ಈ ಬಾರಿ ಬೇಸಿಗೆಯಲ್ಲಿ ಕಾಡಲಿದೆ ರಣಬಿಸಿಲು : ಹವಮಾನ ಇಲಾಖೆ ಎಚ್ಚರಿಕೆ

By Web DeskFirst Published Mar 9, 2019, 11:16 AM IST
Highlights

ಈಗಾಗಲೇ ಜನತೆ ರಣಬಿಸಿಲಿನಿಂದ ತತ್ತರಿಸಿದ್ದು, ಈ ಬಾರಿ ಬೇಸಿಗೆಯಲ್ಲಿ ಅತ್ಯಂತ  ಹೆಚ್ಚಿನ ಉಷ್ಣಾಂಶ ದಾಖಲಾಗಲಿದೆ ಎಂದು ಕೇಂದ್ರ ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ. 

ಬೆಂಗಳೂರು :  ಮಳೆಗಾಲದಲ್ಲಿ ಭೀಕರ ಪ್ರವಾಹ ಎದುರಾಗಿ ಜನರು ತತ್ತರಿಸಿದ್ದ ಬೆನ್ನಲ್ಲೇ ಹವಮಾನ ಇಲಾಖೆ ಇದೀಗ ಮತ್ತೊಂದು ಶಾಕ್ ನೀಡಿದೆ. 

ಈ ಬಾರಿ ಹಳೆಯ ರೆಕಾರ್ಡ್ ಗಳನ್ನೆಲ್ಲಾ ಬ್ರೇಕ್ ಮಾಡುವ ಪ್ರಮಾಣದಲ್ಲಿ ಬಿಸಿಲು ಇರಲಿದೆ. ಆದ್ದರಿಂದ ಜನತೆ ಭಯಂಕರ ಬಿಸಲು ಎದುರಿಸಲು ಸಜ್ಜಾಗಿ ಎಂದು ಅಲರ್ಟ್ ಮಾಡಿದೆ. 

ಈಗಾಗಲೇ ಕೇಂದ್ರ ಹವಾಮಾನ ಇಲಾಖೆ ತಮಿಳುನಾಡಿಗೆ ಹೀಟ್ ವೇವ್ ಅಲರ್ಟ್ ನೀಡಿದ್ದು, ಎಚ್ಚರದಿಂದ ಇರುವಂತೆ ಸೂಚನೆ ನೀಡಿದೆ. 

ಈ ನಿಟ್ಟಿನಲ್ಲಿ ಕರ್ನಾಟಕಕ್ಕೂ ರಣಬಿಸಿಲು ತಟ್ಟುವ ಸಾಧ್ಯತೆ ಇದೆ. ಫೆಬ್ರುವರಿ ಹಾಗೂ ಮಾರ್ಚ್‌ ತಿಂಗಳಲ್ಲಿ ವಾಡಿಕೆಗಿಂತ ಹೆಚ್ಚು ಬಿಸಿಲು ಕಾಣಿಸಿಕೊಂಡಿದ್ದು,  ಬೆಂಗಳೂರಿನಲ್ಲಿ ಮಾರ್ಚ್ ಮೊದಲ ವಾರದಲ್ಲೇ 37° ಸೆಲ್ಸಿಯಸ್ ಉಷ್ಣಾಂಶ ದಾಖಲಾಗಿದೆ. 

ಉತ್ತರ ಕರ್ನಾಟಕ , ಕರಾವಳಿ ಭಾಗದಲ್ಲಿ ಫೆಬ್ರುವರಿ, ಮಾರ್ಚ್ ತಿಂಗಳಲ್ಲಿ ವಾಡಿಕೆಗಿಂತ ಹೆಚ್ಚು ಬಿಸಲು ಕಾಣಿಸಿಕೊಂಡಿದ್ದು, ಮುಂದಿನ ದಿನಗಳಲ್ಲಿ ಭಾರಿ ಬಿಸಿಲು ಹೆಚ್ಚಳವಾಗುವ ಸಾಧ್ಯತೆ ಇದೆ. 

ಈ ಬಾರಿ ಬೇಸಿಗೆಯಲ್ಲಿ ಸಾಮಾನ್ಯ ಉಷ್ಣಾಂಶಕ್ಕಿಂತ ಎರಡರಿಂದ ಮೂರು ಡಿಗ್ರಿ ಉಷ್ಣಾಂಶ ಹೆಚ್ಚಾಗುವ ಮುನ್ಸೂಚನೆಯನ್ನೂ ಕೇಂದ್ರ ಹವಾಮಾನ ಇಲಾಖೆ ನೀಡಿದೆ. 

click me!