
ಕರ್ತಾರ್ಪುರ(ನ.28): ಪಾಕಿಸ್ತಾನ ಗಡಿಯಲ್ಲಿರುವ ಐತಿಹಾಸಿಕ ಗುರುದ್ವಾರ ದರ್ಬಾರ್ ಗೆ ಭಾರತದಿಂದ ಸಂಪರ್ಕ ಕಲ್ಪಿಸುವ ಕರ್ತಾರ್ಪುರ ಸಾಹಿಬ್ ಕಾರಿಡಾರ್ ಗೆ ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್ ಶಂಕುಸ್ಥಾಪನೆ ನೆರವೇರಿಸಿದ್ದಾರೆ.
ಈ ವೇಳೆ ಮಾತನಾಡಿದ ಪಾಕ್ ಪ್ರಧಾನಿ ಇಮ್ರಾನ್ ಖಾನ್, ತಮ್ಮ ಬಹುಕಾಲದ ಕ್ರಿಕೆಟ್ ಗೆಳೆಯ, ಪಂಜಾಬ್ ಸಚಿವ ನವಜೋತ್ ಸಿಂಗ್ ಸಿಧು ಅವರಿಗೊಂದು ಹೊಸ ಆಫರ್ ನೀಡಿದ್ದಾರೆ.
ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದಲ್ಲಿ ಸಿಧುಗೆ ಚುನಾವಣೆಗೆ ನಿಲ್ಲುವಂತೆ ಇಮ್ರಾನ್ ಖಾನ್ ಆಫರ್ ನೀಡಿದ್ದಾರೆ. ಅಲ್ಲದೇ ಸಿಧು ಪಾಕಿಸ್ತಾನದಲ್ಲಿ ಚುನಾವಣೆಗೆ ನಿಂತರೂ ಗೆಲ್ಲಲ್ಲಿದ್ದಾರೆ ಎಂದು ಇಮ್ರಾನ್ ಭರವಸೆ ವ್ಯಕ್ತಪಡಿಸಿದ್ದಾರೆ.
''ನನ್ನ ಪದಗ್ರಹಣ ಸಮಾರಂಭಕ್ಕೆ ಹಾಜರಾಗಿದ್ದಕ್ಕೆ ಸಿಧು ಅವರ ಮೇಲೆ ಕೆಲವರು ಕೋಪಗೊಂಡಿದ್ದಾರೆ. ಯಾಕೆ ಕೋಪಗೊಳ್ಳಬೇಕು?. ಸಿಧು ಪಾಕಿಸ್ತಾನಕ್ಕೆ ಬಂದಿದ್ದು ಶಾಂತಿಯ ಹರಿಕಾರನಾಗಿ. ಇದೇ ಕಾರಣಕ್ಕೆ ಒಂದು ವೇಳೆ ಸಿಧು ಪಾಕ್ ಪಂಜಾಬ್ ನಲ್ಲಿ ಚುನಾವಣೆಗೆ ನಿಂತರೆ ಖಂಡಿತ ಗೆಲ್ಲುತ್ತಾರೆ'' ಎಂದು ಇಮ್ರಾನ್ ಹಸ್ಯ ಚಟಾಕಿ ಹಾರಿಸಿದರು.
ಇಮ್ರಾನ್ ಖಾನ್ ಮತ್ತು ನವಜೋತ್ ಸಿಂಗ್ ಸಿಧು ಬಹುಕಾಲದ ಕ್ರಿಕೆಟ್ ಗೆಳೆಯರು. ಮೈದಾನದಲ್ಲಿ ಇಬ್ಬರೂ ತಮ್ಮ ತಮ್ಮ ದೇಶಕ್ಕಾಗಿ ಆಡಿದ್ದರೂ, ಮೈದಾನದ ಹೊರಗೆ ಸಿಧು ಮತ್ತು ಇಮ್ರಾನ್ ನಡುವೆ ಗಾಢವಾದ ಸ್ನೇಹ ಸಂಬಂಧ ಇದೆ.
ಈ ಇಬ್ಬರೂ ದಿಗ್ಗಜರ ಕ್ರಿಕೆಟ್ ಕರಿಯರ್ ನತ್ತ ಗಮನ ಹರಿಸುವುದಾದರೆ..
ನವಜೋತ್ ಸಿಂಗ್ ಸಿಧು(ಬ್ಯಾಟಿಂಗ್):
ಟೆಸ್ಟ್: 51, ಇನ್ನಿಂಗ್ಸ್: 78, ರನ್: 3202, ಅತ್ಯಧಿಕ ರನ್: 201, ಸರಾಸರಿ: 42.1, ಶತಕ: 9, ಅರ್ಧಶತಕ: 15
ಏಕದಿನ: 136, ಇನ್ನಿಂಗ್ಸ್: 127, ರನ್: 4413, ಅತ್ಯಧಿಕ ರನ್: 134, ಸರಾಸರಿ: 37.1 ಶತಕ: 6, ಅರ್ಧಶತಕ: 33
ಬೌಲಿಂಗ್:
ಟೆಸ್ಟ್: 51, ಇನ್ನಿಂಗ್ಸ್: 1, ಬಾಲ್: 6, ಮೇಡನ್: 0, ವಿಕೆಟ್: 0, ಬೆಸ್ಟ್: 0/9, ಎಕಾನಮಿ: 9.00
ಏಕದಿನ: 136, ಇನ್ನಿಂಗ್ಸ್: 2, ಬಾಲ್:4, ಮೇಟನ್: 0, ವಿಕೆಟ್: 0, ಬೆಸ್ಟ್: 0/1: ಎಕಾನಮಿ: 4.50
ಇಮ್ರಾನ್ ಖಾನ್(ಬ್ಯಾಟಿಂಗ್):
ಟೆಸ್ಟ್: 88, ಇನ್ನಿಂಗ್ಸ್: 126, ರನ್: 3807, ಅತ್ಯಧಿಕ ರನ್: 136, ಸರಾಸರಿ: 37.7, ಶತಕ: 6, ಅರ್ಧಶತಕ: 18
ಏಕದಿನ: 175, ಇನ್ನಿಂಗ್ಸ್: 151, ರನ್: 3709, ಅತ್ಯಧಿಕ ರನ್: 102, ಸರಾಸರಿ: 33.4, ಶತಕ: 1, ಅರ್ಧಶತಕ: 19
ಬೌಲಿಂಗ್:
ಟೆಸ್ಟ್: 88, ಇನ್ನಿಂಗ್ಸ್: 142, ಬಾಲ್: 19,458, ಮೇಡನ್: 727, ವಿಕೆಟ್: 362, ಬೆಸ್ಟ್: 8/58 ಎಕಾನಮಿ: 2.54
ಏಕದಿನ: 175, ಇನ್ನಿಂಗ್ಸ್: 153, ಬಾಲ್: 7461, ಮೇಡನ್: 124, ವಿಕೆಟ್: 182, ಬೆಸ್ಟ್: 6/14, ಎಕಾನಮಿ: 3.89
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.