ಸಂಬಂಧ ಮತ್ತಷ್ಟು ದೂರ: 370ನೇ ವಿಧಿ ರದ್ದತಿಗೆ ಇಮ್ರಾನ್ ಪ್ರತಿಕ್ರಿಯೆ ಖಾರ!

By Web DeskFirst Published Aug 6, 2019, 2:32 PM IST
Highlights

ಕಣಿವೆ ರಾಜ್ಯದ 370ನೇ ವಿಧಿ ರದ್ದು ಮಾಡಿದ ಕೇಂದ್ರ ಸರ್ಕಾರ| ಭಾರತದ ನಿರ್ಧಾರ ವಿರೋಧಿಸಿದ ಪಾಕ್ ಪ್ರಧಾನಿ ಇಮ್ರಾನ್ ಖಾನ್|  ಎರಡು ನ್ಯೂಕ್ಲಿಯರ್ ರಾಷ್ಟ್ರಗಳ ನಡುವಿನ ಸಂಬಂಧಕ್ಕೆ ಧಕ್ಕೆ ಎಂದ ಇಮ್ರಾನ್| ಭಾರತದ ನಿರ್ಣಯವನ್ನು ಜಮ್ಮು ಮತ್ತು ಕಾಶ್ಮೀರದ ಜನತೆ ವಿರೋಧಿಸಲಿದ್ದಾರೆ ಎಂದ ಪಾಕ್ ಪ್ರಧಾನಿ|

ಇಸ್ಲಾಮಾಬಾದ್(ಆ.06):  ಜಮ್ಮು ಮತ್ತು ಕಾಶ್ಮೀರಕ್ಕೆ ನೀಡಲಾಗಿರುವ ವಿಶೇಷ ಸ್ಥಾನಮಾನ ರದ್ದತಿ ಕುರಿತು ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್ ಖಾರದ ಪ್ರತಿಕ್ರಿಯೆ ನೀಡಿದ್ದಾರೆ.

ವಿಶೇಷ ಸ್ಥಾನಮಾನ ರದ್ದತಿಯಿಂದಾಗಿ ಎರಡು ನ್ಯೂಕ್ಲಿಯರ್ ರಾಷ್ಟ್ರಗಳ ನಡುವಿನ ಸಂಬಂಧ ಮತ್ತಷ್ಟು ಹದಗೆಟ್ಟಿದ್ದು, ಇದು ಒಳ್ಳೆಯ ನಡೆಯಲ್ಲ ಎಂದು ಇಮ್ರಾನ್ ಖಾನ್ ಅಭಿಪ್ರಾಯಪಟ್ಟಿದ್ದಾರೆ.

ವಿಶೇಷ ಸ್ಥಾನಮಾನ ರದ್ದತಿಯನ್ನು ಅಕ್ರಮ ಎಂದು ಜರೆದಿರುವ ಇಮ್ರಾನ್, ಎರಡು ನ್ಯೂಕ್ಲಿಯರ್ ರಾಷ್ಟ್ರಗಳ ನಡುವೆ ವಿವಾದಕ್ಕೆ ಕಾರಣವಾಗಿರುವ ಪ್ರದೇಶವನ್ನು ಹೀಗೆ ಅಭದ್ರತೆಯಲ್ಲಿಡುವುದು ಎಷ್ಟು ಸರಿ ಎಂದು ಪ್ರಶ್ನಿಸಿದ್ದಾರೆ.

ಭಾರತ ಜಮ್ಮು ಮತ್ತು ಕಾಶ್ಮೀರದ ಜನತೆಗೆ ಸಮ್ಮತವಲ್ಲದ ನಿರ್ಧಾರ ಕೈಗೊಂಡಿದ್ದು, ಇದನ್ನು ಕಾಶ್ಮೀರದ ಜನತೆ ಒಕ್ಕೊರಲಿನಿಂದ ವಿರೋಧಿಸಲಿದ್ದಾರೆ ಎಂದೂ ಇಮ್ರಾನ್ ನುಡಿದಿದ್ದಾರೆ.

click me!