ನಾನು ಯಾವುದೇ ಪಕ್ಷದವನಲ್ಲ ನಾನೊಬ್ಬ ಕಲಾವಿದನಷ್ಟೇ: ಪ್ರಕಾಶ್ ರೈ

By Suvarna Web DeskFirst Published Feb 24, 2018, 8:59 PM IST
Highlights

ಸರ್ವಜನಾಂಗದ ಶಾಂತಿಯ ತೋಟವೆನಿಸಿರುವ ಕರ್ನಾಟಕದಲ್ಲಿ ಕೆಲವರು ಕೋಮು ಬೀಜಗಳನ್ನು ಬಿತ್ತುತಿದ್ದಾರೆ. ಇಂತವರ ಬಗ್ಗೆ ನೀವು ಎಚ್ಚರದಿಂದ ಇರಬೇಕು  ಇವರನ್ನು ಪ್ರಶ್ನಿಸುವ ಮನೋಭಾವನೆಯನ್ನು ಬೆಳಸಿಕೊಳ್ಳಬೇಕು ಎಂದು ಚಿಕ್ಕಬಳ್ಳಾಪುರದ ಕಾರ್ಯಕ್ರಮವೊಂದರಲ್ಲಿ ನಟ ಪ್ರಕಾಶ್ ರೈ ಹೇಳಿದ್ದಾರೆ. 

ಬೆಂಗಳೂರು (ಫೆ.24): ಸರ್ವಜನಾಂಗದ ಶಾಂತಿಯ ತೋಟವೆನಿಸಿರುವ ಕರ್ನಾಟಕದಲ್ಲಿ ಕೆಲವರು ಕೋಮು ಬೀಜಗಳನ್ನು ಬಿತ್ತುತಿದ್ದಾರೆ. ಇಂತವರ ಬಗ್ಗೆ ನೀವು ಎಚ್ಚರದಿಂದ ಇರಬೇಕು  ಇವರನ್ನು ಪ್ರಶ್ನಿಸುವ ಮನೋಭಾವನೆಯನ್ನು ಬೆಳಸಿಕೊಳ್ಳಬೇಕು ಎಂದು ಚಿಕ್ಕಬಳ್ಳಾಪುರದ ಕಾರ್ಯಕ್ರಮವೊಂದರಲ್ಲಿ ನಟ ಪ್ರಕಾಶ್ ರೈ ಹೇಳಿದ್ದಾರೆ. 

ಕೋಮು ಬೀಜಗಳನ್ನು ಬಿತ್ತುವವರನ್ನು ಪ್ರಶ್ನಿಸುವ ಕೆಲಸವನ್ನು ನಾನು ಮಾಡುತ್ತಿದ್ದೇನೆ.  ಹೀಗಾಗಿ ನನ್ನನ್ನು ಯಾವುದೋ ಒಂದು ಪಕ್ಷದ ಮೂಲಕ ಗುರುತಿಸುವ ಕೆಲಸ ನಡೆಯುತ್ತಿದೆ.  ಜಾತಿ, ಧರ್ಮಗಳ ಹೆಸರಿನಲ್ಲಿ ಗಲಭೆಗಳನ್ನು ಸೃಷ್ಟಿಸಿ ಯುವಕರನ್ನು ಜೈಲಿಗೆ ಕಳುಹಿಸಿ ಅವರು ನೆಮ್ಮದಿಯಾಗಿರುತ್ತಾರೆ.  ಆದರೆ ಈ ಬಗ್ಗೆ ನಾನು ತಲೆ ಕೆಡಿಸಿಕೊಳ್ಳುವುದಿಲ್ಲ ಎಂದಿದ್ದಾರೆ.  

ನಮ್ಮ ಹೆಂಡತಿ ಮಕ್ಕಳು ಬಸ್’ನಲ್ಲಿ ಓಡಾಡುವಾಗ ಯಾರು ಕಲ್ಲು ತೂರದ ರೀತಿ ಸಮಾಜವನ್ನು ಶಾಂತಿಯುತವಾಗಿ ಕಾಪಾಡಬೇಕಿದೆ.  ಇದನ್ನೇ ನಾನು ಮಾಡಲು ಹೊರಟಿದ್ದೇನೆ ಭೂಮಿಗೆ ಬೆಲೆ ಬಂದಿದೆ ಆದರೆ ರೈತರಿಗೆ,ಕೃಷಿಗೆ ಬೆಲೆ ಬಂದಿಲ್ಲ ಎಂದಿದ್ದಾರೆ. 

ನಾನು ಯಾವ ವೇದಿಕೆಗೆ ಹೋದರೂ ನನಗೆ ರಾಜಕೀಯ ಬಣ್ಣ ಬಳೆಯುತ್ತಿದ್ದಾರೆ.  ಆದರೆ ನಾನು ಯಾವುದೇ ಪಕ್ಷದವನಲ್ಲ ನಾನೊಬ್ಬ ಕಲಾವಿದನಷ್ಟೇ ಎಂದು ಪ್ರಕಾಶ್ ರೈ ಹೇಳಿದ್ದಾರೆ. 

click me!