ತಾವು ಯಾವುದೇ ಹುದ್ದೆ ಆಕಾಂಕ್ಷಿಯಲ್ಲ : ಡಿ.ಎಚ್. ಶಂಕರಮೂರ್ತಿ

First Published Jun 8, 2018, 12:20 PM IST
Highlights

ನಾನು ಯಾವುದೇ ಪದವಿಗೆ ಅಥವಾ ಹುದ್ದೆಗೆ ಆಕಾಂಕ್ಷಿ ಅಲ್ಲ ಆದರೆ ಪಕ್ಷ ರಾಜ್ಯಪಾಲರ ಹುದ್ದೆ ನೀಡಿದರೆ ನಿರ್ವಹಿಸಲು ಸಿದ್ದ ಎಂದು ಸಭಾಪತಿ ಡಿ.ಹೆಚ್.ಶಂಕರ ಮೂರ್ತಿ ಹೇಳಿದ್ದಾರೆ.

ಶಿವಮೊಗ್ಗ :  ನಾನು ಯಾವುದೇ ಪದವಿಗೆ ಅಥವಾ ಹುದ್ದೆಗೆ ಆಕಾಂಕ್ಷಿ ಅಲ್ಲ ಆದರೆ ಪಕ್ಷ ರಾಜ್ಯಪಾಲರ ಹುದ್ದೆ ನೀಡಿದರೆ ನಿರ್ವಹಿಸಲು ಸಿದ್ಧ ಎಂದು ಸಭಾಪತಿ ಡಿ.ಹೆಚ್.ಶಂಕರ ಮೂರ್ತಿ ಹೇಳಿದ್ದಾರೆ.

ಈ ಸಂಬಂಧ ಶಿವಮೊಗ್ಗದ ಬಾಲರಾಜ್ ಅರಸ್ ರಸ್ತೆಯಲ್ಲಿನ ಪಿಡಬ್ಲೂಡಿ  ಕಚೇರಿಯಲ್ಲಿ ನೈರುತ್ಯ ಪದವಿಧರ ಹಾಗೂ ಶಿಕ್ಷಕರ ಕ್ಷೇತ್ರದ ಚುನಾವಣೆಯಲ್ಲಿ ಮತದಾನ ಮಾಡಿ ನಂತರ ಮಾತನಾಡಿದ ಅವರು ಈ ವಿಚಾರ ತಿಳಿಸಿದ್ದಾರೆ. 

ಜುಲೈನಲ್ಲಿ ತಮ್ಮ ಸಭಾಪತಿ ಅವಧಿ ಮುಗಿಯಲಿದೆ. ಈ ಬಾರಿ ಮತದಾನ ಪ್ರಕ್ರಿಯೆಯಲ್ಲಿ ತಾವು ಭಾಗಿ ಆಗುವುದಿಲ್ಲ ಎಂದು ಹೇಳಿದ್ದು ಅದರಂತೆ ನಡೆದುಕೊಂಡಿದ್ದೇನೆ ಎಂದಿದ್ದಾರೆ.

ಆದರೆ ಸಾರ್ವಜನಿಕ ಕ್ಷೇತ್ರ ಮತ್ತು ರಾಜಕೀಯ ನಿವೃತ್ತಿ ಘೋಷಿಸಿರಲಿಲ್ಲ. ಪಕ್ಷ ರಾಜ್ಯಪಾಲರ ಹುದ್ದೆಗೆ ಆಯ್ಕೆ ಮಾಡಿದಲ್ಲಿ ನಿರ್ವಹಿಸಲು ಸಿದ್ಧರಿದ್ದು, ಯೋಜನಾ ಆಯೋಗದ ಅಧ್ಯಕ್ಷ, ವಿಪಕ್ಷ ನಾಯಕನಾಗಿ ಈಗ ಸಭಾಪತಿಯಾಗಿ ಕೆಲಸ ನಿರ್ವಹಿಸಿದ್ದೇನೆ. ಪಕ್ಷ ನೀಡಿದ ಎಲ್ಲಾ ಹುದ್ದೆಯನ್ನ ಅತ್ಯಂತ ಜವಬ್ದಾರಿಯುತವಾಗಿ ನಿರ್ವಹಿಸಿದ್ದೇನೆ ಎಂದು ಹೇಳಿದ್ದಾರೆ. 

ನೈರುತ್ಯ ಪದವೀಧರ ಕ್ಷೇತ್ರಕ್ಕೆ ನಾನು 9ನೇ ಬಾರಿ ಮತದಾನ ಮಾಡುತ್ತಿದ್ದು, ಕಳೆದ ನಾಲ್ಕು ಬಾರಿ ಜನಸಂಘ ಹಾಗೂ ನಂತರ ಬಿಜೆಪಿ ಅಭ್ಯರ್ಥಿಗೆ ಮತ ಚಲಾಯಿಸಿದ್ದೆ.  ಇದಾದನಂತರ ನಾನೇ ಅಭ್ಯರ್ಥಿ 5 ಬಾರಿ ಅಭ್ಯರ್ಥಿಯಾಗಿ ಕಣದಲ್ಲಿ ಸ್ಪರ್ಧಿಸಿ ಗೆದ್ದಿದ್ದೇನೆ ಎಂದು ಶಂಕರ ಮೂರ್ತಿ ಈ ವೇಳೆ ಹೇಳಿದ್ದಾರೆ. 

click me!