ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ಹೈಕಮಾಂಡ್ ನಿರ್ಧಾರಕ್ಕೆ ಬದ್ಧ :ಮುನಿಯಪ್ಪ

First Published Jun 13, 2018, 1:12 PM IST
Highlights

ಕೆಪಿಸಿಸಿ‌ ವಿಚಾರದಲ್ಲಿ ನಾನು ಹೈಕಮಾಂಡ್ ನಿರ್ಧಾರಕ್ಕೆ ಬದ್ದನಾಗಿದ್ದೇನೆ. ಮೊನ್ನೆ ಸಂಸದರ ಸಭೆಯಲ್ಲಿ ಕೆಲವರು ನನ್ನ ಹೆಸರು ಸೂಚಿಸಿದ್ದಾರೆ.  ನನಗೆ ಅವಕಾಶ ನೀಡಿದ್ರೆ ಸಮರ್ಥವಾಗಿ ಕೆಲಸ ಮಾಡ್ತೀನಿ.  ನಾನು ಸಂಸತ್ತಿಗೆ ಸ್ವರ್ಧೆ ಮಾಡದೆ ಕೆಪಿಸಿಸಿ ಅಧ್ಯಕ್ಷ ನಾಗಿ ಕೆಲಸ ಮಾಡ್ತೀನಿ.  ಕೆಪಿಸಿಸಿ ಅಧ್ಯಕ್ಷ ಸ್ಥಾನ ಕೊಡದಿದ್ರೆ ಸಂಸತ್ತಿಗೆ ಸ್ವರ್ಧೆ ಮಾಡ್ತೀನಿ ಎಂದು ಮುನಿಯಪ್ಪ ಹೇಳಿದ್ದಾರೆ. 

ಬೆಂಗಳೂರು (ಜೂ. 13): ಕೆಪಿಸಿಸಿ‌ ವಿಚಾರದಲ್ಲಿ ನಾನು ಹೈಕಮಾಂಡ್ ನಿರ್ಧಾರಕ್ಕೆ ಬದ್ದನಾಗಿದ್ದೇನೆ. ಮೊನ್ನೆ ಸಂಸದರ ಸಭೆಯಲ್ಲಿ ಕೆಲವರು ನನ್ನ ಹೆಸರು ಸೂಚಿಸಿದ್ದಾರೆ.  ನನಗೆ ಅವಕಾಶ ನೀಡಿದ್ರೆ ಸಮರ್ಥವಾಗಿ ಕೆಲಸ ಮಾಡ್ತೀನಿ.  ನಾನು ಸಂಸತ್ತಿಗೆ ಸ್ವರ್ಧೆ ಮಾಡದೆ ಕೆಪಿಸಿಸಿ ಅಧ್ಯಕ್ಷ ನಾಗಿ ಕೆಲಸ ಮಾಡ್ತೀನಿ.  ಕೆಪಿಸಿಸಿ ಅಧ್ಯಕ್ಷ ಸ್ಥಾನ ಕೊಡದಿದ್ರೆ ಸಂಸತ್ತಿಗೆ ಸ್ವರ್ಧೆ ಮಾಡ್ತೀನಿ ಎಂದು ಮುನಿಯಪ್ಪ ಹೇಳಿದ್ದಾರೆ. 

ಈ ಹಿಂದೆ ಸೋನಿಯಾ ಗಾಂಧಿ ಎರಡು ಬಾರಿ ನನ್ನ ಹೆಸರು ಸೂಚಿಸಿದ್ರು. ಕಾರಾಣಾಂತರಗಳಿಂದ ಅದು ಸಾಧ್ಯವಾಗಲಿಲ್ಲ.  ಕಾಂಗ್ರಸ್’ನಲ್ಲಿ ಎಲ್ಲರಿಗೂ ಅವಕಾಶ ನೀಡುತ್ತಾರೆ.  ನಮಗೂ ಅವಕಾಶ ಕೊಟ್ಟರೆ ಸಮರ್ಥವಾಗಿ ಕೆಲಸ ಮಾಡ್ತೀವಿ.  ನನ್ನ ಹೊರತುಪಡಿಸಿ ಯಾರಿಗೆ ಕೆಪಿಸಿಸಿ ಅಧ್ಯಕ್ಷ ಸ್ಥಾನ ಕೊಟ್ಟರೂ ನಮ್ಮ‌ ವಿರೋಧ ಇಲ್ಲ.  ಬಿ.ಕೆ ಹರಿಪ್ರಸಾದ್, ಮಾಜಿ ಸಿಎಂ ಸಿದ್ದರಾಮಯ್ಯ, ದಿನೇಶ ಗುಂಡೂರಾವ್ ಗೂ ಅವಕಾಶ ಕೊಟ್ರು ನಮ್ಮ‌ಅಭ್ಯಂತರ ಇಲ್ಲ ಎಂದು ಮುನಿಯಪ್ಪ ಹೇಳಿದ್ದಾರೆ. 

click me!