
ಬೆಂಗಳೂರು(ಜು.29): ಸುರಕ್ಷಿತ ಚಾಲನೆ ಹಾಗೂ ಉತ್ತಮ ಸೇವೆಗಾಗಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ (ಕೆಎಸ್ ಆರ್‌ಟಿಸಿ) ಚಾಲಕರು ಮಾತ್ರ ಇಷ್ಟು ದಿನ ಮುಖ್ಯಮಂತ್ರಿಗಳ ಚಿನ್ನ ಮತ್ತು ಬೆಳ್ಳಿಯ ಪದಕ ಗೌರವಕ್ಕೆ ಪಾತ್ರರಾಗುತ್ತಿದ್ದರು. ಇನ್ನು ಮುಂದೆ ಅಪಘಾತ ರಹಿತ ಚಾಲನೆ ಮಾಡುವ ‘ಚಾಲಕ ಕಂ ನಿರ್ವಾಹಕ’ರಿಗೂ ಚಿನ್ನ ಮತ್ತು ಬೆಳ್ಳಿಯ ಪದಕ ಹಾಗೂ ನಗದು ಪುರಸ್ಕಾರ ಪಡೆಯುವ ಅವಕಾಶ ಒಲಿದು ಬಂದಿದೆ.
ಕೆಎಸ್‌ಆರ್‌ಟಿಸಿಯು ನಿಗಮದ ಇತಿಹಾಸದಲ್ಲಿ ಪ್ರಥಮ ಬಾರಿಗೆ ಅಪಘಾತ ರಹಿತ ಮತ್ತು ಅಪರಾ‘ ರಹಿತ ಸೇವೆ ಸಲ್ಲಿಸುವ ಚಾಲಕ ಕಂ ನಿರ್ವಾಹಕರಿಗೂ ಪುರಸ್ಕರಿಸುವ ನಿರ್ಧಾರ ಕೈಗೊಂಡಿದ್ದು, ಅರ್ಹ ಚಾಲಕ ಕಂ ನಿರ್ವಾಹಕರ ಪಟ್ಟಿ ಸಿದ್ಧಪಡಿಸುವಲ್ಲಿ ನಿರತರಾಗಿದ್ದಾರೆ. ಆಗಸ್ಟ್ 1ಕ್ಕೆ ಬೆಳ್ಳಿ ಪದಕ, ಅಕ್ಟೋಬರ್ 2ಕ್ಕೆ ಚಿನ್ನದ ಪದಕ ನೀಡಲಾಗುತ್ತದೆ.
ಹೇಗಿರುತ್ತದೆ ಪದಕ?
ಚಿನ್ನದ ಪದಕದಲ್ಲಿ 32 ಗ್ರಾಂ ಬೆಳ್ಳಿ ಪದಕದ ಮೇಲೆ 8 ಗ್ರಾಂ ಚಿನ್ನದ ಗಂಡಭೇರುಂಡ ಚಿಹ್ನೆ ಇರಲಿದೆ. ಬೆಳ್ಳಿ ಪದಕ 32 ಗ್ರಾಂ ಇರಲಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.