ನನಗೆ 500 ಸೇವಕರು ಬೇಡ, 80 ಕಾರು ಬೇಕಾಗಿಲ್ಲ ಎಂದ ಇಮ್ರಾನ್

Published : Aug 20, 2018, 10:38 PM ISTUpdated : Sep 09, 2018, 09:08 PM IST
ನನಗೆ 500 ಸೇವಕರು ಬೇಡ, 80 ಕಾರು ಬೇಕಾಗಿಲ್ಲ ಎಂದ ಇಮ್ರಾನ್

ಸಾರಾಂಶ

ಪ್ರಧಾನಿಗಳ ಅಧಿಕೃತ ನಿವಾಸದ ಬದಲಿಗೆ ತಮ್ಮ ಸೇನಾ ಕಾರ್ಯದರ್ಶಿಯ ಮೂರು ಕೋಣೆಗಳ ಮನೆಯಲ್ಲಿ ವಾಸ್ತವ್ಯ ಆರಂಭಿಸಲಿದ್ದಾರೆ

ಇಸ್ಲಾಮಾಬಾದ್‌[ಆ.20]: ಪಾಕಿಸ್ತಾನ ಪ್ರಧಾನಿಯಾಗಿ ಪ್ರಮಾಣವಚನ ಸ್ವೀಕರಿಸುತ್ತಿದ್ದಂತೆ ಮಾಜಿ ಕ್ರಿಕೆಟಿಗ ಇಮ್ರಾನ್‌ ಖಾನ್‌ ಆರಂಭದಲ್ಲೇ ವೆಚ್ಚಗಳನ್ನು  ಕಡಿತ ಮಾಡುವ ಕ್ರಮಗಳನ್ನು ಜಾರಿಗೊಳಿಸಿದ್ದಾರೆ. 

ಇದರ ಭಾಗವಾಗಿ ತಾವೇ ಪಾಕ್ ಪ್ರಧಾನಿ ವಾಸಿಸುವ ಬಂಗಲೆ, 524 ಸೇವಕರು ಹಾಗೂ 80 ಐಷಾರಾಮಿ ಕಾರುಗಳನ್ನು ಬೇಡ ಎಂದಿದ್ದಾರೆ. ಪ್ರಧಾನಿಗಳ ಅಧಿಕೃತ ನಿವಾಸದ ಬದಲಿಗೆ ತಮ್ಮ ಸೇನಾ ಕಾರ್ಯದರ್ಶಿಯ ಮೂರು ಕೋಣೆಗಳ ಮನೆಯಲ್ಲಿ ವಾಸ್ತವ್ಯ ಆರಂಭಿಸಲಿದ್ದಾರೆ. 80 ಕಾರುಗಳ ಪೈಕಿ 2ನ್ನು ಮಾತ್ರ ಬಳಸಲು ನಿರ್ಧರಿಸಿದ್ದಾರೆ.

ಪಾಕ್ ಪ್ರಧಾನಿಗೆ 33 ಬುಲೆಟ್‌ಪ್ರೂಫ್‌ ಕಾರುಗಳಿವೆ. ಜತೆಗೆ ಹೆಲಿಕಾಪ್ಟರ್‌ಗಳು, ಏರೋಪ್ಲೇನ್‌ಗಳು ಹಲವು ಸೌಲಭ್ಯಗಳನ್ನು ಒದಗಿಸಲಾಗಿದೆ. ಬುಲೆಟ್‌ ಪ್ರೂಫ್‌ ಕಾರುಗಳನ್ನು ಉದ್ಯಮಿಗಳಿಗೆ ಮಾರಿ ಬೊಕ್ಕಸಕ್ಕೆ ಹಣ ತುಂಬಿಸುತ್ತಾರಂತೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

Bengaluru: ಲವ್ ಮಾಡು, ಇಲ್ಲಾಂದ್ರೆ ಸಾಯ್ತೀನಿ: ಪೊಲೀಸ್ ಇನ್ಸ್‌ಪೆಕ್ಟರ್‌ಗೆ ಕಿರುಕುಳ ಕೊಟ್ಟ ಖತರ್ನಾಕ್ ಲೇಡಿ
ಸರ್ಕಾರಿ ನೇಮಕಾತಿ ವಿಳಂಬ: ಮನನೊಂದು ಧಾರವಾಡ ರೈಲು ಹಳಿಗೆ ಸಿಲುಕಿ ಯುವತಿ ದಾರುಣ ಸಾವು!