
ಹೈದರಾಬಾದ್ (ನ.14): ಭಿಕ್ಷುಕರನ್ನು ಪತ್ತೆ ಮಾಡಿದ್ರೆ ನಿಮಗೆ 500 ರೂಪಾಯಿ ಬಹುಮಾನ ಸಿಗಲಿದೆ. ನವೆಂಬರ್ 25 ರ ನಂತರ ಹೈದರಾಬಾದ್'ನಲ್ಲಿ ನೀವು ಭಿಕ್ಷುಕರನ್ನ ಹಿಡದುಕೊಟ್ಟರೆ ನಿಮಗೆ ಸರ್ಕಾರದಿಂದ 500 ರೂಪಾಯಿ ಹಣ ಸಿಗಲಿದೆ.
ನ. 28 ರಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಪುತ್ರಿ ಇವಾಂಕಾ ಟ್ರಂಪ್ ಹೈದರಾಬಾದ್ ಗೆ ಆಗಮಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ನಗರವನ್ನು ಸಂಪೂರ್ಣವಾಗಿ ಭಿಕ್ಷುಕರಿಂದ ಮುಕ್ತಗೊಳಿಸುವುದು ಸರ್ಕಾರದ ಉದ್ದೇಶವಾಗಿದ್ದು, ಅಕ್ಟೋಬರ್ ವಾರಾಂತ್ಯದಿಂದಲೇ ಭಿಕ್ಷುಕರನ್ನು ಹಿಡಿಯುವ ಕೆಲಸ ಆರಂಭವಾಗಿದ್ದು. ನ. 25 ರ ನಂತರ ರಸ್ತೆ ಬದಿಯಲ್ಲಿ, ಫುಟ್ಪಾತ್, ರೈಲು ನಿಲ್ದಾಣ, ಸೇತುವೆಗಳ ಕೆಳಗೆ ಎಲ್ಲಾದರೂ ಭಿಕ್ಷುಕರನ್ನು ಕಂಡರೆ ಸಾರ್ವಜನಿಕರು ಮಾಹಿತಿ ನೀಡಬಹುದು. ಅಂಥವರಿಗೆ 500 ರೂಪಾಯಿ ಸರ್ಕಾರದ ವತಿಯಿಂದ ದೊರೆಯಲಿದೆ. ಈಗಾಗಲೇ ಸುಮಾರು 200 ಕ್ಕೂ ಹೆಚ್ಚು ಭಿಕ್ಷುಕರನ್ನು ಹಿಡಿದು ಅವರ ಬೆರಳಚ್ಚು ಮತ್ತು ಇತರ ದಾಖಲೆಗಳನ್ನು ಪಡೆದುಕೊಂಡು ಬಿಟ್ಟು ಕಳಿಸಲಾಗಿದೆ. ಮತ್ತೊಮ್ಮೆ ಅವರು ಭಿಕ್ಷೆ ಬೇಡಿದ್ದು ಕಂಡುಬಂದಲ್ಲಿ ಜೈಲಿಗೆ ಹಾಕುವುದಾಗಿ ಸರ್ಕಾರ ಎಚ್ಚರಿಸಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.