
ಕಲಬುರಗಿ (ಜ.21): ಬಿಜೆಪಿಯಲ್ಲಿಯೂ ಇದ್ದೇನೆ, ರಾಯಣ್ಣ ಬ್ರಿಗೇಡನ್ನೂ ಕಟ್ಟುತ್ತೇನೆ ಎಂದು ಮಾಜಿ ಸಂಸದ ಕೆ. ವಿರುಪಾಕ್ಷಪ್ಪ ಹೇಳಿದ್ದಾರೆ.
ತಾವು ಬಿಜೆಪಿ ರಾಜ್ಯ ಕಾರ್ಯಕಾರಿಣಿ ಸದಸ್ಯ, ಅದಕ್ಕೆ ಸಭೆಯಲ್ಲಿ ಬಾಗವಹಿಸಲು ಆಗಮಿಸಿದ್ದಾಗಿ ಹೇಳಿದರಲ್ಲದೆ ಬಿಜೆಪಿಯಲ್ಲಿಯೂ ಇರುತ್ತೇವೆ, ಸಂಗೊಳ್ಳಿ ರಾಯಣ್ಣ ಬ್ರಿಗೇಡನ್ನು ಸಂಘಟಿಸುತ್ತೇವೆ, ಹಿಂದುಳಿದವರು, ಶೋಷಿತ ವರ್ಗದವರೆಲ್ಲರನ್ನು ಒಗ್ಗೂಡಿಸಿ ಬ್ರಿಗೇಡ್ ಕಟ್ಟುವುದು ನಮ್ಮ ಗುರಿ. ಭಿನ್ನಮತ ವಿಚಾರವಾಗಿ ತಾವು ಏನನ್ನೂ ಮಾತನಡೋದಿಲ್ಲ ಎಂದು ಹೇಳಿದ ಅವರು ಶೋಷಿತರ ಸಂಘಟನೆಯೇ ನಮ್ಮ ಬ್ರಿಗೆಡ್ ಗುರಿ ಎಂದರಲ್ಲದೆ ಜ.26 ರಂದು ಕೂಡಲ ಸಂಗಮದಲ್ಲಿ ಬ್ರಿಗೇಡ್ ರಾಜ್ಯ ಸಮಾವೇಶ ಅದ್ದೂರಿಯಾಗಿ ನಡೆಯುತ್ತದೆ.
ಬಿಜೆಪಿಗೆ ಬೆಂಬಲಿಸುವ ಬ್ರಿಗೇಡ್ ನಿಲುವಿನಲ್ಲಿ ಬದಲಾವಣೆಯಾಗಲು ಯಡಿಯೂರಪ್ಪ ಹೇಳಿಕೆಯೇ ಕಾರಣ. ನಾವು ಬಿಜೆಪಿ ಬೆಂಬಲಿಸುತ್ತ ಯಡಿಯೂರಪ್ಪರನ್ನೇ ಸಿಎಂ ಮಾಡುವ ನಿಲುವು ಹೊಂದಿದ್ದೇವು. ಯಡಿಯೂರಪ್ಪನವರೇ ಬ್ರಿಗೇಡ್ ಬೆಂಬಲ ಬೇಡ ಎಂದಾಗ ನಾವು ಏನು ಮಾಡಲು ಸಾಧ್ಯ? ಅದಕ್ಕೇ ನಮ್ಮ ನಿಲುವಿನಲ್ಲಿ ಬದಲಾವಣೆ ಮಾಡಿಕೊಳ್ಳಬೇಕಾಯ್ತು ಎಂದು ಸ್ಪಷ್ಟಪಡಿಸಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.