#Me Too : ಮಾಜಿ ಸಚಿವೆ ಲಲಿತಾ ನಾಯಕ್ ಹೇಳಿದ್ದೇನು..?

By Web DeskFirst Published Nov 19, 2018, 7:22 AM IST
Highlights

ಸದ್ಯ ಕೆಲ ದಿನಗಳಿಂದ ದೇಶದಲ್ಲಿ ಮೀ ಟೂ ಅಭಿಯಾನ ಸದ್ದು ಮಾಡುತ್ತಿದ್ದು ಈ ನಿಟ್ಟಿನಲ್ಲಿ ಮಾಜಿ ಸಚಿವೆ ಬಿಟಿ ಲಲಿತಾ ನಾಯ್ಕ್ ಪ್ರತಿಕ್ರಿಯೆ ನೀಡಿ ತಾವು ಇದಕ್ಕೆ ಯಾವುದೇ ರೀತಿ ಬೆಂಬಲ ನೀಡಲ್ಲ ಎಂದು ಹೇಳಿದ್ದಾರೆ. 

ಬೆಂಗಳೂರು :  ಇತ್ತೀಚೆಗೆ ನಡೆಯುತ್ತಿರುವ ಮೀಟೂ ಅಭಿಯಾನಕ್ಕೆ ತಮ್ಮ ಬೆಂಬಲವಿಲ್ಲ. ಎಂದು ಮಾಜಿ ಸಚಿವೆ ಬಿ.ಟಿ.ಲಲಿತಾ ನಾಯಕ ಹೇಳಿದ್ದಾರೆ.

ಭಾನುವಾರ ನಗರದ ಟೌನ್‌ಹಾಲ್‌ ಮುಂಭಾಗದಲ್ಲಿ ಅಂತಾರಾಷ್ಟ್ರೀಯ ಪುರುಷರ ದಿನಾಚರಣೆ ಅಂಗವಾಗಿ ಹಮ್ಮಿಕೊಂಡಿದ್ದ ಕರ್ನಾಟಕ-ಭಾರತ ಕಾಲ್ನಡಿಗೆ ವಿಜಯೋತ್ಸವದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ಅನೇಕ ಮಹಿಳೆಯರು ತಾವು ಪುರುಷರಿಂದ ಲೈಂಗಿಕ ದೌರ್ಜನ್ಯಕ್ಕೆ ಒಳಗಾಗುತ್ತಿದ್ದೇವೆ ಎಂದು ದೂರು ನೀಡುತ್ತಿದ್ದಾರೆ. ಆದರೆ ಆ ದೂರಿನಲ್ಲಿರುವ ಸತ್ಯಾಸತ್ಯತೆಯನ್ನು ನ್ಯಾಯಾಂಗ ಇಲಾಖೆ ಪರಾಮರ್ಶಿಸುವುದು ಬಹಳ ಒಳ್ಳೆಯದು. ಇಂತಹ ಪ್ರಕರಣಗಳು ಸಮಾಜಕ್ಕೆ ವ್ಯತಿರಿಕ್ತ ಪರಿಣಾಮ ಬೀರುವುದಲ್ಲದೆ, ತಪ್ಪು ತಿಳುವಳಿಕೆ ಮೂಡಲು ಸಾಧ್ಯವಾಗುತ್ತದೆ ಎಂದು ತಿಳಿಸಿದರು.

ಸಮಾಜದಲ್ಲಿ ಮಹಿಳೆಯರ ಮಾತ್ರವಲ್ಲದೇ ಪುರುಷರ ಮೇಲೂ ದೌರ್ಜನ್ಯಗಳು ನಡೆಯುತ್ತವೆ. ಲೈಂಗಿಕ ದೌರ್ಜನ್ಯಗಳ ಕುರಿತು ಮಹಿಳೆಯರು ಪುರುಷ ವಿರುದ್ಧ ದೂರು ದಾಖಲಿಸಿದ ಸಂದರ್ಭದಲ್ಲಿ ತುರ್ತಾಗಿ ಕ್ರಮ ಜರುಗಿಸುವ ಬದಲು ಆ ದೂರಿನಲ್ಲಿರುವ ಸತ್ಯಾಸತ್ಯತೆಯನ್ನು ಪೊಲೀಸ್‌ ಹಾಗೂ ನ್ಯಾಯಾಂಗ ಇಲಾಖೆ ಪರಾಮರ್ಶಿಸಬೇಕಿದೆ.

click me!