ವಾಯುಸೇನೆ ಅಧಿಕಾರಿಗಳು ಧರ್ಮದ ಆಧಾರದ ಮೇಲೆ ಗಡ್ಡ ಬಿಡುವಂತಿಲ್ಲ: ಸುಪ್ರೀಂಕೋರ್ಟ್

By Suvarna Web DeskFirst Published Dec 15, 2016, 10:48 AM IST
Highlights

ಭಾರತೀಯ ವಾಯುಸೇನೆಯಲ್ಲಿ ಕೆಲಸ ಮಾಡುವವರು ಧರ್ಮದ ಆಧಾರದ ಮೇಲೆ ಗಡ್ಡವನ್ನು ಬಿಡುವಂತಿಲ್ಲ ಎಂದು ಸುಪ್ರೀಂಕೊರ್ಟ್ ಇಂದು ತೀರ್ಪು ನೀಡಿದೆ.

ನವದೆಹಲಿ (ಡಿ.15):  ಭಾರತೀಯ ವಾಯುಸೇನೆಯಲ್ಲಿ ಕೆಲಸ ಮಾಡುವವರು ಧರ್ಮದ ಆಧಾರದ ಮೇಲೆ ಗಡ್ಡವನ್ನು ಬಿಡುವಂತಿಲ್ಲ ಎಂದು ಸುಪ್ರೀಂಕೊರ್ಟ್ ಇಂದು ತೀರ್ಪು ನೀಡಿದೆ.

ವಾಯುಸೇನೆಯ ಶಿಸ್ತು ಹಾಗೂ ಏಕರೂಪತೆ ದೃಷ್ಟಿಯಿಂದ ಈ ತೀರ್ಪು ನೀಡಲಾಗಿದೆ ಎಂದು ಸರ್ವೋಚ್ಚ ನ್ಯಾಯಾಲಯ ಹೇಳಿದೆ.

ನಿರ್ದಿಷ್ಟ ಸಮುದಾಯಕ್ಕೆ ಸೇರಿದ ಸಿಬ್ಬಂದಿಗಳು ಗಡ್ಡ ಬಿಡುವುದನ್ನು ಕೇಂದ್ರ ಸರ್ಕಾರ ನಿಷೇಧಿಸಿದೆ. ಕೇಂದ್ರದ ಈ ನಿರ್ಧಾರ ಮೂಲಭೂತ ಹಕ್ಕುಗಳ ಉಲ್ಲಂಘನೆಯಾಗುವುದಿಲ್ಲ ಎಂದು ಮುಖ್ಯ ನ್ಯಾ. ಟಿ.ಎಸ್ ಠಾಕೂರ್ ಹೇಳಿದ್ದಾರೆ.

ತಾವು ಸಲ್ಲಿಸಿದ ಅರ್ಜಿಯನ್ನು ದೆಹಲಿ ನ್ಯಾಯಾಲಯ ತಳ್ಳಿ ಹಾಕಿರುವುದನ್ನು ಪ್ರಶ್ನಿಸಿ ಐಎಎಫ್ ನ ಇಬ್ಬರು ಸಿಬ್ಬಂದಿಗಳು ಪ್ರತ್ಯೇಕವಾಗಿ ಸುಪ್ರೀಂಗೆ ಅರ್ಜಿ ಸಲ್ಲಿಸಿದ್ದರು.

ಸೇವೆಯಿಂದ ಬಿಡುಗಡೆಯಾಗಿರುವ ಅರ್ಜಿದಾರ ಅನ್ಸಾರಿ ಅಫ್ತಬ್ ಅಹ್ಮದ್,  ಗಡ್ಡ ಬಿಡುವುದು ನನ್ನ ಧಾರ್ಮಿಕ ಸ್ವಾತಂತ್ರ್ಯದ ಭಾಗವಾಗಿದ್ದು ಮೂಲಭೂತ ಹಕ್ಕಾಗಿದೆ. ಸಿಖ್ಖರಿಗೆ ಕೂದಲು ಕತ್ತರಿಸದಿರಲು ಹಾಗೂ ಪೇಟ ಕಟ್ಟಲು ಅವಕಾಶ ನೀಡಲಾಗಿದೆ. ಹಾಗೆಯೇ ನಮಗೂ ಅವಕಾಶ ನೀಡಿ ಎಂದು ಒತ್ತಾಯಿಸಿದ್ದಾರೆ.

ವಕೀಲ ಇರ್ಶದ್, ಈ ಸಂಬಂಧ ಅಂತಿಮ ವಿಚಾರಣೆ ನಡೆಸಲು ದಿನಾಂಕವನ್ನು ನಿಗದಿ ಮಾಡಿ ಎಂದು ನ್ಯಾಯಾಲಯಕ್ಕೆ ಕೇಳಿದ್ದಾರೆ.

 

click me!