
ಶ್ರೀನಗರ[ಮಾ.27]: ಇತ್ತೀಚೆಗಷ್ಟೇ ಪಾಕ್ ವಶದಿಂದ ಬಿಡುಗಡೆಯಾಗಿ ಬಂದು, 4 ವಾರಗಳ ರಜೆಯ ಮೇಲೆ ತೆರಳಿದ್ದ ಭಾರತೀಯ ವಾಯುಪಡೆಯ ವಿಂಗ್‌ಕಮಾಂಡರ್ ಅಭಿನಂದನ್, ಮತ್ತೆ ತಮ್ಮ ಸ್ಕ್ವಾಡ್ರನ್ ಸೇರಿಕೊಂಡಿದ್ದಾರೆ.
ರಜೆಯ ಅವಧಿಯನ್ನು ಚೆನ್ನೈನಲ್ಲಿನ ಕುಟುಂಬ ಸದಸ್ಯರ ಜೊತೆ ಕಳೆಯುವ ಬದಲು ಅಭಿನಂದನ್ ಅವರು ಸೇನಾ ನೆಲೆಯಲ್ಲೇ ಇರಲು ಬಯಸಿ, ಶ್ರೀನಗರಕ್ಕೆ ಆಗಮಿಸಿದ್ದಾರೆ. ಪುಲ್ವಾಮಾ ದಾಳಿ ಬಳಿಕ ಭಾರತದ ವಾಯುನೆಲೆ ಮೇಲೆ ದಾಳಿಗೆ ಬಂದಿದ್ದ ಪಾಕಿಸ್ತಾನ ಎಫ್-16 ಯುದ್ಧ ವಿಮಾನವೊಂದನ್ನು ಬೆನ್ನಟ್ಟಿಹೋಗಿದ್ದ ಅಭಿ, ಪಾಕ್ ಯೋಧರ ಕೈಗೆ ಸಿಕ್ಕಿಬಿದ್ದಿದ್ದರು.
ಎರಡು ದಿನಗಳ ಕಾಲ ಅವರನ್ನು ತನ್ನ ವಶದಲ್ಲಿ ಇಟ್ಟುಕೊಂಡಿದ್ದ ಪಾಕ್, ಅವರಿಗೆ ಭಾರೀ ಮಾನಸಿಕ ಹಿಂಸೆ ನೀಡಿತ್ತು. ಈ ಹಿನ್ನೆಲೆಯಲ್ಲಿ ಅವರನ್ನು ಕೆಲ ಪರೀಕ್ಷೆಗೆ ಗುರಿಪಡಿಸಿದ ಬಳಿಕ ನಾಲ್ಕು ವಾರಗಳ ಅನಾರೋಗ್ಯ ರಜೆ ಮೇಲೆ ಮನೆಗೆ ಕಳುಹಿಸಲಾಗಿತ್ತು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.