
ಚೆನ್ನೈ: ಕಳೆದ ವರ್ಷ ಎಐಎಡಿಎಂಕೆಯಿಂದ ಇಬ್ಭಾಗವಾಗಿದ್ದ ತಮ್ಮ ಬಣವನ್ನು ಪ್ರಧಾನಿ ನರೇಂದ್ರ ಮೋದಿ ಅವರ ಸಲಹೆಯ ಮೇರೆಗೆ ಮುಖ್ಯಮಂತ್ರಿ ಎಡಪ್ಪಾಡಿ ಕೆ. ಪಳನಿಸ್ವಾಮಿ (ಇಪಿಎಸ್) ಬಣದೊಂದಿಗೆ ವಿಲೀನಗೊಳಿಸಿದ್ದಾಗಿ ತಮಿಳುನಾಡು ಮಾಜಿ ಮುಖ್ಯಮಂತ್ರಿ ಹಾಗೂ ಹಾಲಿ ಉಪಪಮುಖ್ಯಮಂತ್ರಿ ಒ. ಪನ್ನೀರ್‌ಸೆಲ್ವಂ ಹೇಳಿದ್ದಾರೆ.
ಥೇಣಿಯಲ್ಲಿ ಶುಕ್ರವಾರ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಪನ್ನೀರಸೆಲ್ವಂ, ಕಳೆದ ವರ್ಷ ದೆಹಲಿಯಲ್ಲಿ ಮೋದಿ ಅವರ ಜೊತೆ ನಡೆದ ಸೌಜನ್ಯದ ಸಭೆಯಲ್ಲಿ ಈ ವಿಷಯ ಪ್ರಸ್ತಾಪವಾಗಿತ್ತು. ‘ಪಕ್ಷವನ್ನು ಉಳಿಸುವ ಸಲುವಾಗಿ ನಿಮ್ಮ ಬಣವನ್ನು ವಿಲೀನಗೊಳಿಸಬೇಕು’ ಎಂದು ಮೋದಿ ಸಲಹೆ ನೀಡಿದ್ದರು ಹೇಳಿದರು. 2017ರ ಆಸ್ಟ್ನಲ್ಲಿ ಎಐಎಡಿಎಂಕೆಯ ಪನ್ನೀರ್‌ಸೆಲ್ವಂ ಬಣ ಹಾಗೂ ಪಳನಿಸ್ವಾಮಿ ಬಣಗಳು ಒಂದಾಗಿದ್ದವು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.