
ವಾಷಿಂಗ್ಟನ್(ಆ.04): ವೈದ್ಯಕೀಯ ಸೇವೆ ವಾಣಿಜ್ಯೀಕರಣಗೊಂಡಿರುವ ಹೊತ್ತಲ್ಲಿ, ಮಾನವೀಯತೆಗೆ ಕನ್ನಡಿ ಹಿಡಿದಂತಿರುವ ಇಂತಹ ಘಟನೆಗಳು, ಆ ವೃತ್ತಿಯ ಮೇಲೆ ಜನ ಇಟ್ಟಿರುವ ನಂಬಿಕೆ ಇನ್ನಷ್ಟು ದೃಢವಾಗುವಂತೆ ಮಾಡುತ್ತದೆ. ಅಮೆರಿಕದ ಕೆಂಟುಕಿ ಪ್ರಾದೇಶಿಕ ವೈದ್ಯಕೀಯ ಕೇಂದ್ರದ ವೈದ್ಯೆಯೊಬ್ಬರು, ಸ್ವತಃ ಹೆರಿಗೆ ಯಾಗುವವರಿದ್ದರೂ, ಮತ್ತೊಬ್ಬ ಮಹಿಳೆಗೆ ಹೆರಿಗೆ ಮಾಡಿಸಿ ಸುದ್ದಿಯಾಗಿದ್ದಾರೆ.
ಡಾ. ಅಮಂಡಾ ಹೆಸ್ಸ್ ತನ್ನದೇ ಹೆರಿಗೆಗಾಗಿ ಕ್ಷಣಗಣನೆಯಲ್ಲಿದ್ದರು. ಇನ್ನೇನು ಹೆರಿಗೆಗೆ ಅಣಿಯಾಗಬೇಕು ಅನ್ನುವಷ್ಟರಲ್ಲಿ ಮತ್ತೋರ್ವ ಗರ್ಭಿಣಿ ಹೆರಿಗೆ ನೋವಿನಿಂದ ಅಳುತ್ತಿರುವುದನ್ನು ಕೇಳಿಸಿಕೊಂಡರು. ತಕ್ಷಣ ಕಾರ್ಯೋನ್ಮುಖರಾದ ವೈದ್ಯೆ ಅಮಂಡಾ, ಆ ಹೆರಿಗೆಯ ಜವಾಬ್ದಾರಿ ವಹಿಸಿಕೊಂಡರು.
ತನ್ನ ಸುರಕ್ಷತೆಗೆ ಬೇಕಾದ ಕ್ರಮಗಳನ್ನು ಕೈಕೊಂಡು ಮಹಿಳೆಯ ಹೆರಿಗೆಗೆ ಮುಂದಾದರು. ಮಹಿಳೆಯ ಹೆರಿಗೆ ಮಾಡಿಸುವುದರಲ್ಲಿ ಯಶಸ್ವಿಯಾದರು. ಆ ನಂತರ ಕೆಲವೇ ಕ್ಷಣಗಳಲ್ಲಿ ತನ್ನ ಮಗುವಿಗೂ ಅಮಂಡಾ ಜನ್ಮ ನೀಡಿದರು
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.