ಅವಕಾಶವಿದ್ದರೆ ಕಾಶ್ಮೀರಿಗಳು ಪ್ರತ್ಯೇಕವಾಗಲು ಬಯಸುತ್ತಾರೆ : ಕಾಂಗ್ರೆಸ್ ಮುಖಂಡ

Published : Jun 22, 2018, 12:14 PM IST
ಅವಕಾಶವಿದ್ದರೆ ಕಾಶ್ಮೀರಿಗಳು ಪ್ರತ್ಯೇಕವಾಗಲು ಬಯಸುತ್ತಾರೆ : ಕಾಂಗ್ರೆಸ್ ಮುಖಂಡ

ಸಾರಾಂಶ

ಕಾಂಗ್ರೆಸ್ ಹಿರಿಯ ನಾಯಕ ಮಾಜಿ ಕೇಂದ್ರ ಸಚಿವ ಸೈಫುದ್ದಿನ್ ಸೋಜ್ ಕಾಶ್ಮೀರದ ವಿಚಾರವಾಗಿ ನೀಡಿದ ಹೇಳಿಕೆಯೊಂದು ಇದೀಗ ವಿವಾದಕ್ಕೆ ಈಡಾಗಿದೆ.  

ನವದೆಹಲಿ : ಕಾಂಗ್ರೆಸ್ ಹಿರಿಯ ನಾಯಕ ಮಾಜಿ ಕೇಂದ್ರ ಸಚಿವ ಸೈಫುದ್ದಿನ್ ಸೋಜ್ ಕಾಶ್ಮೀರದ ವಿಚಾರವಾಗಿ ನೀಡಿದ ಹೇಳಿಕೆಯೊಂದು ಇದೀಗ ವಿವಾದಕ್ಕೆ ಈಡಾಗಿದೆ.  

ಕಾಶ್ಮೀರಿಗಳು ಪಾಕಿಸ್ತಾನದೊಂದಿಗೆ ಸೇರಲು ಬಯಸುವುದಿಲ್ಲ. ಅವರ ಮೊದಲ ಆದ್ಯತೆ ಸ್ವತಂತ್ರವಾಗುವುದು ಎಂದು ಈ ಹಿಂದೆ ಮುಷರಫ್ ಹೇಳಿದ್ದ ಹೇಳಿಕೆಯನ್ನೇ ಅವರು ಸಮರ್ಥನೆ ಮಾಡಿಕೊಂಡಿದ್ದಾರೆ. 

ಈಗ ಅದೇ ರೀತಿ ಹೇಳಿಕೆ ನೀಡಿದ  ಮಾಜಿ ಸಚಿವರೂ ಹಾಗೂ ಕಾಂಗ್ರೆಸ್ ಮುಖಂಡರೂ ಆದ ಸೈಫುದ್ದಿನ್  ಕಾಶ್ಮೀರಿಗಳಿಗೆ  ಅವಕಾಶ ಕೊಟ್ಟರೆ ಅವರು ಸ್ವತಂತ್ರರಾಗಲು ಬಯಸುತ್ತಾರೆ ಎಂದು ಹೇಳಿದ್ದಾರೆ.  

2007ರಲ್ಲಿ ಮುಷರಫ್ ಈ ಹೇಳಿಕೆ ನೀಡಿದ್ದರು. ಅಂದಿನ ಪ್ರಧಾನಿಯಾಗಿದ್ದ ಮನಮೋಹನ್ ಸಿಂಗ್ ಅವರು ಇಸ್ಲಮಬಾದ್ ಶೃಂಗ ಸಭೆಗಾಗಿ ಭೇಟಿ ನೀಡಲು ನಿರ್ಣಯಿಸಿದ್ದ ವೇಳೆ ಇಂತಹ ಹೇಳಿಕೆ ನೀಡಿದ್ದರು. ಇದೀಗ ಕಾಂಗ್ರೆಸ್ ಹಿರಿಯ ಮುಖಂಡ ಅಂತಹದ್ದೇ ಹೇಳಿಕೆ ನೀಡಿರುವುದು ವಿವಾದಕ್ಕೆ ಈಡಾಗಿದೆ. 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಇದೇ ಮೊದಲ ಬಾರಿಗೆ ಅತೀ ದುಬಾರಿಯಾದ ಬೆಳ್ಳಿ, ಚಿನ್ನಕ್ಕಿಂತ ವೇಗದಲ್ಲಿ ಸಾಗುತ್ತಿದೆ ಸಿಲ್ವರ್
ರಾಜ್ಯದ ತಾಪಮಾನ 12°Cಗೆ ಕುಸಿತ-ಕರುನಾಡಿಗೆ ಶೀತ ಕಂಟಕ ಖಚಿತ-ಬೆಂಗಳೂರು ಜನತೆಗೆ ಮೈನಡುಕ ಉಚಿತ!