
ಶಿವಮೊಗ್ಗ(ಏ. 12): ಹೊಸನಗರದ ಮೂಲೆಗದ್ದೆ ಮಠದ ಆವರಣದಲ್ಲಿ ಸಂಭವಿಸಿದ 3 ವರ್ಷದ ಮಗುವಿನ ಕೊಲೆ ಪ್ರಕರಣದಲ್ಲಿ ಹೊಸ ಟ್ವಿಸ್ಟ್ ಸಿಕ್ಕಿದೆ. ಆರೋಪಿ ರುದ್ರೇಶ್ ಹಾಗೂ ಮಗುವಿನ ತಾಯಿ ಚೈತ್ರಾ ನಡುವೆ ಇದ್ದ ಅನೈತಿಕ ಸಂಬಂಧವು ಈ ಕೊಲೆಗೆ ಕಾರಣವಾಗಿದೆ ಎಂಬ ಮಾಹಿತಿ ಬೆಳಕಿಗೆ ಬಂದಿದೆ. ಸೆಕ್ಸ್'ಗೆ ನಿರಾಕರಿಸಿದಳೆಂದು ಸಿಟ್ಟಿಗೆ ಚೈತ್ರಾಳ ಮೇಲೆ ಸೇಡು ತೀರಿಸಿಕೊಳ್ಳಲು ಆಕೆಯ ಮಗುವನ್ನು ರುದ್ರೇಶ್ ಬಲಿಕೊಟ್ಟಿದ್ದಾನೆ ಎಂದು ಪೊಲೀಸ್ ತನಿಖೆ ವೇಳೆ ತಿಳಿದುಬಂದಿದೆ. ಶಿವಮೊಗ್ಗದ ಎಸ್ಪಿ ಅಭಿನವ್ ಖರೆ ಈ ವಿಷಯವನ್ನ ಮಾಧ್ಯಮಗಳಿಗೆ ಹೊರಗೆಡವಿದ್ದಾರೆ.
ರುದ್ರೇಶ್ ಮತ್ತು ಚೈತ್ರಾ ನಡುವೆ ಎರಡು ವರ್ಷಗಳಿಂದ ಅನೈತಿಕ ಸಂಬಂಧವಿತ್ತು. ಪದೇ ಪದೇ ಆಕೆಯೊಂದಿಗೆ ದೈಹಿಕ ಸಂಪರ್ಕ ಸಾಧಿಸುತ್ತಿರುತ್ತಾನೆ. ಆದರೆ, 3 ದಿನಗಳಿಂದ ತನ್ನೊಂದಿಗೆ ಸೆಕ್ಸ್ ಮಾಡಬೇಕೆಂದು ಚೈತ್ರಾಗೆ ಒತ್ತಡ ಹೇರುತ್ತಿರುತ್ತಾನೆ. ಮೂಲೆಗದ್ದೆ ಮಠದ ನೂತನ ಸ್ವಾಮೀಜಿಯಾಗಿ ಶಾಂತಕುಮಾರ ದೇಶಿಕೇಂದ್ರ ಸ್ವಾಮೀಜಿಯ ಪಟ್ಟಾಭಿಷೇಕ ಕಾರ್ಯಕ್ರಮದ ಸಿದ್ಧತೆ ನಡೆಯುತ್ತಿರುತ್ತದೆ. ಹಿಂದಿನ ಸ್ವಾಮೀಜಿ ಸಿದ್ದಲಿಂಗ ಸ್ವಾಮಿಗಳ ತಂಗಿಯ ಮಗಳಾದ ಚೈತ್ರಾಗೆ ಈ ಕಾರ್ಯಕ್ರಮದಲ್ಲಿ ಹಲವು ಜವಾಬ್ದಾರಿಗಳು ಬಿದ್ದಿರುತ್ತವೆ. ಹೀಗಾಗಿ, ಆರೋಪಿ ರುದ್ರೇಶ್'ನ ಸೆಕ್ಸ್ ಬೇಡಿಕೆಗೆ ಚೈತ್ರಾ ಒಪ್ಪೋದಿಲ್ಲ. ಇದರಿಂದ ಸಿಟ್ಟಿಗೆದ್ದ ರುದ್ರೇಶ್, ಚೈತ್ರಾ ಮತ್ತವಳ ಕುಟುಂಬ 7 ಸದಸ್ಯರೆಲ್ಲರಿಗೂ ಸಾಂಬಾರಿನಲ್ಲಿ ನಿದ್ರೆ ಮಾತ್ರೆ ಬೆರೆಸಿ ತಿನಿಸುತ್ತಾನೆ. ನಿದ್ರೆ ಹೋದ ಚೈತ್ರಾಳೊಂದಿಗೆ ಸಂಭೋಗಕ್ಕೆ ವಿಫಲಪ್ರಯತ್ನ ನಡೆಸುತ್ತಾನೆ. ಚೈತ್ರಾಳೊಂದಿಗೆ ಸೆಕ್ಸ್ ಮಾಡಲು ಸಾಧ್ಯವಾಗದಾಗ ಇನ್ನಷ್ಟು ವ್ಯಗ್ರನಾದ ರುದ್ರೇಶ್, 3 ವರ್ಷದ ಸೃಜನ್'ನನ್ನು ಮಠದ ಪಕ್ಕದ ಕೊಳದಲ್ಲಿ ಮುಳುಗಿಸಿ ಸಾಯಿಸುತ್ತಾನೆನ್ನಲಾಗಿದೆ.
ವರದಿ: ರಾಜೇಶ್ ಕಾಮತ್, ಶಿವಮೊಗ್ಗ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.