ಸಮುದಾಯ ಭವನದಲ್ಲಿ ಅನೈತಿಕ ಕೆಲಸ: ರಹಸ್ಯ ಕಾರ್ಯಾಚರಣೆಯಲ್ಲಿ ಬಯಲಾಯ್ತು ಅಧಿಕಾರಿಗಳ ಆಟ

Published : Aug 31, 2017, 04:32 PM ISTUpdated : Apr 11, 2018, 12:55 PM IST
ಸಮುದಾಯ ಭವನದಲ್ಲಿ ಅನೈತಿಕ ಕೆಲಸ: ರಹಸ್ಯ ಕಾರ್ಯಾಚರಣೆಯಲ್ಲಿ ಬಯಲಾಯ್ತು ಅಧಿಕಾರಿಗಳ ಆಟ

ಸಾರಾಂಶ

ಅದು ಹೆಸರಿಗೆ ಸಮುದಾಯ ಭವನ. ಆದ್ರೆ ಅಲ್ಲಿ ನಡೀತಿರೋದು ಮಾತ್ರ ಬಾರ್ ಅಂಡ್ ರೆಸ್ಟೋರೆಂಟ್. ಮಕ್ಕಳ  ಬೌದ್ಧಿಕ ವಿಕಸನಕ್ಕಾಗಿ ನಿರ್ಮಾಣವಾದ ಸಮುದಾಯ ಭವನದಲ್ಲಿ ನಡೀತಿದ್ದ ಗುಂಡು ಪಾರ್ಟಿ, ಜೊತೆಗೆ ಕಾರ್ಡ್ಸ್ ಆಡೋ ದಂಧೆ, ಇದೀಗ ಸುವರ್ಣನ್ಯೂಸ್ ರಹಸ್ಯ ಕಾರ್ಯಾಚರಣೆಯಲ್ಲಿ  ಬಯಲಾಗಿದೆ.

ಬೆಂಗಳೂರು(ಆ.31): ಸದಭಿವೃಚಿಯ ಉದ್ದೇಶಕ್ಕೆ ನಿರ್ಮಾಣವಾಗುತ್ತಿರುವ ಸಮುದಾಯ ಭವನ ಆರಂಭಕ್ಕೂ ಮುನ್ನವೇ ಅನೈತಿಕ ತಾಣವಾಗಿದೆ. ಕೆಳಮಹಡಿಯು  ಬಾರ್ ಎಂಡ್ ರೆಸ್ಟೋರೆಂಟ್  ಆಗಿ ಮಾರ್ಪಟ್ಟಿದೆ. 1968 ರಲ್ಲಿ ಜಯನಗರ ಬ್ಲಾಕ್ನ ಸ್ಥಳೀಯರು ಸಾಂಸ್ಕೃತಿಕ ಕಾರ್ಯಕ್ರಮಗಳಿಗಾಗಿ  ಬಿಡಿಎ ನಿಂದ ಸೈಟ್ ಪಡೆದಿದ್ದು, ಕಾರ್ಯಕ್ರಮಗಳೂ ನಡೆಯುತ್ತಿದ್ದವು. ಆದರೆ 2014ಕ್ಕೆ  ಮೂವತ್ತು ವರ್ಷ ಮುಗಿದ ಹಿನ್ನೆಲೆ  ಸಮುದಾಯ ಭವನವನ್ನ ಕೆಡವಿ ಹೊಸದಾಗಿ ಕಟ್ಟಿಲಾಗ್ತದೆ.

ಅಂದಹಾಗೆ, ಸಮುದಾಯ ಭವನದ ಆಡಳಿತ ಮಂಡಳಿಯಲ್ಲಿ ಬರೋಬ್ಬರಿ 900 ಜನ ಸದಸ್ಯರಿದ್ದಾರೆ. ವಿಷಯ ಅಂದ್ರೆ ಬಿಡಿಎ, ಬಿಬಿಎಂಪಿ, ಅಬಕಾರಿ ಇಲಾಖೆಯ ಅಧಿಕಾರಿಗಳೇ  ಇಲ್ಲಿ ಬಂದು ಮಜಾ ಮಾಡ್ತಿದ್ದಾರೆ. ಅಂದ ಹಾಗೆ ಹೊರಗಿನವ್ರೂ ಸಹ ಸಮುದಾಯ ಭವನದ ಬಾರ್ ಆಂಡ್ ರೆಸ್ಟೋರೆಂಟ್ ಗೆ 60 ರೂಪಾಯಿ ನೀಡಿ ಬರ್ತಿದ್ದಾರೆ . ಇಷ್ಟೆಲ್ಲ ನಡೀತಿದ್ರೂ ಬಿಡಿಎ ಮಾತ್ರ ಕಣ್ಮುಚ್ಚಿ ಕುಳಿತಿದೆ.

ಅನೈತಿಕ ಕಾರ್ಯದಲ್ಲಿ  ಇಲಾಖೆಯ ಅಧಿಕಾರಿಗಳೇ  ಶಾಮಿಲಾಗಿರೋದು ಮಾತ್ರಾ ನಾಚಿಕೆಗೇಡಿನ ವಿಷಯ. ಈಗಲಾದ್ರು ಸಂಬಂದಪಟ್ಟ ಅಧಿಕಾರಿಗಳು ಎಚ್ಚೆತ್ತು ಕೂಡಲೆ ಕ್ರಮ ಜರುಗಿಸಬೇಕಿದೆ. ಸಮುದಾಯ ಭವನದಲ್ಲಿ ಮಕ್ಕಳ ಸಾಂಸ್ಕೃತಿಕ ಚಟುವಟಿಕೆಗಳ ಅನಾವರಣಕ್ಕೆ ಅವಕಾಶ ಕಲ್ಪಿಸಬೇಕಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಟಿಕೆಟ್ ಇಲ್ಲದ ಪ್ರಯಾಣಿಕರಿಂದ ಈ ವರ್ಷ ಭಾರತೀಯ ರೈಲ್ವೇ ವಸೂಲಿ ಮಾಡಿದ ದಂಡ ಎಷ್ಟು?
ರಾಯಚೂರು ಲೋಕಾ ದಾಳಿ, ಎಇಇ ವಿಜಯಲಕ್ಷ್ಮಿ ಮನೆಯಲ್ಲಿ ಸಿಕ್ತು ಲೆಕ್ಕವಿಲ್ಲದಷ್ಟು ಆಸ್ತಿ, ಚಿನ್ನ! ಬೆಳಗ್ಗಿನಿಂದ ಇನ್ನೂ ಮುಗಿಯದ ಶೋಧ!