
ಚೆನ್ನೈ(ನ.07): ಖ್ಯಾತ ನಟ, ನಿರ್ದೇಶಕ ಮತ್ತು ನಿರ್ಮಾಪಕ ಕಮಲ್ ಹಾಸನ್ ಮತ್ತು ಗೌತಮಿ ವಿಚ್ಚೇದನಕ್ಕೆ ಕಮಲ್ ಮಗಳು ಶೃತಿ ಕಾರಣವೆಂಬ ಸುದ್ದಿ ಹರಡಿತ್ತು. ಆದರೆ ಇದಕ್ಕೆ ಶೃತಿ ಪ್ರತಿಕ್ರಿಯೆ ನೀಡಿದ್ದಾರೆ.
ತಂದೆ ವಿಚ್ಚೇದನಕ್ಕೆ ತಾನು ಕಾರಣ ಎನ್ನುವ ಸುದ್ದಿಯನ್ನು ಅಲ್ಲಗೆಳೆದ ಶೃತಿ ಈವರೆಗೂ ಯಾರ ವಿಚಾರದಲ್ಲೂ ತಾನೂ ಮೂಗು ತೂರ್ಸಿಲ್ಲ. ತನ್ನಪ್ಪ ಗೌತಮಿಯೊಂದಿಗೆ ಬೇರೆಯಾಗುವುದಕ್ಕೆ ತಾನು ಕಾರಣವಲ್ಲ ಎಂದಿದ್ದಾರೆ.
ಕಮಲ್ ಹಾಸನ್ ಮತ್ತು ಗೌತಮಿ ಅವರ ವೈಯಕ್ತಿಕ ಕಾರಣಗಳಿಂದ ದೂರವಾಗಿರಬಹುದೆಂದು ಹೇಳಿದ್ದಾರೆ. ಇದಕ್ಕೆ ನಾನು ಕಾರಣವೂ ಅಲ್ಲ, ನನಗೆ ಅದು ಬೇಕಾಗಿಯೂ ಇಲ್ಲ ಎಂದು ತಿಳಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.