2ಕ್ಕಿಂತ ಹೆಚ್ಚು ಮಕ್ಕಳಿದ್ರೆ ಪಂಚಾಯ್ತಿ ಚುನಾವಣೆಗೆ ಸ್ಪರ್ಧಿಸುವಂತಿಲ್ಲ

By Web DeskFirst Published Oct 26, 2018, 10:01 AM IST
Highlights

2 ಮಕ್ಕಳಿಗಿಂತ ಹೆಚ್ಚು ಮಕ್ಕಳನ್ನು ಹೊಂದಿರುವವರಿಗೆ ಪಂಚಾಯತ್ ಚುನಾವಣೆಯಲ್ಲಿ ಸ್ಪರ್ಧಿಸುವುದಾಗಲಿ, ಅಥವಾ ಸದಸ್ಯನಾಗಿರುವುದು ಕೂಡ ಸಾಧ್ಯವಿಲ್ಲ ಎಂದು ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು ನೀಡಿದೆ. 

ನವದೆಹಲಿ: ಮೂರು ಮಕ್ಕಳನ್ನು ಹೊಂದಿರುವ ವ್ಯಕ್ತಿ ಪಂಚಾಯತ್ ಚುನಾವಣೆಯಲ್ಲಿ ಸ್ಪರ್ಧಿಸುವುದರಿಂದ ಹಾಗೂ ಪಂಚಾಯತ್ ಸದಸ್ಯನಾಗಿರುವುದರಿಂದ ಅನರ್ಹ ಗೊಳ್ಳುತ್ತಾನೆ ಎಂದು ಸುಪ್ರೀಂಕೋರ್ಟ್ ತೀರ್ಪು ನೀಡಿದೆ. 

ಒಡಿಶಾ ಗ್ರಾಮ ಪಂಚಾಯ್ತಿಗಳಿಗೆ ಈ ತೀರ್ಪು ಅನ್ವಯ ವಾಗಲಿದೆ. ಮೂರನೇ ಮಗು ಜನಿಸಿದ ಕಾರಣಕ್ಕೆ ಒಡಿಶಾದ ನುವಾಪಾಡಾ ಜಿಲ್ಲೆಯ ಪಂಚಾಯತ್‌ವೊಂದ ರಿಂದ ತಮ್ಮನ್ನು ಅನರ್ಹಗೊಳಿಸಿದ ಒಡಿಶಾ ಹೈಕೋರ್ಟ್ ನಿರ್ಧಾರ ಪ್ರಶ್ನಿಸಿ ಮೀನಾ ಸಿಂಗ್ ಮಾಂಝಿ ಎನ್ನುವವರು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್, ಒಡಿಶಾ ಪಂಚಾಯತರಾಜ್ ಕಾಯ್ದೆಯನ್ವಯ ಈ ತೀರ್ಪು ನೀಡಿದೆ. 

ಇದೇ ವೇಳೆ, ಪಂಚಾಯತ್ ಸದಸ್ಯತ್ವವನ್ನು ಉಳಿಸಿಕೊಳ್ಳಲು 3 ರಲ್ಲಿ 1 ಮಗುವನ್ನು ದತ್ತು ನೀಡಿದರೂ ಪಂಚಾಯತ್ ರಾಜ್ ಕಾಯ್ದೆಯ ಪ್ರಕಾರ ಅನರ್ಹರಾಗಲಿದ್ದಾರೆ ಎಂದು ಕೋರ್ಟ್ ಹೇಳಿದೆ.

click me!