ಹುಷಾರ್ : ಪೋಷಕರು ತಮ್ಮ ಆಸ್ತಿ ವಾಪಸ್ ಪಡೆಯಬಹುದು ..!

By Web DeskFirst Published Jul 16, 2018, 4:00 PM IST
Highlights

ಪೋಷಕರು ತಮ್ಮ ಮಕ್ಕಳಿಗೆ ನೀಡಿದ ಆಸ್ತಿಯನ್ನು ಅವರು ನೋಡಿಕೊಳ್ಳದಿದ್ದಲ್ಲಿ ವಾಪಸ್ ಪಡೆದುಕೊಳ್ಳಬಹುದು ಎಂದು ಬಾಂಬೆ ಹೈ ಕೋರ್ಟ್ ಮಹತ್ವದ ಆದೇಶವೊಂದನ್ನು ನೀಡಿದೆ.

ಮುಂಬೈ : ಪೋಷಕರು ತಮ್ಮ ಮಕ್ಕಳಿಗೆ ನೀಡಿದ ಆಸ್ತಿಯನ್ನು ಅವರು ನೋಡಿಕೊಳ್ಳದಿದ್ದಲ್ಲಿ ವಾಪಸ್ ಪಡೆದುಕೊಳ್ಳಬಹುದು ಎಂದು ಬಾಂಬೆ ಹೈ ಕೋರ್ಟ್ ಮಹತ್ವದ ಆದೇಶವೊಂದನ್ನು ನೀಡಿದೆ. 

ನ್ಯಾಯಮೂರ್ತಿ ರಂಜಿತ್ ಮೋರ್ ಅವರ ನೇತೃತ್ವದ ಪೀಠವು ಇದೀಗ ಮಹತ್ವದ ಆದೇಶವನ್ನು ನೀಡಿದೆ. ಮಕ್ಕಳು ತಂದೆ - ತಾಯಿಯನ್ನು ನೋಡಿಕೊಳ್ಳದೇ ಹೋದಲ್ಲಿ ಮಕ್ಕಳ ಹೆಸರಿಗೆ ಈಗಾಗಲೇ ನೀಡಿದ್ದಲ್ಲಿ ವಾಪಸ್ ಪಡೆದುಕೊಳ್ಳುವ ಹಕ್ಕು ಪೋಷಕರಿಗೆ ಇರುತ್ತದೆ ಎಂದು ನ್ಯಾಯಪೀಠ ಹೇಳಿದೆ. 

 ಹಿರಿಯ ನಾಗರಿಕರ ಕಾಯ್ದೆಯ 2007ರ ಪ್ರಕಾರವಾಗಿ ನಿಮ್ಮ ಮನೆಯ ಹಿರಿಯರನ್ನು ನೋಡಿಕೊಳ್ಳದೇ ಹೋದಲ್ಲಿ ಅದರಲ್ಲಿ ಉಲ್ಲೇಖವಾಗಿರುವ ನಿಯಮಗಳ ಪ್ರಕಾರ ವಾಪಸ್ ಪಡೆಯಲು ಅವಕಾಶವಿದೆ. 

ಮುಂಬೈನ ವ್ಯಕ್ತಿಯೋರ್ವರು ಈ ಸಂಬಂಧ ದಾಖಲಿಸಿದ್ದ ಪ್ರಕರಣವೊಂದನ್ನು ವಿಚಾರಣೆ ನಡೆಸಿದ ಕೋರ್ಟ್ ಈ ತೀರ್ಪನ್ನು ನೀಡಿದೆ. ಈ ವ್ಯಕ್ತಿ ತನ್ನ ಮೊದಲ ಪತ್ನಿಯನ್ನು ಕಳೆದುಕೊಂಡ ಬಳಿಕ 2ನೇ ವಿವಾಹವಾದರು. ಇದಕ್ಕೂ ಮೊದಲೇ ಮಗನಿಗೆ ತಮ್ಮ ಆಸ್ತಿಯನ್ನು ಶೇ.50ರಷ್ಟು ಪಾಲನ್ನು ನೀಡಿದ್ದರು. 

 2ನೇ ವಿವಾಹವಾದ ಬಳಿಕ ಮಗ ಹಾಗೂ ಸೊಸೆಯಿಂದ ಕಿರುಕುಳ ಆರಂಭವಾಗಿದ್ದು ಬಳಿಕ ಕೋರ್ಟ್ ಮೆಟ್ಟಿಲೇರಿದರು. ಈ ಸಂಬಂಧ ವಿಚಾರಣೆ ನಡೆಸಿದ ಕೋರ್ಟ್ ಈ ತೀರ್ಪನ್ನು ನೀಡಿದೆ.

click me!