ರಮೇಶ ರಾಜೀನಾಮೆಯಿಂದ ಸರಕಾರಕ್ಕೆ ನಷ್ಟವಿಲ್ಲ: ಸಚಿವ

Published : Apr 26, 2019, 12:13 PM IST
ರಮೇಶ ರಾಜೀನಾಮೆಯಿಂದ ಸರಕಾರಕ್ಕೆ ನಷ್ಟವಿಲ್ಲ: ಸಚಿವ

ಸಾರಾಂಶ

ಅತೃಪ್ತ ಮುಖಂಡ  ರಮೇಶ್ ಜಾರಕಿಹೊಳಿ ಒಂದು ವೇಳೆ ರಾಜೀನಾಮೆ ನೀಡಿದರೆ ಸರ್ಕಾರಕ್ಕೆ ಯಾವುದೇ ರೀತಿಯ ಸಮಸ್ಯೆಯಾಗದು ಎಂದು ಸಚಿವರು ಹೇಳಿದ್ದಾರೆ. 

ಬೆಳಗಾವಿ :  ನಾನು ಕಾಂಗ್ರೆಸ್ ಕಟ್ಟಾಳು ನಾನು ಬೆಳಗಾವಿಗೆ ಬಂದಿದ್ದು ಮಾಜಿ ಸಚಿವ ರಮೇಶ ಜಾರಕಿಹೊಳಿ ಸಂಧಾನಕ್ಕಲ್ಲ ಎಂದು ಸಚಿವ ಸಿ.ಪುಟ್ಟರಂಗಶೆಟ್ಟಿ ಹೇಳಿದ್ದಾರೆ. 

ಮಾಧ್ಯಮವನ್ನುದ್ದೇಶಿಸಿ ಮಾತನಾಡಿದ ಅವರು ಮಾಜಿ ಸಚಿವ ರಮೇಶ ಜಾರಕಿಹೊಳಿ ಕಾಂಗ್ರೆಸ್‍ನ ನಿಷ್ಠಾವಂತ ಶಾಸಕ ಅವರು ರಾಜೀನಾಮೆ ನೀಡುವುದಿಲ್ಲ. ನಾನು ಬೆಳಗಾವಿಗೆ ಬಂದಿದ್ದು ಸಂಬಂಧಿಕರ ಮದುವೆಗೆ ಈಗಾಗಲೇ ರಮೇಶ ಅವರನ್ನು ಮನವೊಲಿಸಲು ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ನಡೆಸಲಿದ್ದಾರೆ ಸಚಿವ ಪುಟ್ಟರಂಗಶೆಟ್ಟಿ ಹೇಳಿದರು. 

ಇನ್ನು ಸದ್ಯ ರಾಜ್ಯದಲ್ಲಿ ಸಮ್ಮಿಶ್ರ ಸರಕಾರ ಸುಭದ್ರವಾಗಿದೆ. ಮಾಜಿ ಸಚಿವ ರಮೇಶ ಜಾರಕಿಹೊಳಿ ಒಂದು ವೇಳೆ ರಾಜೀನಾಮೆ ನೀಡಿದರೆ ಯಾವುದೇ ನಷ್ಟವಾಗುವುದಿಲ್ಲ. ನಾನು ಬಂದಿದ್ದು, ರಮೇಶ್ ಜೊತೆಗೆ ಸಂಧಾನಕ್ಕಲ್ಲ. ನಾನು ಯಾರ ಬಣದಲ್ಲಿಯೂ ಇಲ್ಲ. ಪಕ್ಷ ವಿರೋಧಿ ಚಟುವಟಿಕೆ ನಾನು ಎಂದೂ ಮಾಡಿಲ್ಲ ಎಂದು ಸಚಿವ ಪುಟ್ಟರಂಗಶೆಟ್ಟಿ ಸ್ಪಷ್ಟಪಡಿಸಿದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

India Latest News Live: ಅಯೋಧ್ಯೆಯಲ್ಲಿ 2.67 ಎಕ್ರೆ ಭೂಮಿ 35 ಕೋಟಿ ರು.ಗೆ ಖರೀದಿಸಿದ ಅಮಿತಾಭ್‌
Karnataka News Live: ಯಾವುದೇ ಕೋಚಿಂಗ್‌ ಇಲ್ಲದೇ UPSCಯಲ್ಲಿ ಹುಬ್ಬಳ್ಳಿಯ ಕೃಪಾ ಸಫಲ; 5 ಪ್ರಯತ್ನಗಳ ಪೈಕಿ ನಾಲ್ಕರಲ್ಲಿ ಯಶಸ್ವಿ