ಪ್ರವಾಹ ಪೀಡಿತರ ನೆರವಿಗೆ ಅಕ್ಕಿ ಮೂಟೆ ಹೊತ್ತ ಐಎಎಸ್ ಆಫಿಸರ್

By Web Desk  |  First Published Aug 15, 2018, 12:48 PM IST

ಯುವ ಐಎಎಸ್ ಅಧಿಕಾರಿಯೋರ್ವರು ಇದೀಗ ಎಲ್ಲರಿಗೂ ಕೂಡ ಮಾದರಿಯಾಗಿದ್ದಾರೆ. ಕೇರಳದಲ್ಲಿ ಭಾರೀ ಮಳೆ ಸುರಿಯುತ್ತಿದ್ದು ಇಲ್ಲಿನ ನಿರಾಶ್ರಿತ ಶಿಬಿರಗಳಿಗೆ ಸ್ವತಃ ಅಕ್ಕಿ ಮೂಟೆಗಳನ್ನು ತಾವೇ ಹೊತ್ತು ಹಾಕಿದ್ದಾರೆ. 


ವಯನಾಡು :  ಕೇರಳದಲ್ಲಿ ಭಾರೀ ಪ್ರಮಾಣದಲ್ಲಿ ಮಳೆ ಸುರಿಯುತ್ತಿದ್ದು, ಜನರ ರಕ್ಷಣೆಗೆ ನಿರಾಶ್ರಿತರ ಶಿಬಿರಗಳನ್ನು ತೆರೆಯಲಾಗಿದೆ. ಅನೇಕರು ಶಿಬಿರಗಳಲ್ಲಿ  ಆಶ್ರಯ ಪಡೆದುಕೊಂಡಿದ್ದು, ಇಲ್ಲಿಗೆ ವಿವಿಧ ರೀತಿಯ ಆಹಾರ ಸಾಮಾಗ್ರಿಗಳನ್ನು ಪೂರೈಕೆ ಮಾಡಲಾಗುತ್ತಿದೆ. 

ವಿವಿಧ ಅಧಿಕಾರಿಗಳು ರಕ್ಷಣಾ ಕಾರ್ಯದಲ್ಲಿ ಪಾಲ್ಗೊಂಡಿದ್ದು ಇದೇ ವೇಳೆ ಐಎಎಸ್ ಅಧಿಕಾರಿಯೋರ್ವರು ಇದೀಗ ಎಲ್ಲರಿಗೂ ಕೂಡ ಮಾದರಿಯಾಗಿದ್ದಾರೆ. 

Latest Videos

undefined

ಇಲ್ಲಿನ ರಿಲೀಫ್ ಕ್ಯಾಂಪ್ ಗಳಿಗೆ ಆಹಾರ ಸಾಮಾಗ್ರಿಗಳ ಪೂರೈಕೆ ಮಾಡುವ ವೇಳೆ  ಸ್ವತಃ ಐಎಎಸ್ ಅಧಿಕಾರಿಯಾದ ಜಿ. ರಾಜಾಮಾಣಿಕ್ಯಮ್ ಮತ್ತು ಸಬ್ ಕಲೆಕ್ಟರ್  ಉಮೇಶ್ ಅವರು ಎಲ್ಲರಿಗೂ ಮಾದರಿಯಾಗುವಂತಹ ಕಾರ್ಯಗಳನ್ನು ಮಾಡಿದ್ದಾರೆ. 

ಸ್ವತಃ ತಾವೇ ವಾಹನಗಳಿಂದ ಅಕ್ಕಿಯ ಮೂಟೆಗಳನ್ನು  ಅನ್ ಲೋಡ್ ಮಾಡುವ ಕೆಲಸವನ್ನು  ಮಾಡಿದ್ದಾರೆ. ಈ ಮೂಲಕ ಎಲ್ಲರಿಗೂ ಕೂಡ ಮಾದರಿಯಾಗಿದ್ದಾರೆ. ಅವರ ಈ ಕೆಲಸ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು ಎಲ್ಲರಿಂದ ಮೆಚ್ಚುಗೆ ವ್ಯಕ್ತವಾಗಿದೆ. 

ಕೇರಳ ಹಾಗೂ ಕರ್ನಾಟಕದಲ್ಲಿ ಭಾರೀ ಪ್ರಮಾಣದಲ್ಲಿ ಮಳೆ ಸುರಿಯುತ್ತಿದ್ದು, ಹಲವೆಡೆ ಪ್ರವಾಹ ಪರಿಸ್ಥಿತಿ ನಿರ್ಮಾಣವಾಗಿದೆ. 

 

Setting an example! G Rajamanikyam IAS & NSK Umesh IAS Sub-Collector, Wayanad unloading rice bags at Collectorate, Wayanad for distribution to Relief Camps. Joined hands with other employees, at around 9.30 pm unload a vehicle full of rice bags. pic.twitter.com/xaBqTSMrH4

— IAS Association (@IASassociation)
click me!