ರಾಜಕೀಯಕ್ಕೆ ಯದುವೀರ್, ಪ್ರಮೋದಾ ದೇವಿ ಏನಂದ್ರು?

By Ramesh BFirst Published Sep 16, 2018, 2:59 PM IST
Highlights

ಮೈಸೂರು ರಾಜವಂಶಸ್ಥೆ ಪ್ರಮೋದಾ ದೇವಿ ಒಡೆಯರ್ ರಾಜಕೀಯ ಪ್ರವೇಶ ಮಾಡುತ್ತಾರೆ ಎಂಬ ಊಹಾಪೋಹಾಕ್ಕೆ ತೆರೆಬಿದ್ದಿದೆ. ಸ್ವತಃ ಪ್ರಮೋದಾ ದೇವಿ ಅವರೇ ತೆರೆ ಎಳೆದಿದ್ದಾರೆ. 

ಮೈಸೂರು, (ಸೆ.16):  ಮೈಸೂರು ರಾಜವಂಶಸ್ಥೆ ಪ್ರಮೋದಾ ದೇವಿ ಒಡೆಯರ್ ರಾಜಕೀಯ ಪ್ರವೇಶ ಮಾಡುತ್ತಾರೆ ಎಂಬ ಊಹಾಪೋಹಾಕ್ಕೆ ತೆರೆಬಿದ್ದಿದೆ. ಸ್ವತಃ ಪ್ರಮೋದಾ ದೇವಿ ಅವರೇ ತೆರೆ ಎಳೆದಿದ್ದಾರೆ. 

ಈ ಬಗ್ಗೆ ಮೈಸೂರಿನಲ್ಲಿ ಮಾತನಾಡಿದ ಪ್ರಮೋದಾ ದೇವಿ, ಜನಸೇವೆ ಮಾಡಲು ರಾಜಕೀಯಕ್ಕೆ ಬರುವ ಅವಶ್ಯಕತೆ ಇಲ್ಲ. ಅಮಿತ್ ಶಾ ಚುನಾವಣೆ ಸಂದರ್ಭದ ಭೇಟಿ ಮುನ್ನ ತುಂಬಾ ಮಂದಿ ಭೇಟಿ ಮಾಡಿದ್ದರು. ಆದರೆ, ಯಾವುದೆ ಕಾರಣಕ್ಕೂ ರಾಜಕೀಯ ಪ್ರವೇಶ ಇಲ್ಲ ಎಂದು ಸ್ಪಷ್ಟಪಡಿಸಿದರು. ಇನ್ನು ಯದುವೀರ್ ರಾಜಕೀಯ ಪ್ರವೇಶ ವಿಚಾರದ ಬಗ್ಗೆ ಪ್ರತಿಕ್ರಿಯಿಸಿದ ಪ್ರಮೋದ ದೇವಿ, ಯದುವೀರ್ ರಾಜಕೀಯ ಸೇರಿರುವುದು ಅವರ ವೈಯಕ್ತಿಕ ವಿಚಾರ ಎಂದರು. 

ಸರ್ಕಾರ ಮಾಡುವುದು ದಸರಾ ಅಲ್ಲಾ ನಾಡಹಬ್ಬ. ನಾವು ಮಾಡುವುದು ದಸರಾ. ನವರಾತ್ರಿ ಹಬ್ಬವನ್ನ ದಸರಾ ಎಂದು ಕರೆಯಲಾಗುತ್ತೆ. ಆದ್ರೆ ಸರ್ಕಾರ ಯಾಕೆ ದಸರಾ ಎಂದು ಹೆಸರಿಟ್ಟಿದೆ  ಅದನ್ನ ಅವರನ್ನೇ ಕೆಳಬೇಕು ಎಂದು ಪ್ರಮೋದದೇವಿ ಒಡೆಯರ್ ಸರ್ಕಾರದ ವಿರುದ್ದ ಪರೋಕ್ಷವಾಗಿ ಆಕ್ರೋಶ ವ್ಯಕ್ತಪಡಿಸಿದರು.

click me!