ಚುನಾವಣಾ ಕಣಕ್ಕೆ ಪರ್ರಿಕರ್‌ ಪುತ್ರ ಉತ್ಪಲ್? ತನ್ನ ನಿಯಮ ತಾನೇ ಉಲ್ಲಂಘಿಸುತ್ತಾ BJP?

By Web DeskFirst Published Mar 27, 2019, 10:13 AM IST
Highlights

ಪಣಜಿಯಲ್ಲಿ ಪರ್ರಿಕರ್‌ ಪುತ್ರ ಕಣಕ್ಕೆ?|  ಅನುಕಂಪದ ಟಿಕೆಟ್‌ ಇಲ್ಲವೆಂಬ ನಿಯಮ ಮುರಿಯುತ್ತಾ ಬಿಜೆಪಿ?

ಪಣಜಿ[ಮಾ.27]: ಮಾಜಿ ಸಿಎಂ ಮನೋಹರ್‌ ಪರ್ರಿಕರ್‌ ನಿಧನದಿಂದ ತೆರವಾಗಿರುವ ಪಣಜಿ ವಿಧಾನಸಭಾ ಕ್ಷೇತ್ರಕ್ಕೆ ಅವರ ಪುತ್ರ ಉತ್ಪಲ್‌ ಅವರನ್ನು ಕಣಕ್ಕೆ ಇಳಿಸುವ ಬಗ್ಗೆ ಪಕ್ಷದ ನಾಯಕರು ಗಂಭೀರ ಚಿಂತನೆ ನಡೆಸಿದ್ದಾರೆ ಎನ್ನಲಾಗಿದೆ.

ಇತ್ತೀಚೆಗೆ ಉತ್ಪಲ್‌ ಅವರನ್ನು ಭೇಟಿಯಾಗಿದ್ದ ಬಿಜೆಪಿ ರಾಷ್ಟ್ರೀಯ ಉಪಾಧ್ಯಕ್ಷ ಅವಿನಾಶ್‌ ರೈ ಖನ್ನಾ, ಸಕ್ರಿಯ ರಾಜಕೀಯದಲ್ಲಿ ತೊಡಗಿಸಿಕೊಳ್ಳುವಂತೆ ಸಲಹೆ ನೀಡಿದ್ದಾರೆ. ಇದು ಉತ್ಪಲ್‌ ಅವರನ್ನು ಪಣಜಿ ಉಪಚುನಾವಣೆಯಲ್ಲಿ ಕಣಕ್ಕೆ ಇಳಿಸುವ ಯತ್ನ ಎಂದೇ ಹೇಳಲಾಗಿದೆ.

ಪ್ರಸಕ್ತ ಲೋಕಸಭಾ ಚುನಾವಣೆ ಟಿಕೆಟ ಹಂಚಿಕೆ ವೇಳೆ ಅನುಕಂಪದ ಆಧಾರದಲ್ಲಿ ಯಾವುದೇ ರಾಜಕೀಯ ನಾಯಕರ ಮಕ್ಕಳಿಗೆ ಟಿಕೆಟ್‌ ಇಲ್ಲ ಎಂಬ ಅಲಿಖಿತ ನಿಯಮವನ್ನು ಬಿಜೆಪಿ ಪಾಲಿಸಿದೆ. ಹೀಗಿರುವಾಗ ಅದು ಪರ್ರಿಕರ್‌ ಪುತ್ರಗೆ ಟಿಕೆಟ್‌ ನೀಡಲು ಮುಂದಾಗಿರುವ ಸುದ್ದಿ ಸಾಕಷ್ಟುಅಚ್ಚರಿಗೆ ಕಾರಣವಾಗಿವೆ.

ಈ ನಡುವೆ ದಿ.ಮನೋಹರ ಪರ್ರಿಕರ್‌ ಅವರ ಚಿತಾಭಸ್ಮವನ್ನು ರಾಜ್ಯದ ಎಲ್ಲ 40 ವಿಧಾನಸಭಾ ಕ್ಷೇತ್ರಗಳ ಮೂಲಕ ನದಿಯಲ್ಲಿ ವಿಸರ್ಜನೆ ಮಾಡುವುದಾಗಿ ರಾಜ್ಯ ಬಿಜೆಪಿ ಅಧ್ಯಕ್ಷ ವಿನಯ್‌ ತೆಂಡೂಲ್ಕರ್‌ ಹೇಳಿದ್ದಾರೆ.

click me!