ತೀವ್ರ ಸ್ವರೂಪ ಪಡೆದುಕೊಂಡ IMA ವಂಚನೆ ಪ್ರಕರಣ: CCB ಬದಲಿಗೆ SITಗೆ

By Web DeskFirst Published Jun 11, 2019, 4:24 PM IST
Highlights

IMA ಬಹುಕೋಟಿ ವಂಚನೆ ಪ್ರಕರಣವನ್ನು ರಾಜ್ಯ ಸರ್ಕಾರ ಗಂಭೀರವಾಗಿ ಪರಿಗಣಿಸಿದ್ದು, ಪ್ರಕರಣದ ತನಿಖೆಯನ್ನು ವಿಶೇಷ ತನಿಖಾ ದಳ ಹೆಗಲಿಗೆ ವಹಿಸಿದೆ.

ಬೆಂಗಳೂರು, (ಜೂನ್.11):  ಐಎಂಎ ಜ್ಯುವೆಲರಿ ಬಹುಕೋಟಿ ವಂಚನೆ ಪ್ರಕರಣದ ತನಿಖೆಯ ಜವಾಬ್ದಾರಿಯನ್ನು ಸಿಸಿಬಿಗೆ ವಹಿಸಿದ್ದ ರಾಜ್ಯ ಸರ್ಕಾರ ಇದೀಗ ಪ್ರಕರಣದ ವಿಚಾರಣೆಯನ್ನು ವಿಶೇಷ ತನಿಖಾ ತಂಡಕ್ಕೆ ವಹಿಸಿದೆ.

ಪತ್ನಿಯರೊಂದಿಗೆ ಮನ್ಸೂರ್ ಪರಾರಿ! ‘ಡೈರೆಕ್ಟರ್ ಖೆಡ್ಡಾ’ ತೋಡಿದ ಪೊಲೀಸರು

ಈ ಮೊದಲು ಐಎಂಎ ಬಹುಕೋಟಿ ವಂಚನೆ ಕೇಸ್‌ನ್ನು ಸಿಎಂ ಕುಮಾರಸ್ವಾಮಿ ಅವರು ಸಿಸಿಬಿಗೆ ವಹಿಸಲಾಗಿದೆ ಎಂದು ಟ್ವೀಟ್ ಮೂಲಕ ತಿಳಿಸಿದ್ದರು. 

Considering the seriousness of the fraud, the inquiry has been handed over to a special investigation team and instructions regarding this have been given to the DGP.

— CM of Karnataka (@CMofKarnataka)

ಆದರೆ, ಇದೀಗ ಸಿಎಂ ಒಂದು ಹೆಜ್ಜೆ ಮುಂದೆ ಹೋಗಿದ್ದು, ಪ್ರಕರಣದ ತನಿಖೆಯನ್ನು ವಿಶೇಷ ತನಿಖಾ ದಳ (ಎಸ್‌ಐಟಿ)ಕ್ಕೆ ವಹಿಸಲಾಗಿದೆ ಎಂದು ಟ್ವೀಟ್ ಮಾಡಿದ್ದಾರೆ.

click me!