್ಯಾಧ್ಯಕ್ಷ, ಸಂಸದ ಪ್ರಭಾಕರ್ ಕೋರೆ, ಮಾಜಿ ಸಚಿವ ಬಸವರಾಜ ಬೊಮ್ಮಾಯಿ ಸೇರಿ 20ಕ್ಕೂ ಹೆಚ್ಚು ಬಿಜೆಪಿ ಶಾಸಕರು ಮತ್ತು ಸಂಸದರು ನಾಲ್ಕು ವರ್ಷಗಳ ಹಿಂದೆಯೇ ಪ್ರತ್ಯೇಕ ಧರ್ಮದ ಹೋರಾಟಕ್ಕೆ ಕೈಜೋಡಿಸಿ ಸಹಿ ಹಾಕಿದ್ದರು!

ಬೆಂಗಳೂರು(ಜು.29): ವೀರಶೈವ-ಲಿಂಗಾಯತ ಪ್ರತ್ಯೇಕ ಧರ್ಮ ಸ್ಥಾಪನೆ ವಿಚಾರವಾಗಿ ತೀವ್ರ ಆಕ್ಷೇಪ ವ್ಯಕ್ತಪಡಿಸುತ್ತಿರುವ ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ಎಸ್.ಯಡಿಯೂರಪ್ಪ, ಕೆಎಲ್‌ಇ ಕಾರ್ಯಾಧ್ಯಕ್ಷ, ಸಂಸದ ಪ್ರಭಾಕರ್ ಕೋರೆ, ಮಾಜಿ ಸಚಿವ ಬಸವರಾಜ ಬೊಮ್ಮಾಯಿ ಸೇರಿ 20ಕ್ಕೂ ಹೆಚ್ಚು ಬಿಜೆಪಿ ಶಾಸಕರು ಮತ್ತು ಸಂಸದರು ನಾಲ್ಕು ವರ್ಷಗಳ ಹಿಂದೆಯೇ ಪ್ರತ್ಯೇಕ ಧರ್ಮದ ಹೋರಾಟಕ್ಕೆ ಕೈಜೋಡಿಸಿ ಸಹಿ ಹಾಕಿದ್ದರು!

ವೀರಶೈವ ಮಹಾಸಭೆಯ ಉನ್ನತ ಮೂಲಗಳ ಪ್ರಕಾರ, 1991ರಲ್ಲಿ ಕೇಂದ್ರ ಸರ್ಕಾರಕ್ಕೆ ಸಲ್ಲಿಸಿದ್ದ ಮನವಿ ಪತ್ರಕ್ಕೂ ಅಂದಿನ ಶಾಸಕರಾಗಿದ್ದ ಯಡಿಯೂರಪ್ಪ ಸಹಿ ಮಾಡಿದ್ದರು. ಅಲ್ಲದೆ, 2013ರಲ್ಲಿ ಅಖಿಲ ‘ಭಾರತ ವೀರಶೈವ ಮಹಾಸಭಾ ಅಂದಿನ ಪ್ರಧಾನ ಮಂತ್ರಿ ಮನಮೋಹನ್ ಸಿಂಗ್ ಅವರಿಗೆ ವೀರಶೈವ- ಲಿಂಗಾಯತ ಪ್ರತ್ಯೇಕ ‘ರ್ಮದ ಸ್ಥಾನಕ್ಕಾಗಿ ಹಾಗೂ ಜನಗಣತಿಯಲ್ಲಿ ವೀರಶೈವ- ಲಿಂಗಾಯ ತರಿಗೆ ಪ್ರತ್ಯೇಕ ಕಾಲಂ ನೀಡುವಂತೆ ಸಲ್ಲಿಸಿದ್ದ ಮನವಿ ಪತ್ರಕ್ಕೆ ರಾಜ್ಯ ಬಿಜೆಪಿಯ ಬಹುತೇಕ ಮುಖಂಡರು (ಸಂಸ ದರು ಮತ್ತು ಶಾಸಕರು) ಸಹಿ ಹಾಕಿದ್ದಾರೆ. ಈ ಕುರಿತ 10 ಪುಟಗಳ ದಾಖಲೆ ‘ಕನ್ನಡಪ್ರಭಕ್ಕೆ ಲಭ್ಯವಾಗಿದೆ. 2013ರ ಜು.25 ಮತ್ತು ಜು.31ರಂದು ಅಂದಿನ ಪ್ರಧಾನಿ ಮನಮೋಹನ್‌ಸಿಂಗ್ ಮತ್ತು ಅಂದಿನ ಗೃಹ ಸಚಿವ ಸುಶೀಲ್‌ಕುಮಾರ್ ಶಿಂಧೆ ಅವರಿಗೆ ವೀರಶೈವ ಮಹಾ ಸಭಾದ ಮಹಾಪ್ರಧಾನ ಕಾರ್ಯದರ್ಶಿ ಈಶ್ವರ್ ಖಂಡ್ರೆ ಎರಡು ಪ್ರತ್ಯೇಕ ಮನವಿ ಪತ್ರಗಳನ್ನು ಬರೆದಿದ್ದಾರೆ. ಈ ಪತ್ರದಲ್ಲಿ ವೀರಶೈವ-ಲಿಂಗಾ ಯತರಿಗೆ ಪ್ರತ್ಯೇಕ ಧರ್ಮ ಸ್ಥಾನಮಾನ ನೀಡಿಕೆ ಹಾಗೂ ಜನಗಣತಿ ಭರ್ತಿ ಮಾಡುವ ನಮೂನೆಯಲ್ಲಿ ಲಿಂಗಾಯ ತರಿಗೆ ಪ್ರತ್ಯೇಕ ಧರ್ಮ ಕಾಲಂ ನೀಡ ಬೇಕೆಂದು ಕೋರಲಾಗಿದೆ.

Latest Videos

ಅಲ್ಲದೇ 7-7-2013 ರಂದು ಕೇಂದ್ರ ಸರ್ಕಾರಕ್ಕೆ ಪ್ರತ್ಯೇಕ ‘ರ್ಮದ ಬೇಡಿಕೆಗಾಗಿ ಸುದೀರ್ಘ ಮನವಿ ಸಲ್ಲಿಸಲಾಗಿದೆ ಎಂಬುದನ್ನು ಸ್ಮರಿಸಲಾಗಿದೆ. ಕರ್ನಾಟಕ, ಮಹಾರಾಷ್ಟ್ರ, ಆಂಧ್ರಪ್ರದೇಶ, ತಮಿಳುನಾಡು, ಕೇರಳ ರಾಜ್ಯಗಳ ವೀರಶೈವ ಲಿಂಗಾಯತ ಮಹಾಸಭಾದ ರಾಜ್ಯ ಘಟಕದ ಅಧ್ಯಕ್ಷರುಗಳು ಸೇರಿದಂತೆ ಕರ್ನಾಟಕ ರಾಜ್ಯದ ಕಾಂಗ್ರೆಸ್, ಬಿಜೆಪಿ ಮತ್ತು ಜೆಡಿಎಸ್‌ನ 56 ಮಂದಿ ಲಿಂಗಾಯತ ಶಾಸಕರು ಮತ್ತು ಸಂಸದರು ಅಂದಿನ ಪ್ರಧಾನಿ ಸಿಂಗ್ ಮತ್ತು ಸಚಿವ ಸಿಂಧೆ ಅವರಿಗೆ ಪತ್ರಕ್ಕೆ ಸಹಿ ಹಾಕಿದ್ದಾರೆ.

click me!