ಬಾಬ್ರಿ ಧ್ವಂಸದಲ್ಲಿ ನನ್ನ ಪಾತ್ರವಿದೆ ಆಡ್ವಾಣಿ ಅವರದ್ದಿಲ್ಲ

Published : Apr 21, 2017, 06:23 PM ISTUpdated : Apr 11, 2018, 12:49 PM IST
ಬಾಬ್ರಿ ಧ್ವಂಸದಲ್ಲಿ ನನ್ನ ಪಾತ್ರವಿದೆ ಆಡ್ವಾಣಿ ಅವರದ್ದಿಲ್ಲ

ಸಾರಾಂಶ

25 ವರ್ಷಗಳ ಹಿಂದೆ ಬಾಬ್ರಿ ಮಸೀದಿ ಧ್ವಂಸ ಮಾಡಲು ಮುಂದಾಗಿದ್ದ ಕರಸೇವಕರನ್ನು ಸಮಾಧಾನಪಡಿಸಲು ಎಲ್.ಕೆ.ಅಡ್ವಾಣಿ ಮುಂದಾಗಿದ್ದರು. ಆದರೆ, ಮಸೀದಿ ಧ್ವಂಸಗೊಳಿಸುವಂತೆ ಕರ ಸೇವಕರಿಗೆ ಉತ್ತೇಜನ ನೀಡಿದ್ದು ನಾನು ಎಂದು ವೇದಾಂತಿ ಹೇಳಿದ್ದಾರೆ. ಶುಕ್ರವಾರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ‘ಬಾಬ್ರಿ ಮಸೀದಿ ಧ್ವಂಸ ಪ್ರಕರಣದಲ್ಲಿ ಅಡ್ವಾಣಿ ಅವರ ಪಾತ್ರವಿಲ್ಲ. ಮಸೀದಿಯನ್ನು ಸಂಪೂರ್ಣವಾಗಿ ನೆಲಸಮ ಮಾಡಲಾಗಿದೆಯೇ ಎಂಬುದನ್ನು ಖಾತ್ರಿ ಪಡಿಸಿಕೊಂಡದ್ದು ಸಹ ನಾನೇ’ ಎಂದು ಹೇಳಿದ್ದಾರೆ.

ಲಖನೌ(ಏ.21): ಬಾಬ್ರಿ ಮಸೀದಿ ಧ್ವಂಸ ಪ್ರಕರಣ ಸಂಬಂಧ ಸುಪ್ರೀಂ ಕೋರ್ಟ್ ಹಿರಿಯ ನಾಯಕರಾದ ಎಲ್.ಕೆ. ಅಡ್ವಾಣಿ, ಮುರಳಿ ಮನೋಹರ ಜೋಷಿ, ಕೇಂದ್ರ ಸಚಿವೆ ಉಮಾ ಭಾರತಿ ಸೇರಿ ಒಟ್ಟು 13 ಬಿಜೆಪಿ ನಾಯಕರ ವಿರುದ್ಧ ಕ್ರಿಮಿನಲ್ ಸಂಚು ಆರೋಪ ಆದೇಶ ಜಾರಿ ಮಾಡಿದೆ. ಮಸೀದಿ ಧ್ವಂಸ ಪಡಿಸುವಲ್ಲಿ ಎಲ್.ಕೆ.ಅಡ್ವಾಣಿ ಅವರ ಪಾತ್ರ ಏನೂ ಇಲ್ಲ ಎಂದು ಉತ್ತರಪ್ರದೇಶದ ಮಾಜಿ ಬಿಜೆಪಿ ಶಾಸಕ ರಾಮ್ ವಿಲಾಸ್ ವೇದಾಂತಿ ಹೇಳಿದ್ದಾರೆ.

25 ವರ್ಷಗಳ ಹಿಂದೆ ಬಾಬ್ರಿ ಮಸೀದಿ ಧ್ವಂಸ ಮಾಡಲು ಮುಂದಾಗಿದ್ದ ಕರಸೇವಕರನ್ನು ಸಮಾಧಾನಪಡಿಸಲು ಎಲ್.ಕೆ.ಅಡ್ವಾಣಿ ಮುಂದಾಗಿದ್ದರು. ಆದರೆ, ಮಸೀದಿ ಧ್ವಂಸಗೊಳಿಸುವಂತೆ ಕರ ಸೇವಕರಿಗೆ ಉತ್ತೇಜನ ನೀಡಿದ್ದು ನಾನು ಎಂದು ವೇದಾಂತಿ ಹೇಳಿದ್ದಾರೆ. ಶುಕ್ರವಾರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ‘ಬಾಬ್ರಿ ಮಸೀದಿ ಧ್ವಂಸ ಪ್ರಕರಣದಲ್ಲಿ ಅಡ್ವಾಣಿ ಅವರ ಪಾತ್ರವಿಲ್ಲ. ಮಸೀದಿಯನ್ನು ಸಂಪೂರ್ಣವಾಗಿ ನೆಲಸಮ ಮಾಡಲಾಗಿದೆಯೇ ಎಂಬುದನ್ನು ಖಾತ್ರಿ ಪಡಿಸಿಕೊಂಡದ್ದು ಸಹ ನಾನೇ’ ಎಂದು ಹೇಳಿದ್ದಾರೆ.

1992ರ ಡಿ.6ರಂದು ಬಾಬ್ರಿ ಮಸೀದಿ ಕೆಡವಲು ಅಡ್ವಾಣಿ ಅಥವಾ ಇತರೆ ಬಿಜೆಪಿ ನಾಯಕರ‌್ಯಾರು ಕರಸೇವಕರಿಗೆ ಉತ್ತೇಜನ ನೀಡಲಿಲ್ಲ. ಆದರೆ, ಆ ಕೆಲಸವನ್ನು ಅಶೋಕ್ ಸಿಂಘಲ್, ಗೋರಖ್‌ಪುರ ದೇವಸ್ಥಾನದ ಮೊಹಂತ ಅವೈದ್ಯನಾಥ್ ಮತ್ತು ನಾನು ವಿಶ್ವ ಹಿಂದೂ ಪರಿಷತ್‌ನ ಕಾರ್ಯಕರ್ತರಿಗೆ ಉತ್ತೇಜನ ನೀಡುವ ಮೂಲಕ ಮಸೀದಿ ನೆಲಸಮವಾಗುವಂತೆ ಮಾಡಿದ್ದೆವು ಎಂದು ಹೇಳಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಲಕ್ಕುಂಡಿ ಉತ್ಖನನ: ನಾಗ ಮಣಿಯೊಂದಿಗೆ ಇರುವ ಸರ್ಪದ ಹೆಡೆ ಪತ್ತೆ! ಹಾವು ಪ್ರತ್ಯಕ್ಷವಾಗಿ ನಿಧಿ ಇರೋ ಸೂಚನೆ ಕೊಡ್ತಾ?
BBK 12: ಗಿಲ್ಲಿಯೇ ಬಿಗ್ ಬಾಸ್ ಗೆಲ್ಲೋದಕ್ಕೆ 100% ಕಾರಣ ಏನು? ಈ ಸೀಕ್ರೆಟ್ ಈಗ ಬಹಿರಂಗ ಆಯ್ತು!