ಮರಿಯಾನೆ 'ಅಂತಿಮ ಯಾತ್ರೆ'ಗೆ ಆನೆ ಹಿಂಡು: ನೋಡುತ್ತ ನಿಂತ ಜನರ ದಂಡು!

By Web DeskFirst Published Jun 11, 2019, 4:13 PM IST
Highlights

ಅರಣ್ಯ ವಲಯದಲ್ಲಿ ಮರಿಯಾನೆಯ ಅಂತಿಮ ಯಾತ್ರೆ| ಅರಣ್ಯಾಧಿಕಾರಿಯ ಮೊಬೈಲ್‌ನಲ್ಲಿ ಸೆರೆಯಾಯ್ತು ದೃಶ್ಯ| ನೋಡುತ್ತಲೇ ನಿಂತ್ರು ಜನ|

ನವದೆಹಲಿ[ಜೂ.11]: ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆದ ವಿಡಿಯೋವೊಂದು ಭಾರೀ ಶೇರ್ ಆಗುತ್ತಿದೆ. ಮೃತ ವ್ಯಕ್ತಿಯ ಅಂತಿಮ ಯಾತ್ರೆ ಹಲವಾರು ಬಾರಿ ನೋಡಿರುತ್ತೇವೆ. ಆದರೆ ವೈರಲ್ ಆದ ವಿಡಿಯೋದಲ್ಲಿ ಆನೆಗಳ ಹಿಂಡು ಮರಿಯಾನೆಯನ್ನು ಹೊತ್ತೊಯ್ಯುತ್ತಾ ಅಂತಿಮ ಯಾತ್ರೆ ನಡೆಸುತ್ತಿರುವ ದೃಶ್ಯ ಕಾಣಬಹುದಾಗಿದೆ. 

ಈ ವಿಡಿಯೋವನ್ನು ಭಾರತೀಯ ಅರಣ್ಯಾಧಿಕಾರಿ ಪರ್ವೀನ್ ಕಾಸ್ವಾನ್ ಕೆಲ ದಿನಗಳ ಹಿಂದೆ ಟ್ವಿಟರ್ ನಲ್ಲಿ ಶೇರ್ ಮಾಡಿಕೊಂಡಿದ್ದಾರೆ. ವಿಡಿಯೋದಲ್ಲಿ ಆನೆಗಳ ಹಿಂಡು ಮೃತ ಮರಿಯಾನೆಯನ್ನು ಹೊತ್ತೊಯ್ಯುತ್ತಾ ಅರಣ್ಯ ವಲಯದಲ್ಲಿರುವ ರಸ್ತೆ ದಾಟುತ್ತಿರುವ ದೃಶ್ಯ ಕಾಣಬಹುದು. ಹೀಗಿರುವಾಗ ದೂರದಲ್ಲಿ ಹಲವಾರು ಮಂದಿ ಈ ದೃಶ್ಯ ನೋಡುತ್ತಾ ನಿಂತಿರುವುದನ್ನು ಕಾಣಬಹುದು.

This will move you !! Funeral procession of the weeping elephants carrying dead body of the child elephant. The family just don’t want to leave the baby. pic.twitter.com/KO4s4wCpl0

— Parveen Kaswan, IFS (@ParveenKaswan)

ಈ ಘಟನೆಯ ಕುರಿತಾಗಿ ಬರೆದುಕೊಂಡಿರುವ ಅರಣ್ಯಾಧಿಕಾರಿ 'ಈ ದೃಶ್ಯ ನಿಮ್ಮನ್ನು ಭಾವುಕರನ್ನಾಗಿಸುತ್ತದೆ. ಅಳುತ್ತಿರುವ ಆನೆಗಳ ಹಿಂಡು ಸತ್ತ ಮರಿಯಾನೆಯ ಅಂತಿಮ ಯಾತ್ರೆ ಮಾಡಿದವು. ಕುಟುಂಬ ಮಗುವನ್ನು ಬಿಡಲಿಚ್ಛಿಸುತ್ತಿಲ್ಲ' ಎಂದಿದ್ದಾರೆ.

ಸತ್ತ ಆನೆಯ ಅಂತಿಮ ಕ್ರಿಯೆ ಎಲ್ಲಿ ನಡೆಸಲಾಯ್ತು ಎಂಬ ಮಾಹಿತಿ ಲಭ್ಯವಾಗಿಲ್ಲ. 

click me!