ಬೋರ್ ವೆಲ್ ಕೊರೆಸುವವರಿಗೆ ಶಾಕ್!

By Web DeskFirst Published Sep 16, 2018, 2:41 PM IST
Highlights

ಬೋರ್ ವೆಲ್ ಕೊರೆಸುವ ಗ್ರಾಹಕರಿಗೆ ಶಾಕ್ ನ್ಯೂಸ್ ಇಲ್ಲಿದೆ.  ಬೋರ್ ವೆಲ್ ಕೊರೆಸುವ ದರದ ಮೇಲೆ ಶೇಕಡಾ 10ರಷ್ಟು ಹೆಚ್ಚಳ ಮಾಡಲು ಬೋರ್ ವೆಲ್ ಅಸೋಸಿಯೇಷನ್ ನಿರ್ಧಾರ ಮಾಡಿದೆ. 

ಬೆಂಗಳೂರು : ಬೋರ್ ವೆಲ್ ಕೊರೆಸುವ ಗ್ರಾಹಕರಿಗೆ ಶಾಕಿಂಗ್ ನ್ಯೂಸ್ ಇಲ್ಲಿದೆ.  ಬೋರ್ ವೆಲ್ ಕೊರೆಸುವ ದರದ ಮೇಲೆ ಇನ್ನುಮುಂದೆ ಶೇಕಡಾ 10ರಷ್ಟು ಹೆಚ್ಚಿನ ಹೊರೆ ಬೀಳಲಿದೆ. 

ಡೀಸೆಲ್ ದರ ಏರಿಕೆ ಹಿನ್ನೆಲೆಯಲ್ಲಿ ಕರ್ನಾಟಕ ರಿಗ್ ಓನರ್ಸ್ ಅಸೋಸಿಯೇಷನ್ ಹಾಗೂ ತಮಿಳುನಾಡು ರಿಗ್ ಓನರ್ಸ್ ಅಸೋಸಿಯೇಷನ್ ವತಿಯಿಂದ ದರ ಏರಿಕೆ ನಿರ್ಧಾರ ಕೈಗೊಳ್ಳಲಾಗಿದೆ. 

ಕೆಂಗೇರಿ ಉಪನಗರ, ವಿಶ್ವೇಶ್ವರಯ್ಯ ಬಡಾವಣೆಯಲ್ಲಿ ರಾಜ್ಯ ಮಟ್ಟದ ಪ್ರತಿಭಟನೆಯಲ್ಲಿ ಭಾಗಿಯಾದ ಓನರ್ಸ್ ಸಂಘ- ಸುಮಾರು 520 ಕ್ಕೂ ಹೆಚ್ಚು ಬೋರ್ ವೆಲ್ ಲಾರಿಗಳನ್ನ ಮೈದಾನದಲ್ಲಿ ನಿಲ್ಲಿಸಿ ಪ್ರತಿಭಟನೆ ನಡೆಸಿದೆ. 

ರಾಜ್ಯದ ಎಲ್ಲಾ ಬೋರ್ ವೆಲ್ ನೌಕರರು ಹಾಗೂ ಸಿಬ್ಬಂದಿಗಳು ಈ ಪ್ರತಿಭಟನೆಯಲ್ಲಿ ಭಾಗಿಯಾಗಿದ್ದು,  ಈ ಹಿಂದೆ ಒಂದು ಅಡಿ ಬೋರ್ ವೆಲ್ ಕೊರೆಯುವ ವೆಚ್ಚ 75 ರೂಪಾಯಿ ಇತ್ತು. ಇದೀಗ 25 ರೂಪಾಯಿ ಹೆಚ್ಚಳ ಮಾಡಲು ಈ ವೇಳೆ ನಿರ್ಧಾರ ಮಾಡಲಾಗಿದೆ. 

ಇಡೀ ರಾಜ್ಯದ ಬೋರ್ ಯಂತ್ರಗಳ ಮಾಲೀಕರ ಒಮ್ಮತದ ಮೇರೆಗೆ ನಿರ್ಧಾರ ಮಾಡಲಾಗಿದೆ. ಇದರಿಂದ ಶೇ. 10ರಷ್ಟು ಹಣದ ಹೊರೆ ಬೀಳುತ್ತದೆ.  25 ರು. ಹೆಚ್ಚಳದಿಂದ ಒಂದು ಅಡಿಗೆ ನೂರು ರೂಪಾಯಿ ಹಣ ನೀಡಬೇಕಾಗುತ್ತದೆ ಎಂದಿದ್ದು ಈ ಬಗ್ಗೆ  ಸರ್ಕಾರಕ್ಕೆ ಮನವಿ ಸಲ್ಲಿಸಲು ಬೋರ್ ವೆಲ್ ಅಸೋಸಿಯೇಷನ್ ಮುಖಂಡರು ನಿರ್ಧರಿಸಿದ್ದಾರೆ. 

click me!